ಕೋವಿಡ್ ಲಸಿಕೆಗಳನ್ನು ಖರೀದಿಸಲಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿದ ಕೇಂದ್ರ
ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ 11 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆಗಾಗಿ 1732.50 ಕೋಟಿ ರೂಪಾಯಿಗಳನ್ನು ಮುಂಗಡವಾಗಿ ಏಪ್ರಿಲ್ 28ರಂದೇ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ನವದೆಹಲಿ: ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ 11 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆಗಾಗಿ 1732.50 ಕೋಟಿ ರೂಪಾಯಿಗಳನ್ನು ಮುಂಗಡವಾಗಿ ಏಪ್ರಿಲ್ 28ರಂದೇ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
ಟಿಡಿಎಸ್ ನಂತರ 1699.50 ಕೋಟಿ ರೂ.ಗಳಷ್ಟಿದ್ದ ಮೊತ್ತವನ್ನು ಏಪ್ರಿಲ್ 28 ರಂದು ಎಸ್‌ಐಐ ಸ್ವೀಕರಿಸಿದೆ ಎಂದು ಸಚಿವಾಲಯ ಹೇಳಿದೆ.
ದಿನಾಂಕದಂತೆ, 10 ಕೋಟಿ ಡೋಸ್‌ಗಳ ಪೈಕಿ ಮೇ 3 ರವರೆಗೆ 8.744 ಕೋಟಿ ಡೋಸ್‌ಗಳನ್ನು ವಿತರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಕೋವಿಡ್ ಲಸಿಕೆಗಾಗಿ ಕೇಂದ್ರವು ಯಾವುದೇ ಹೊಸ ಆರ್ಡರ್ ನೀಡಿಲ್ಲ ಎಂದು ಆರೋಪಿಸಿರುವ ಮಾಧ್ಯಮ ವರದಿಗಳು ತಪ್ಪು ಮತ್ತು ಸತ್ಯಕ್ಕೆ ದೂರವಾದವು ಎಂದು ಕೇಂದ್ರ ಹೇಳಿದೆ.
ಅಲ್ಲದೆ ಹೆಚ್ಚುವರಿಯಾಗಿ, ಮೇ, ಜೂನ್ ಮತ್ತು ಜುಲೈ ಅವಧಿಯಲ್ಲಿ ಐದು ಕೋಟಿ ಕೋವಾಕ್ಸಿನ್ ಡೋಸ್ ಗಳಿಗೆ ಏಪ್ರಿಲ್ 28 ರಂದು ಭಾರತ್ ಬಯೋಟೆಕ್ ಇಂಡಿಯಾ ಲಿಮಿಟೆಡ್‌ಗೆ (ಬಿಬಿಐಎಲ್) 787.50 ಕೋಟಿ ರೂ.ಗಳ 100 ಶೇಕಡಾ ಮುಂಗಡವನ್ನು ಬಿಡುಗಡೆ ಮಾಡಲಾಗಿದೆ. ಈ ಮೊತ್ತವನ್ನು ಅವರು ಏಪ್ರಿಲ್ 28 ರಂದು ಸ್ವೀಕರಿಸಿದ್ದಾರೆ. ಕೊವಾಕ್ಸಿನ್ ಲಸಿಕೆ ಸರಬರಾಜುಗಾಗಿ ಎರಡು ಕೋಟಿ ಡೋಸ್‌ಗಳ ಪೈಕಿ ಮೇ 3 ರವರೆಗೆ 0.8813 ಕೋಟಿ ಡೋಸ್‌ಗಳನ್ನು ವಿತರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಮೇ 2ರವರೆಗೂ, ಕೇಂದ್ರವು 16.54 ಕೋಟಿ ಲಸಿಕೆ ಪ್ರಮಾಣವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡಿದೆ. ಇದೇ ವೇಳೆ ಇನ್ನೂ 78 ಲಕ್ಷಕ್ಕೂ ಹೆಚ್ಚು ಡೋಸ್ ಗಳು ಲಭ್ಯವಿದ್ದು, ಮುಂದಿನ ಮೂರು ದಿನಗಳಲ್ಲಿ 56 ಲಕ್ಷಕ್ಕೂ ಹೆಚ್ಚಿನ ಡೋಸ್ ಗಳನ್ನು ರಾಜ್ಯಗಳು ಮತ್ತು ಯುಟಿಗಳು ನೀಡಲಾಗುವುದು ಎಂದು ಸಚಿವಾಲಯ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


