India Covid Cases

ಇನ್ನುಳಿದ 2021ರ ಐಪಿಎಲ್ ಪಂದ್ಯಗಳು ಭಾರತದಲ್ಲಿ ನಡೆಯಲ್ಲ: ಗಂಗೂಲಿ
ಬಯೋ-ಬಬಲ್ ನಲ್ಲಿದ್ದ ಆಟಗಾರರಿಗೂ ಕೊರೋನಾ ವಕ್ಕರಿಸಿದ್ದರಿಂದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ಧಿಷ್ಠಾವಧಿಗೆ ಮುಂದೂಡಲಾಗಿದ್ದು ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಇನ್ನುಳಿದ ಪಂದ್ಯಗಳು ಭಾರತದಲ್ಲಿ ನಡೆಯುವುದಿಲ್ಲ ಎಂದು ಖಚಿತಪಡಿಸಿದ್ದಾರೆ.

ಸರಬರಾಜು ಸುಗಮಗೊಳಿಸಲು ವೈದ್ಯಕೀಯ ಆಮ್ಲಜನಕ ಹೊತ್ತ ಟ್ಯಾಂಕರ್ ಗಳಿಗೆ ಟೋಲ್ ಶುಲ್ಕವಿಲ್ಲ
ದೇಶಾದ್ಯಂತ ದ್ರವೀಕೃತ ವೈದ್ಯಕೀಯ ಆಮ್ಲಜನಕ ಸರಬರಾಜು ಸುಗಮಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ಆಮ್ಲಜನಕ ಹೊತ್ತ ಟ್ಯಾಂಕರ್ ಗಳಿಗೆ ಯಾವುದೇ ಶುಲ್ಕ ವಿಧಿಸದೆ ಸರಾಗವಾಗಿ ಸಾಗಲು ಅನುವು ಮಾಡಿಕೊಡಲಾಗಿದೆ.

ಕೋವಿಡ್ ಪಾಸಿಟಿವ್ ವರದಿ ಕಡ್ಡಾಯವಲ್ಲ; ಲಕ್ಷಣಗಳಿದ್ದರೂ ಆಸ್ಪತ್ರೆಗೆ ದಾಖಲಾಗಿ: ನೀತಿ ಪರಿಷ್ಕರಿಸಿದ ಕೇಂದ್ರ
ಕೋವಿಡ್ ಆಸ್ಪತ್ರೆಗಳಿಗೆ ದಾಖಲಾಗಲು ಪಾಸಿಟಿವ್ ವರದಿ ಕಡ್ಡಾಯವಲ್ಲ. ಕೊರೋನಾ ಲಕ್ಷಣಗಳು ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಆ್ಯಂಟಿ-ಕೋವಿಡ್ ಔಷಧ (2-ಡಿಜಿ) ತುರ್ತು ಬಳಕೆಗೆ ಡಿಸಿಜಿಐ ಅನುಮೋದನೆ
ದೇಶದಲ್ಲಿ ಕೋವಿಡ್ ಎರಡನೇ ಅಲೆ ತೀವ್ರ ಹಾನಿಯುನ್ನುಂಟು ಮಾಡುತ್ತಿದ್ದು ಅದರ ನಿಯಂತ್ರಣಕ್ಕಾಗಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೀಗ ಆ್ಯಂಟಿ-ಕೋವಿಡ್ ಔಷಧಿ(2-ಡಿಯೋಕ್ಸಿ-ಡಿ-ಗ್ಲೂಕೋಸ್)ಯ ತುರ್ತು ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅನುಮೋದನೆ ನೀಡಿದೆ.

