ಗದಗ: ಒಂಬತ್ತು ತಿಂಗಳ ಮೊಮ್ಮಗುವನ್ನು ಕೊಂದ ಅಜ್ಜಿ; ಮೃತ ಶಿಶುವಿನ ತಾಯಿಯಿಂದ ದೂರು ದಾಖಲು
ಮೃತ ಅದ್ವಿಕ್ ಅವರ ತಾಯಿ ನಾಗರತ್ನ ಅವರು ಗಜೇಂದ್ರಗಢ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅತ್ತೆ ಸರೋಜಾ ಅವರು ಮಗುವನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಗದಗ: ವೃದ್ಧೆಯೊಬ್ಬರು ತನ್ನ ಒಂಬತ್ತು ತಿಂಗಳ ಮೊಮ್ಮಗನನ್ನು ಕೊಂದಿದ್ದಾರೆ ಎಂಬ ಆರೋಪ ಗದಗದಲ್ಲಿ ಕೇಳಿ ಬಂದಿದೆ.
ಮೃತ ಅದ್ವಿಕ್ ಅವರ ತಾಯಿ ನಾಗರತ್ನ ಅವರು ಗಜೇಂದ್ರಗಢ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅತ್ತೆ ಸರೋಜಾ ಅವರು ಮಗುವನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಹೆರಿಗೆಯಾದ ಐದು ತಿಂಗಳ ನಂತರ ಅತ್ತೆಯ ಮನೆಗೆ ಬಂದಿರುವುದಾಗಿ ನಾಗರತ್ನ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಇಷ್ಟು ಚಿಕ್ಕ ವಯಸ್ಸಿನಲ್ಲೇ ಮಗು ಮಾಡಿಕೊಂಡಿದ್ದಕ್ಕೆ ನಾಗರತ್ನ ವಿರುದ್ಧ ಸರೋಜಾ ಅಸಮಾಧಾನ ಹೊಂದಿದ್ದರು ಎಂದು ಆರೋಪಿಸಲಾಗಿದೆ.
ಇಷ್ಟಕ್ಕೂ ನಿಲ್ಲದ ಮಹಿಳೆ ಶಿಶುವಿಗೆ ವೀಳ್ಯದೆಲೆ ಮತ್ತು ಸೊಪ್ಪನ್ನು ನುಂಗುವಂತೆ ಮಾಡಿದ್ದು ಆತನ ಸಾವಿಗೆ ಕಾರಣವಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ. ನವೆಂಬರ್ 22 ರಂದು ಅಂತಿಮ ವಿಧಿವಿಧಾನಗಳನ್ನು ನಡೆಸಲಾಯಿತು.
ಆಕೆಯ ದೂರಿನ ಆಧಾರದ ಮೇಲೆ ನವೆಂಬರ್ 24 ರಂದು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಏತನ್ಮಧ್ಯೆ, ಆರೋಪಿ ಅಜ್ಜಿ ತನ್ನ ಸೊಸೆಯ ಆರೋಪವನ್ನು ತಳ್ಳಿಹಾಕಿದ್ದಾರೆ, ತಮ್ಮ ವಿರುದ್ಧ ಸೊಸೆ ಮಾಡುತ್ತಿರುವ ಆರೋಪ ನಿರಾಧಾರ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


