India Covid Cases

ಕೋವಿಡ್ ನಿಂದಾಗಿ ಐಪಿಎಲ್ ಮುಂದೂಡಿಕೆ: ಬಿಸಿಸಿಐಗೆ 2,000 ಕೋಟಿ ರೂ. ನಷ್ಟ!
ಬಯೋ-ಬಬಲ್ ನಲ್ಲಿದ್ದರೂ ಐಪಿಎಲ್ ಆಟಗಾರರಿಗೆ ಕೊರೋನಾ ವಕ್ಕರಿಸಿದ್ದರಿಂದ ಅನಿವಾರ್ಯವಾಗಿ ಈ ಬಾರಿಯ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು ಇದರಿಂದಾಗಿ ಈ ವರ್ಷದ ಲೀಗ್‌ಗೆ ಮೀಸಲಿಟ್ಟಿರುವ ಪ್ರಸಾರ ಮತ್ತು ಪ್ರಾಯೋಜಕತ್ವದ ಹಣದ 2000 ಕೋಟಿ ರೂ.ಗಳನ್ನು ಬಿಸಿಸಿಐ ಕಳೆದುಕೊಳ್ಳಲಿದೆ.

ದೇಶ ಸಂಕಷ್ಟದಲ್ಲಿರುವಾಗ ಪ್ರಧಾನಿ ನೂತನ ನಿವಾಸಕ್ಕೆ 13 ಸಾವಿರ ಕೋಟಿ ಖರ್ಚು ಮಾಡುವ ಅಗತ್ಯವಿದೆಯೇ?: ಪ್ರಿಯಾಂಕಾ ಕಿಡಿ
ದೇಶದ ಜನರು ಆಕ್ಸಿಜನ್ ಗಾಗಿ ಪರದಾಡುತ್ತಿರುವಾಗ ಪ್ರಧಾನಿಯವರ ನೂತನ ನಿವಾಸಕ್ಕಾಗಿ 13 ಸಾವಿರ ಕೋಟಿ ಹಣ ಖರ್ಚು ಮಾಡುವ ಅಗತ್ಯವಿದೆಯೇ? ಈ ಹಣವನ್ನು ಜನರ ಜೀವ ಉಳಿಸುವ ಕಾರ್ಯಗಳಿಗೆ ಬಳಸಬಾರದೆ ಎಂದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.

11 ಕೋಟಿ ಕೋವಿಶೀಲ್ಡ್ ಲಸಿಕೆಗಾಗಿ ಕೇಂದ್ರದಿಂದ 1,732 ಕೋಟಿ ರೂ. ನಮಗೆ ತಲುಪಿದೆ: ಸೀರಮ್ ಕಂಪನಿ
ಮೇ, ಜೂನ್ ಮತ್ತು ಜುಲೈನಲ್ಲಿ ಕೋವಿಶೀಲ್ಡ್ ಲಸಿಕೆಯ 11 ಕೋಟಿ ಡೋಸ್‌ಗಳಿಗೆ ಏಪ್ರಿಲ್ 28ರಂದು ಕಂಪನಿಗೆ 1,732.50 ಕೋಟಿ ರೂಪಾಯಿಯನ್ನು ಮುಂಗಡವಾಗಿ ಬಿಡುಗಡೆ ಮಾಡಲಾಗಿದೆ ಎಂಬ ಸರ್ಕಾರದ ಹೇಳಿಕೆಯನ್ನು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) ಸೋಮವಾರ ಅನುಮೋದಿಸಿದೆ.

