ರಾಜ್ಯಜಿಎಸ್ಟಿ ನಷ್ಟ: 9,018 ಕೋಟಿ ರೂ. ಸಾಲ ಪಡೆಯಲು ಕರ್ನಾಟಕಕ್ಕೆ ಕೇಂದ್ರ ಅನುಮತಿ
ಕೊರೋನಾ ಕಾರಣದಿಂದಾದ ಜಿಎಸ್ಟಿ ಪರಿಹಾರ ನಷ್ಟವನ್ನು ಸರಿದೂಗಿಸಲು ಕರ್ನಾಟಕಕ್ಕೆ 9,018 ಕೋಟಿ ರೂ.ಗಳ ಸಾಲ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಜಿಎಸ್ಟಿ ಕೌನ್ಸಿಲ್ ಒದಗಿಸಿದ ಆಯ್ಕೆ 1 ರ ಅಡಿಯಲ್ಲಿ ಮುಕ್ತ ಮಾರುಕಟ್ಟೆ ಸಾಲ ಪಡೆಯಲು ಮುಂದಾದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.