GST

ಕೇಂದ್ರ ಸರ್ಕಾರ ನೋಟು ರದ್ದತಿ, ಜಿಎಸ್ ಟಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು: ಅಶೋಕ್ ಗೆಹ್ಲೋಟ್
ನೋಟು ರದ್ದತಿ, ಜಿಎಸ್ ಟಿ ಬಗ್ಗೆ ಕೇಂದ್ರ ಸರ್ಕಾರ ಶ್ವೇತಪತ್ರ ಶ್ವೇತಪತ್ರ ಹೊರಡಿಸಬೇಕು ಎಂದು ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆಗ್ರಹಿಸಿದ್ದಾರೆ.

ಆರ್ಥಿಕ ವಹಿವಾಟು: ಫೆಬ್ರವರಿ ನಂತರ ಇದೇ ಮೊದಲ ಬಾರಿಗೆ 1 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ
ಅಕ್ಟೋಬರ್‌ನಲ್ಲಿ ಜಿಎಸ್‌ಟಿ ಸಂಗ್ರಹವು 1.05 ಲಕ್ಷ ಕೋಟಿ ರೂ.ಗೆ ತಲುಪಿದ್ದು ಈ ವರ್ಷದ ಫೆಬ್ರವರಿಯ ನಂತರ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ.ಗಳನ್ನು ದಾಟಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

'ಜಿಎಸ್‌ಟಿ ದೋಷವನ್ನು ಸರಿಪಡಿಸಿ ಇಲ್ಲವೇ ಹಳೇ ತೆರಿಗೆ ವ್ಯವಸ್ಥೆ ಜಾರಿಮಾಡಿ: ಮೋದಿ ಸರ್ಕಾರಕ್ಕೆ ಉದ್ಧವ್ ಠಾಕ್ರೆ
ಈಗ ಜಾರಿಯಲ್ಲಿರು ಜಿಎಸ್‌ಟಿ ತೆರಿಗೆ ವ್ಯವಸ್ಥೆ ದೋಷಪೂರಿತವಾಗಿದ್ದು ತಿದ್ದುಪಡಿಯಾಗುವ ಅಗತ್ಯವಿದೆ ಇಲ್ಲವೆ ಕೇಂದ್ರವು ಹಳೆಯ ತೆರಿಗೆ ವಸ್ಥೆಯನ್ನು ಮರಳಿ ತರಬೇಕಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ

ರಾಜ್ಯಗಳ ಜಿಎಸ್ಟಿ ಕೊರತೆ ಸರಿತೂಗಿಸಲು 1.1 ಲಕ್ಷ ಕೋಟಿ ರೂ. ಸಾಲ ಪಡೆಯಲು ಕೇಂದ್ರ ಸರ್ಕಾರ ಮುಂದು!
ರಾಜ್ಯಗಳ ಜಿಎಸ್ಟಿ ಆದಾಯದ ಕೊರತೆಯನ್ನು ನಿವಾರಿಸಲು ವಿಶೇಷ ಅವಕಾಶದಡಿ 1.1 ಲಕ್ಷ ಕೋಟಿ ರೂಪಾಯಿ ಸಾಲ ಪಡೆಯಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಜಿಎಸ್‌ಟಿ ನಷ್ಟ: 9,018 ಕೋಟಿ ರೂ. ಸಾಲ ಪಡೆಯಲು ಕರ್ನಾಟಕಕ್ಕೆ ಕೇಂದ್ರ ಅನುಮತಿ
ಕೊರೋನಾ ಕಾರಣದಿಂದಾದ ಜಿಎಸ್‌ಟಿ ಪರಿಹಾರ ನಷ್ಟವನ್ನು ಸರಿದೂಗಿಸಲು ಕರ್ನಾಟಕಕ್ಕೆ 9,018 ಕೋಟಿ ರೂ.ಗಳ ಸಾಲ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಜಿಎಸ್‌ಟಿ ಕೌನ್ಸಿಲ್ ಒದಗಿಸಿದ ಆಯ್ಕೆ 1 ರ ಅಡಿಯಲ್ಲಿ ಮುಕ್ತ ಮಾರುಕಟ್ಟೆ ಸಾಲ ಪಡೆಯಲು ಮುಂದಾದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.

ಜಿಎಸ್‌ಟಿ ಕೊರತೆ ನೀಗಿಸಲು 20 ರಾಜ್ಯಗಳಿಗೆ 68,825 ಕೋಟಿ ರೂ ಸಾಲ ಪಡೆಯಲು ಕೇಂದ್ರ ಸರ್ಕಾರ ಅನುಮತಿ
ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಎದುರಾಗಿರುವ ಜಿಎಸ್‌ಟಿ ಕೊರತೆ ನೀಗಿಸಲು 20 ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಾಲದ ಮೂಲಕ 68,825 ಕೋಟಿ ರೂ ಪಡೆಯಲು ಅನುಮತಿ ನೀಡಿದೆ.

ಜಿಎಸ್ ಟಿ ಸಭೆ: 'ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ' ಎಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಜಿಎಸ್ ಟಿ ಪರಿಹಾರ ಸಂಬಂಧ ನಡೆದ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಜಿಎಸ್'ಟಿ ಪರಿಹಾರ: ಕೇಂದ್ರದಿಂದ ಹೆಚ್ಚುವರಿ ರೂ.11 ಸಾವಿರ ಕೋಟಿಗೆ ಬೊಮ್ಮಾಯಿ ಮನವಿ
ರಾಜ್ಯಕ್ಕೆ ಕೇಂದ್ರದಿಂದ ಬರೋಬ್ಬರಿ ರೂ.11 ಸಾವಿರ ಕೋಟಿ ಜಿಎಸ್'ಟಿ ಪರಿಹಾರ ಮೊತ್ತ ಬರಬೇಕಿದ್ದು, ಕೂಡಲೇ ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಮನವಿ ಮಾಡಿಕೊಂಡಿದೆ.

ಜಿಎಸ್ ಟಿ ಶೇ.4 ರಷ್ಟು ಜಿಗಿತ, ಸೆಪ್ಟೆಂಬರ್ ನಲ್ಲಿ 95,480 ಕೋಟಿ ರೂ. ಸಂಗ್ರಹ
ದೇಶಾದ್ಯಂತ ಕೊರೋನಾ ವೈರಸ್ ಮತ್ತು ಲಾಕ್ ಡೌನ್ ನಿಂದಾಗಿ ಬಹುತೇಕ ಉದ್ಯಮ ಚಟುವಟಿಕೆ ಸ್ಥಗಿತವಾಗಿದ್ದರಿಂದ ಕಳೆದ ಆರು ತಿಂಗಳಿಂದ ಇಳಿಮುಖವಾಗಿದ್ದ ಜಿಎಸ್ ಟಿ ಆದಾಯ ಈಗ ಚೇತರಿಸಿಕೊಂಡಿದ್ದು, ಶೇ. 4ರಷ್ಟು ಏರಿಕೆಯಾಗಿದೆ.

