Indian Army

Budgam encounter: LET ಮೋಸ್ಟ್ ವಾಂಟೆಡ್ ಉಗ್ರ ಹಾಶಿಮ್ ಮೂಸಾ ಹತ; Video
ಕಾಶ್ಮೀರದ ಯೂಸ್ಮಾರ್ಗ್‌ನ ಕೊರಾಗ್ ಪ್ರದೇಶದಲ್ಲಿ ಇತರ ಭದ್ರತಾ ಪಡೆಗಳೊಂದಿಗೆ ಸೇನೆ ಕಾರ್ಯಾಚರಣೆ ಆರಂಭಿಸಲಾಗಿದ್ದು, ಈ ವೇಳೆ ಭದ್ರತಾ ಪಡೆಗಳು ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿ, ಉಗ್ರರಿಗೆ ಶರಣಾಗುವಂತೆ ಸೂಚಿಸಿದಾಗ ಅವರು ಗುಂಡಿನ ದಾಳಿ ನಡೆಸಿದರು.

ಮಳೆ, 15,500 ಅಡಿ ಎತ್ತರದಲ್ಲಿ ಸೇನಾ ಕಾರ್ಯಾಚರಣೆ; ಪಾಕ್ ಉಗ್ರನ ಬೇಟೆ, 3 ಪ್ರಮುಖ ದಾಳಿಗಳಲ್ಲಿ ಶಾಮೀಲಾಗಿದ್ದ Yasir ಹತ
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆ ಮತ್ತು ಜಮ್ಮು ವಲಯದ ಪೂಂಚ್ ಜಿಲ್ಲೆಯ ಗಡಿಗಳ ಸಮೀಪವಿರುವ ಪಿರ್ ಪಂಜಾಲ್ ಪರ್ವತ ಶ್ರೇಣಿಯ ಎತ್ತರದ ಪ್ರದೇಶಗಳಲ್ಲಿ ನಿನ್ನೆ ಸೇನೆ ಮತ್ತು ಉಗ್ರರ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿತ್ತು.

ಭಾರತದ ಹೊಸ ಶಕ್ತಿ ಪ್ರದರ್ಶನ: ಜೆಟ್ ಚಾಲಿತ ಸ್ವದೇಶಿ 'ದಿವ್ಯಾಸ್ತ್ರ Mk3' ಮೊದಲ ಪರೀಕ್ಷೆ ಯಶಸ್ವಿ! Video
ವಿದೇಶಿ ಪ್ರಮುಖ ಉಪವ್ಯವಸ್ಥೆ ಇಲ್ಲ. ಭಾರತದಲ್ಲೇ ನಿರ್ಮಾಣ. ಭಾರತದಲ್ಲೇ ಹಾರಾಟ. ದಿವ್ಯಾಸ್ತ್ರ Mk3 ವೇಗ, ಬುದ್ಧಿವಂತಿಕೆ ಮತ್ತು ಯಾವುದೇ ರಾಜಿಯಿಲ್ಲದ ಸಾಮರ್ಥ್ಯ. ಇದು ಕೇವಲ ಹಾರಾಟವಲ್ಲ. ಇದು ಆತ್ಮನಿರ್ಭರ ಭಾರತ..

Operation Sheruwali ವೇಳೆ ದುರಂತ; ಬಂಡೆ ಮೇಲೆ ಕಾಲಿಟ್ಟು ಜಾರಿ ಬಿದ್ದು ಯೋಧ ಆಕಸ್ಮಿಕ ಸಾವು
ಲೆಫ್ಟಿನೆಂಟ್ ಬೀರೇಶ್ವರ್ ಗೋಸ್ವಾಮಿ ಸಾವನ್ನಪ್ಪಿದ ಯೋಧ. ಗಂಭೀರ್ ಮುಘ್ಲಾನ್-ಡೋರಿಮಲ್ ಪ್ರದೇಶದ ದುರ್ಗಮ ಪರ್ವತ ಪ್ರದೇಶದಲ್ಲಿ ಉಗ್ರರ ವಿರುದ್ಧದ ಶೋಧ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಇವರು, ಇಳಿಜಾರಿನಲ್ಲಿ ಸಾಗುತ್ತಿದ್ದ ವೇಳೆ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ.

ಭಾರತ ಯಾವುದನ್ನೂ ಮರೆಯುವುದಿಲ್ಲ, ಗಡಿ ದಾಟಿದರೆ ತಕ್ಕ ಪ್ರತ್ಯುತ್ತರ: ಆಪರೇಷನ್ ಸಿಂಧೂರ್ ಸ್ಮರಿಸಿ ಶತ್ರುಗಳಿಗೆ ಎಚ್ಚರಿಕೆ ಕೊಟ್ಟ ಭಾರತೀಯ ಸೇನೆ..!
ಕೆಲವು ಗೆರೆಗಳನ್ನು ಎಂದಿಗೂ ದಾಟಬಾರದು. ಭಾರತ ಇದನ್ನು ಮರೆಯುವುದಿಲ್ಲ, ದೇಶದ ಮೇಲೆ, ಅಮಾಯಕ ಜನರ ಮೇಲೆ ದಾಳಿ ಮಾಡಿದರೆ ಭಾರತ ಮೌನವಾಗಿರುವುದಿಲ್ಲ, ತಕ್ಕ ಉತ್ತರ ನೀಡುತ್ತದೆ.

