ಜಿಎಸ್‌ಟಿ ನಷ್ಟ: 9,018 ಕೋಟಿ ರೂ. ಸಾಲ ಪಡೆಯಲು ಕರ್ನಾಟಕಕ್ಕೆ ಕೇಂದ್ರ ಅನುಮತಿ
ಕೊರೋನಾ ಕಾರಣದಿಂದಾದ ಜಿಎಸ್‌ಟಿ ಪರಿಹಾರ ನಷ್ಟವನ್ನು ಸರಿದೂಗಿಸಲು ಕರ್ನಾಟಕಕ್ಕೆ 9,018 ಕೋಟಿ ರೂ.ಗಳ ಸಾಲ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಜಿಎಸ್‌ಟಿ ಕೌನ್ಸಿಲ್ ಒದಗಿಸಿದ ಆಯ್ಕೆ 1 ರ ಅಡಿಯಲ್ಲಿ ಮುಕ್ತ ಮಾರುಕಟ್ಟೆ ಸಾಲ ಪಡೆಯಲು ಮುಂದಾದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.

ಬೆಂಗಳೂರು: ಕೊರೋನಾ ಕಾರಣದಿಂದಾದ ಜಿಎಸ್‌ಟಿ ಪರಿಹಾರ ನಷ್ಟವನ್ನು ಸರಿದೂಗಿಸಲು ಕರ್ನಾಟಕಕ್ಕೆ 9,018 ಕೋಟಿ ರೂ.ಗಳ ಸಾಲ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಜಿಎಸ್‌ಟಿ ಕೌನ್ಸಿಲ್ ಒದಗಿಸಿದ ಆಯ್ಕೆ 1 ರ ಅಡಿಯಲ್ಲಿ ಮುಕ್ತ ಮಾರುಕಟ್ಟೆ ಸಾಲ ಪಡೆಯಲು ಮುಂದಾದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.
ಮಂಗಳವಾರ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ, ರಾಜ್ಯದ ಪ್ರತಿನಿಧಿ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪರಿಹಾರ ಮತ್ತು ಯೋಜನೆಗಳೇತರ ವೆಚ್ಚಗಳೆರಡರಲ್ಲೂ ಹೂಡಿಕೆ ಮಾಡಲು ರಾಜ್ಯಕ್ಕೆ ಕಷ್ಟವಾಗಿರುವುದರಿಂದ ದ ಪರಿಹಾರದ ತಕ್ಷಣದ ಅಗತ್ಯವನ್ನು ಒತ್ತಿ ಹೇಳೀದ್ದಾರೆ. ಇದಾದ ಒಂದು ದಿನದಲ್ಲೇ ಕೇಂದ್ರವು ರಾಜ್ಯಕ್ಕೆ ಸಾಲ ಪಡೆಯಲು ಅನುಮತಿ ಕೊಟ್ಟಿದೆ.
"ಅಂದಾಜು ಬೆಳವಣಿಗೆಯನ್ನು ಶೇಕಡಾ 10 ರಿಂದ 7 ಕ್ಕೆ ಇಳಿಸುವ ಮೂಲಕ ಭಾರತ ಸರ್ಕಾರ ತನ್ನ ಬದ್ಧತೆಯನ್ನು ತೋರಿಸಿದೆ, ರಾಜ್ಯ ಸರ್ಕಾರಕ್ಕೆ 1,000 ಕೋಟಿ ರೂ.ಗಳ ಹೆಚ್ಚುವರಿ ಸಾಲ ಸೌಲಭ್ಯ-11,432 ಕೋಟಿಯಿಂದ 12,400 ಕೋಟಿ ರೂ.ಗೆ ಹೆಚ್ಚಿಸಿದೆ" ಎಂದು ಬೊಮ್ಮಾಯಿ ಹೇಳಿದರು
ಸಂವಿಧಾನದ ವಿಧಿ 279 (4) (ಎಚ್) ರ ನಿಬಂಧನೆಗಳ ಪ್ರಕಾರ ರಾಜ್ಯಗಳಿಗೆ ಸಾಲ ಪಡೆಯಲು ಅನುಮತಿ ನೀಡುವಂತೆ ಕೌನ್ಸಿಲ್ ಕೇಂದ್ರಕ್ಕೆ ಶಿಫಾರಸು ಮಾಡಬಹುದೆಂದು ಕರ್ನಾಟಕ ಸೂಚಿಸಿತ್ತು. ಹೆಚ್ಚುವರಿ ಸಾಲವು ರಾಜ್ಯಕ್ಕೆ ಹೊರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದ ಬೊಮ್ಮಾಯಿ “ಯಾರು ಸಾಲ ಪಡೆಯುತ್ತಾರೆ ಎನ್ನುವುದಕ್ಕಿಂತ ಯಾರು ಮರುಪಾವತಿ ಮಾಡುತ್ತಾರೆನ್ನುವುದು ಮುಖ್ಯ . ಈ ಆಯ್ಕೆಯ ಅಡಿಯಲ್ಲಿ, ನಿಧಿಯಲ್ಲಿ ಸಂಗ್ರಹಿಸಿದ ಸೆಸ್‌ನಿಂದ ಅಸಲು ಮತ್ತು ಬಡ್ಡಿ ಎರಡನ್ನೂ ಮರುಪಾವತಿ ಮಾಡಲಾಗುತ್ತದೆ ಮತ್ತು ರಾಜ್ಯದ ಮೇಲೆ ಯಾವುದೇ ಹೊರೆ ಇರುವುದಿಲ್ಲ. ”
ಸುಪ್ರೀಂಗೆ ಕೇರಳ ಮೊರೆ
ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್ ಮಂಗಳವಾರ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಗೆ ತೆರಳಲಿದೆ ಎಂದರು, ಈ ಮುನ್ನ ಒಂಬತ್ತು ರಾಜ್ಯಗಳು ಕೇಂದ್ರದ ಅವಳಿ ಸಾಲದ ಆಯ್ಕೆಗಳನ್ನು ವಿರೋಧಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


