Gadag

ನಮ್ಮ ದೇಶ ಹಿಂದೂಗಳ ರಾಷ್ಟ್ರ ಅಲ್ಲ, ಇದು ಬಹುತ್ವದ ದೇಶ: ಸಿಎಂ ಸಿದ್ದರಾಮಯ್ಯ
ನಮ್ಮ ದೇಶ ಕೇವಲ ಹಿಂದೂಗಳ ರಾಷ್ಟ್ರ ಅಲ್ಲ, ಇದು ಬಹುತ್ವದ ದೇಶವಾಗಿದೆ. ಕೇವಲ ಹಿಂದೂ ರಾಷ್ಟ್ರವನ್ನು ಮಾಡಲು ಆಗುವುದಿಲ್ಲ. ಈ ದೇಶ ಹಿಂದೂ ರಾಷ್ಟ್ರ ಆಗಬೇಕೆಂಬುದು ಬಿಜೆಪಿಯವರ ಸಿದ್ಧಾಂತವಷ್ಟೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಗದಗ: ವೃತ್ತಿಯಲ್ಲಿ ಸರ್ಜನ್, ಹೃದಯದಿಂದ ರೈತ ಡಾ. ಜಿ.ಬಿ.ಬಿದಿನ್ಹಾಳ್!
ವೃತ್ತಿಯಲ್ಲಿ ಸರ್ಜನ್ ಆಗಿ ಜನರಿಗೆ ಸೇವೆ ಒದಗಿಸುತ್ತಾ, ಹೊಲದಲ್ಲಿಯೂ ಕೆಲಸ ಮಾಡುವ ಗದಗದ 68 ವರ್ಷದ ಡಾ.ಜಿ.ಬಿ. ಬಿದಿನ್ಹಾಳ್ ತಮ್ಮ ವಯಸ್ಸಿಗೂ ಮೀರಿ ನಿಲ್ಲುತ್ತಾರೆ. ಅವರು ಇಂದಿಗೂ ತಮ್ಮ ಜಮೀನಿನಲ್ಲಿ ಕೆಲಸ ಮುಂದುವರೆಸಿದ್ದಾರೆ. ಇವರು ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಸಮೀಪದ ಮುಸ್ತಿಕೊಪ್ಪದವರು.

ಗದಗ: 9 ತಿಂಗಳ ಮೊಮ್ಮಗನನ್ನು ಕತ್ತು ಹಿಸುಕಿ ಕೊಂದ ಆರೋಪ, ಮಹಿಳೆ ಬಂಧನ
ಗಜೇಂದ್ರಗಡ ತಾಲೂಕಿನ ಗ್ರಾಮವೊಂದರಲ್ಲಿ ಮೊಮ್ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಿರುವ ಘಟನೆ ಭಾನುವಾರ ನಡೆದಿದೆ.

ಗದಗ ಮೃಗಾಲಯದಲ್ಲಿ ಅಳಿವಿನಂಚಿನಲ್ಲಿರುವ 'ಯೂರೇಷಿಯನ್ ಗ್ರಿಫನ್ ರಣಹದ್ದು' ಸಾವು
ಅದು ವಿದೇಶಿ ಅತಿಥಿ. ಸಾವಿರಾರು ಕಿ.ಮಿ ಕ್ರಮಿಸಿಕೊಂಡು ದೂರದ ದೇಶದಿಂದ ಕರ್ನಾಟಕಕ್ಕೆ ಬಂದಿತ್ತು. ಹಿಂದೆಯೂ ಬಂದಿರಬಹುದು. ಆದರೆ, ಈ ಬಾರಿ ರಾಜ್ಯಕ್ಕೆ ಬಂದಿದ್ದ ಈ ಅತಿಥಿ ನಿರ್ಜಲೀಕರಣದಿಂದ ಸಾವನ್ನಪ್ಪಿದೆ.