Operation Trashi-I ಯಶಸ್ವಿ: ಎನ್‌ಕೌಂಟರ್‌ನಲ್ಲಿ JEM ಉಗ್ರ ಸೈಫುಲ್ಲಾ ಹತ; 326 ದಿನಗಳ ಕಾರ್ಯಾಚರಣೆ ಅಂತ್ಯ; Video
ಪೊಲೀಸ್, ಸಿಆರ್‌ಪಿಎಫ್ ಮತ್ತು ಸೇನೆಪಡೆಗಳು ಕಿಶ್ತ್ವಾರ್‌ನ ಛತ್ರೂ ಅರಣ್ಯದ ಪಾಸರ್‌ಕುಟ್ ಪ್ರದೇಶದಲ್ಲಿ ಆಪರೇಷನ್ ಟ್ರಾಶಿ-I ಕಾರ್ಯಾಚರಣೆ ಆರಂಭಿಸಿತ್ತು, ಭಾನುವಾರ ನಡೆದ ಎನ್‌ಕೌಂಟರ್‌ನಲ್ಲಿ ಜೆಇಎಂ ಟಾಪ್ ಕಮಾಂಡರ್ ಸೈಫುಲ್ಲಾ ಸೇರಿದಂತೆ ಮೂವರು ಪಾಕಿಸ್ತಾನಿ ಉಗ್ರರನ್ನು ಹತ್ಯೆ ಮಾಡಿದೆ.

ಪುಲ್ವಾಮಾ ದಾಳಿಗೆ 7 ವರ್ಷ: 40 ಯೋಧರ ಬಲಿದಾನ; ಆ 'ಕರಾಳ ದಿನ' ನಡೆದದ್ದೇನು? ಭಾರತ ಪ್ರತಿಕ್ರಿಯಿಸಿದ್ದು ಹೇಗೆ?
ರಜೆ ಮುಗಿಸಿ ಕರ್ತವ್ಯಕ್ಕೆ ಮರಳುತ್ತಿದ್ದ ಯೋಧರು ಸೇರಿದಂತೆ ಒಟ್ಟು 2547 ಸಿಆರ್‌ಪಿಎಫ್ ಯೋಧರು 78 ವಾಹನಗಳಲ್ಲಿ ಜಮ್ಮುವಿನಿಂದ ಶ್ರೀನಗರಕ್ಕೆ ಪ್ರಯಾಣಿಸುತ್ತಿದ್ದರು. ಆಗಲೇ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಬಳಿ ಈ ಭೀಕರ ದಾಳಿ ನಡೆಯಿತು.

Operation KIYA: ಉಧಂಪುರದಲ್ಲಿ ಎನ್ಕೌಂಟರ್; ಗುಹೆಯಲ್ಲಿ ಅಡಗಿ ಕುಳಿತಿದ್ದ ಇಬ್ಬರು ಉಗ್ರರ ಸದೆಬಡಿದ ಭಾರತೀಯ ಸೇನೆ..! Video
ಹತ್ಯೆಯಾದ ಇಬ್ಬರು ಉಗ್ರರ ಪೈಕಿ ಓರ್ವವನ್ನು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ರುಬಾನಿ ಅಲಿಯಾಸ್ ಅಬು ಮುವಾವಿಯಾ ಎಂದು ಗುರ್ತಿಸಲಾಗಿದೆ.

Jammu-Kashmir: ಮತ್ತೆ ಕತ್ತಲಲ್ಲಿ 'ಗಡಿಯತ್ತ ನುಗಿದ್ದ ಡ್ರೋನ್' ಗಳು, ಐದು ದಿನಗಳಲ್ಲಿ ಮೂರನೇ ಬಾರಿಗೆ ಪತ್ತೆ!
ಮೊದಲ ಡ್ರೋನ್ ಜಮ್ಮು ಸೆಕ್ಟರ್‌ನಲ್ಲಿ ಕಂಡುಬಂದಿತ್ತು. ನಂತರ ಸೇನೆಯು ತಕ್ಷಣವೇ ಗುಂಡಿನ ದಾಳಿ ನಡೆಸಿದೆ ಡ್ರೋನ್ ಹಿಮ್ಮೆಟ್ಟಿಸಿದೆ. ಎರಡನೇ ಡ್ರೋನ್ ಪೂಂಚ್ ಸೆಕ್ಟರ್‌ನ ದೆಗ್ವಾರ್‌ನಲ್ಲಿ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