ಕೋವಿಡ್ ಮಾರ್ಗಸೂಚಿ ದಿಕ್ಕರಿಸಿ ವ್ಯಕ್ತಿಯನ್ನು ಸಮಾಧಿ ಮಾಡಿದ ನಂತರ ರಾಜಸ್ಥಾನದ ಗ್ರಾಮವೊಂದರಲ್ಲಿ 21 ಜನರ ಸಾವು!
ಕೋವಿಡ್ ಸೋಂಕಿತನ ಶವವನ್ನು ಕೊರೋನಾ ಮಾರ್ಗಸೂಚಿ ಅನುಸರಿಸದೆ ಸಮಾಧಿ ಮಾಡಿದ ನಂತರ ಕಳೆದ ಕೆಲ ದಿನಗಳಲ್ಲೇ ರಾಜಸ್ಥಾನದ ಸಿಕಾರ್ ಜಿಲ್ಲೆಯ ಹಳ್ಳಿಯಲ್ಲಿ ಇಪ್ಪತ್ತೊಂದು ಜನರು ಸಾವನ್ನಪ್ಪಿದ್ದಾರೆ.

ಕೋವಿಡ್ ಹೋರಾಟಕ್ಕೆ ಟಿವಿಎಸ್ ಮೋಟಾರ್ ಸಮೂಹದಿಂದ 40 ಕೋಟಿ ರೂ. ನೆರವು
ದ್ವಿಚಕ್ರ ವಾಹನ ತಯಾರಕರು ಟಿವಿಎಸ್ ಮೋಟಾರ್ ಕಂಪನಿ, ಸುಂದರಂ ಕ್ಲೇಟನ್ ಮತ್ತು ಸಮೂಹ ಕಂಪನಿಗಳೊಂದಿಗೆ ಕೋವಿಡ್-19 ತಡೆಯುವ ಪ್ರಯತ್ನಗಳ ಫಲವಾಗಿ 40 ಕೋಟಿ ರೂ. ನೆರವು ಘೋಷಿಸಿದೆ.

ಜಾಗತಿಕ ಕಾರ್ಯಪಡೆ ಸ್ಟೀರಿಂಗ್ ಕಮಿಟಿಗೆ ಸುಂದರ್ ಪಿಚೈ ಸೇರಿ ಮೂವರು ಭಾರತೀಯ ಅಮೆರಿಕನ್ ಸಿಇಓಗಳು
ಅಮೆರಿಕಾದಲ್ಲಿರುವ ಕಾರ್ಪೊರೇಟ್ ಸಂಸ್ಥೆಗಳು ಭಾರತಕ್ಕೆ ನೀಡುವ ನೆರವನ್ನು ಈ ಸಮಿತಿ ಪರಿಶೀಲಿಸಲಿದೆ. ಗುರುವಾರ ಈ ಸ್ಟೀರಿಂಗ್ ಸಮಿತಿಗೆ ಮೂವರು ಭಾರತೀಯ-ಅಮೆರಿಕನ್ ಸಿಇಓಗಳು ಸೇರ್ಪಡೆಗೊಂಡಿದ್ದಾರೆ.

ಸಿಂಧಗಿ ಸೇರಿ ವಿವಿಧ ರಾಜ್ಯಗಳ 8 ವಿಧಾನಸಭಾ ಕ್ಷೇತ್ರ, 3 ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಮುಂದೂಡಿಕೆ
ದೇಶದಲ್ಲಿನ ಸದ್ಯದ ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮೂರು ಲೋಕಸಭಾ ಕ್ಷೇತ್ರಗಳು ಮತ್ತು ಎಂಟು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಮುಂದೂಡಲು ಕೇಂದ್ರ ಚುನಾವಣಾ ಆಯೋಗ ಬುಧವಾರ ನಿರ್ಧರಿಸಿದೆ.

ವಿಶ್ವಪ್ರಸಿದ್ಧ ಸಾಂಕ್ರಾಮಿಕ ರೋಗ ತಜ್ಞ ಡಾ.ರಾಜೇಂದ್ರ ಕಪಿಲಾ ಕೊರೋನಾಗೆ ಬಲಿ!
ವಿಶ್ವಪ್ರಸಿದ್ಧ ಸಾಂಕ್ರಾಮಿಕ ರೋಗ ತಜ್ಞ ಡಾ. ರಾಜೇಂದ್ರ ಕಪಿಲಾ ಅವರು ಕೊರೋನಾಗೆ ಬಲಿಯಾಗಿದ್ದಾರೆ.