ಗದಗ: ಒಂಬತ್ತು ತಿಂಗಳ ಮೊಮ್ಮಗುವನ್ನು ಕೊಂದ ಅಜ್ಜಿ; ಮೃತ ಶಿಶುವಿನ ತಾಯಿಯಿಂದ ದೂರು ದಾಖಲು
ಮೃತ ಅದ್ವಿಕ್ ಅವರ ತಾಯಿ ನಾಗರತ್ನ ಅವರು ಗಜೇಂದ್ರಗಢ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅತ್ತೆ ಸರೋಜಾ ಅವರು ಮಗುವನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಬರಗಾಲ ಆವರಿಸುತ್ತಿದ್ದಂತೆ ಜೀವನೋಪಾಯಕ್ಕಾಗಿ ನಗರಕ್ಕೆ ಜನರ ವಲಸೆ: ಗದಗ ಜಿಲ್ಲೆಯ ಹಳ್ಳಿಗಳು ಖಾಲಿಯೋ ಖಾಲಿ!
ಭೀಕರ ಬರಗಾಲವು ಭೂಮಿಯನ್ನು ಬಂಜರುಗೊಳಿಸುತ್ತಿದ್ದು, ಗದಗ ಜಿಲ್ಲೆಯ ಹಳ್ಳಿಗಳು ವೃದ್ಧಾಶ್ರಮಗಳ ರೀತಿ ಕಾಣುತ್ತಿವೆ. ಜಮೀನಿನಲ್ಲಿ ಬೆಳೆ ಬೆಳೆಯಲು ಸಾಧ್ಯವಾಗದ ಕಾರಣ ಅನೇಕ ರೈತರು ಮತ್ತು ದಿನಗೂಲಿ ಕಾರ್ಮಿಕರು ಜೀವನೋಪಾಯಕ್ಕಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ.

ಅಸಮರ್ಪಕ ಬಿಸಿಯೂಟ ವಿತರಣೆ: ತರಗತಿ ಬಹಿಷ್ಕರಿಸಿ ಶಾಲಾ ವಿದ್ಯಾರ್ಥಿಗಳ ಪ್ರತಿಭಟನೆ!
ಗುಣಮಟ್ಟದ ಹಾಗೂ ಸಮರ್ಪಕ ಬಿಸಿಯೂಟ ನೀಡುತ್ತಿಲ್ಲ ಎಂದು ಆರೋಪಿಸಿದ ಶಾಲಾ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದ ಘಟನೆಯೊಂದು ಗದಗ ಜಿಲ್ಲೆಯ ಲಕ್ಕಲಕಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ಗದಗ: ಪಟ್ಟೆ ಕತ್ತೆಕಿರುಬ ಮೃತದೇಹ ಪತ್ತೆ, ರೇಬೀಸ್ ಕುರಿತು ಹೆಚ್ಚಿದ ಆತಂಕ!
ಅಳಿವಿನಂಚಿನಲ್ಲಿರುವ ಪಟ್ಟೆ ಕತ್ತೆಕಿರುಬದ ಮೃತದೇಹವೊಂದು ಗಜೇಂದ್ರಗಡದ ಅರಣ್ಯದ ಬಳಿ ಪತ್ತೆಯಾಗಿದ್ದು, ಕತ್ತೆಕಿರುಬ ಮೃತದೇಹದ ಕುರಿತು ಪ್ರಾಣಿಪ್ರಿಯದಲಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಗದಗದಲ್ಲಿ ಭೀಕರ ರಸ್ತೆ ಅಪಘಾತ: ಮೃತರ ಸಂಖ್ಯೆ 6ಕ್ಕೆ ಏರಿಕೆ
ಜಿಲ್ಲೆಯ ನರೇಗಲ್ ಹೋಬಳಿ ಬಳಿ ಸೋಮವಾರ ಬೆಳಗ್ಗೆ ಟಾಟಾ ಸುಮೋ–ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