ಕೋವಿಡ್ ಲಸಿಕೆಗಳನ್ನು ಖರೀದಿಸಲಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿದ ಕೇಂದ್ರ
ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ 11 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆಗಾಗಿ 1732.50 ಕೋಟಿ ರೂಪಾಯಿಗಳನ್ನು ಮುಂಗಡವಾಗಿ ಏಪ್ರಿಲ್ 28ರಂದೇ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ಎಲ್ಲಾ ಕೂಟಗಳಲ್ಲಿ ಕೊರೋನಾ ನಿಯಮ ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾರ್ಚ್‌ನಲ್ಲೇ ಯುಟಿ, ರಾಜ್ಯಗಳಿಗೆ ಹೇಳಿದ್ದೇವು: ಕೇಂದ್ರ
ಎಲ್ಲಾ ಕೂಟಗಳಲ್ಲೂ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವರ್ಷದ ಮಾರ್ಚ್‌ನಲ್ಲೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ(ಯುಟಿ)ದ ಸರ್ಕಾರಗಳಿಗೆ ಹೇಳಿದ್ದೇವು ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

130 ಕೋಟಿ ಜನ ಹೊತ್ತ ಹಡಗು ಮುಳುಗುತ್ತಿದೆ: ಆರೋಗ್ಯ ಸಚಿವರ ಹೇಳಿಕೆ ವಿರುದ್ಧ ಚಿದು ಲೇವಡಿ
ದೇಶದ 130 ಕೋಟಿ ಜನರನ್ನು ಹೊತ್ತ ಹಡಗು ಮುಳುಗುತ್ತಿದೆ ಎಂದು ಕೇಂದ್ರದ ವಿರುದ್ಧ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಕಿಡಿಕಾರಿದ್ದಾರೆ.

ಕೊರೋನಾ ಹೆಚ್ಚಳ: ಕೇಂದ್ರ ಸರ್ಕಾರದಿಂದ 4.50 ಲಕ್ಷ ರೆಮಿಡಿಸಿವಿರ್ ವಯೆಲ್ ಆಮದು
ರೆಮಿಡಿಸಿವಿರ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಭಾರತ, ಇತರ ದೇಶಗಳಿಂದ ಈ ಔಷಧವನ್ನು ಆಮದು ಮಾಡಿಕೊಳ್ಳಲಾರಂಭಿಸಿದೆ.

ಭಾರತಕ್ಕೆ 5 ಲಕ್ಷ ಐಸಿಯು ಹಾಸಿಗೆಗಳು ಬೇಕಾಗುತ್ತವೆ; 3ನೇ ಅಲೆಗೂ ಸಿದ್ಧರಾಗಿ: ಡಾ. ದೇವಿ ಶೆಟ್ಟಿ
ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂಬ ಮುನ್ಸೂಚನೆ ನೀಡಿದ ಖ್ಯಾತ ಶಸ್ತ್ರಚಿಕಿತ್ಸಕ ಡಾ. ದೇವಿ ಪ್ರಸಾದ್ ಶೆಟ್ಟಿ ಅವರು ಮುಂದಿನ ಕೆಲವು ವಾರಗಳಲ್ಲಿ ಭಾರತಕ್ಕೆ ಹೆಚ್ಚುವರಿ 5 ಲಕ್ಷ ಐಸಿಯು ಹಾಸಿಗೆಗಳು, 2 ಲಕ್ಷ ದಾದಿಯರು ಮತ್ತು 1.5 ಲಕ್ಷ ವೈದ್ಯರ ಅಗತ್ಯವಿದೆ ಎಂದು ಹೇಳಿದ್ದಾರೆ.

ಪಿಎಂ ಕೇರ್ಸ್ ಫಂಡ್‌ನಿಂದ 1 ಲಕ್ಷ ಪೋರ್ಟಬಲ್ ಆಕ್ಸಿಜನ್ ಸಾಂದ್ರಕಗಳ ಖರೀದಿ: ಪ್ರಧಾನಿ ಮೋದಿ
ಪಿಎಂ ಕೇರ್ಸ್ ಫಂಡ್‌ನಿಂದ ಸರ್ಕಾರವು ಒಂದು ಲಕ್ಷ ಪೋರ್ಟಬಲ್ ಆಕ್ಸಿಜನ್ ಸಾಂದ್ರಕಗಳನ್ನು ಖರೀದಿಸಲಿದ್ದು 500 ಪ್ರೆಶರ್ ಸ್ವಿಂಗ್ ಆಡ್ಸರ್ಪ್ಷನ್ ಆಕ್ಸಿಜನ್ ಪ್ಲಾಂಟ್‌ಗಳನ್ನು ಸ್ಥಾಪಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.

