Gadag

ಗದಗ ನಿವಾಸಿಗಳಿಗೆ ವರದಾನವಾದ SIR: ವಲಸೆ ನಿವಾಸಿಗಳ ಸಮ್ಮಿಲನಕ್ಕೆ ಅವಕಾಶ!
ಹಲವು ನಿವಾಸಿಗಳು ತಮ್ಮ ಹಳೆಯ ಸ್ನೇಹಿತರ ಸಂಪರ್ಕವನ್ನು ಕಳೆದುಕೊಂಡಿದ್ದೇವೆ ಎನ್ನುತ್ತಾರೆ. ಈ ಪ್ರದೇಶಗಳ ಬಹುತೇಕ ಜನರು ದಿನಗೂಲಿ ಕಾರ್ಮಿಕರಾಗಿದ್ದು, 2000ನೇ ಇಸವಿಗೆ ಮೊದಲು ಉದ್ಯೋಗಕ್ಕಾಗಿ ವಿವಿಧ ನಗರಗಳಿಗೆ ವಲಸೆ ಹೋಗಿದ್ದರು.

ಗದಗ: ಮಾನಸಿಕ ಅಸ್ವಸ್ಥ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ; ನೆರೆಮನೆ ವ್ಯಕ್ತಿ ಬಂಧನ
ಸಂತ್ರಸ್ತ ಬಾಲಕಿಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ. ಬಾಲಕಿಯ ತಾಯಿ ದಾಖಲಿಸಿದ ದೂರಿನ ಆಧಾರದ ಮೇಲೆ ರೋಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ದುರ್ಗಪ್ಪ ಮದರ್ ನನ್ನು ಬಂಧಿಸಿದ್ದಾರೆ.

ಬೈಕ್ ಸೈಡ್ ಬ್ಯಾಗ್‌ನಲ್ಲಿ ಮಗು ಕೂರಿಸಿ ಪ್ರಯಾಣ: ವೈರಲ್ Video ನೋಡಿ ಪೊಲೀಸರು ದಂಗು, ಮಾಡಿದ್ದೇನು?
ಸವಾರನೊಬ್ಬ ತನ್ನ ದ್ವಿಚಕ್ರ ವಾಹನದ ಸೈಡ್ ಲಗೇಜ್ ಬ್ಯಾಗ್ ಒಳಗೆ ಪುಟ್ಟ ಮಗುವನ್ನು ಕೂರಿಸಿದ್ದು, ಮಗುವಿನ ಕುತ್ತಿಗೆಯವರೆಗಿನ ಭಾಗ ಬ್ಯಾಗ್ ಒಳಗಿದ್ದು, ತಲೆ ಮಾತ್ರ ಬಾಕ್ಸ್‌ನ ಮೇಲ್ಭಾಗದಿಂದ ಕಾಣಿಸುತ್ತಿದ್ದ ದೃಶ್ಯ ಸಾರ್ವಜನಿಕರನ್ನು ಬೆಚ್ಚಿಬೀಳುವಂತೆ ಮಾಡಿತ್ತು.

ಯೋಗ ಬೋಧಿಸಿ ವಿದೇಶಿಗರ ಮನಗೆದ್ದ ಕನ್ನಡಿಗ: France ದೇಶದ ಅತ್ಯುನ್ನತ 'Legion of Honour' ಗೌರವ ಪಡೆದ ಗದಗದ ಮಹೇಶ್ ಘಾತ್ರಡ್ಯಾಳ್ ಯಶೋಗಾಥೆ..!
ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಬಾಲಕನೊಬ್ಬ ಮುಂದೆ ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಗೌರವಕ್ಕೆ ಪಾತ್ರನಾಗುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ.

12ನೇ ಶತಮಾನದ ಶಿಲ್ಪಕಲೆಯ ವೈಭವ; ಗದಗದ ಬೆಟಗೇರಿಯಲ್ಲಿ ಅಪರೂಪದ ತ್ರಿಮುಖ ಸೂರ್ಯದೇವನ ವಿಗ್ರಹ ಪತ್ತೆ..!
ಬ್ರಹ್ಮ ಹಾಗೂ ಸೂರ್ಯದೇವನ ವಿಗ್ರಹಗಳ ಕುರಿತು ಅಧ್ಯಯನ ನಡೆಸುತ್ತಿದ್ದ ಸಂಶೋಧಕರ ತಂಡ ಬೆಟಗೇರಿಗೆ ಭೇಟಿ ನೀಡಿದಾಗ ಈ ಮೂರ್ತಿಯನ್ನು ಪರಿಶೀಲಿಸಿತು.

ಗದಗ: ಬಡ್ಡಿ ಪಾವತಿಸಲು ವಿಫಲ; ಗೋಡೆ ಕೆಡವಿ, ಸಿಸಿಟಿವಿ ನಾಶ ಮಾಡಿದ ಮೈಕ್ರೋ ಫೈನಾನ್ಸ್ ಸಿಬ್ಬಂದಿ!
ಗದಗ ಪಟ್ಟಣದ ಕಳಸಾಪುರ ರಸ್ತೆಯ ಅಭಿನವ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮನೆ ಮಾಲೀಕ ಕೋಟೇಶ್ ಬಗಲಿ, ಗದಗದ ಹಣಕಾಸು ಕಂಪನಿಯಿಂದ ಸಾಲ ಪಡೆದು ಮರುಪಾವತಿ ಮಾಡಲು ವಿಫಲರಾಗಿದ್ದರು.

ಗದಗದಲ್ಲಿ ರಾಷ್ಟ್ರಕೂಟರ ಕಾಲದ ಅಪರೂಪದ ಶಾಸನ ಪತ್ತೆ: 'ಕೀಲುಗುಂಟೆ' ಸಂಪ್ರದಾಯದ ರೋಚಕ ಮಾಹಿತಿ ಬಯಲು!
ರಾಷ್ಟ್ರಕೂಟರ ಆಡಳಿತದ ಅವಧಿಯಲ್ಲಿ ಇಂದಿನ ಲಕ್ಷ್ಮೇಶ್ವರ ಭಾಗದ ಪುಲಿಗೆರೆ ಪ್ರದೇಶವನ್ನು ಕುಪ್ಪೆ ಅರಸ ಎಂಬ ರಾಜನು ಆಳುತ್ತಿದ್ದನು. ಅನಾರೋಗ್ಯದಿಂದ ರಾಜ ನಿಧನವಾದ ಬಳಿಕ, ಅವನ ಆಪ್ತ ಸೇವಕ ತನ್ನ ಅರಸನ ಮೇಲಿನ ಭಕ್ತಿ ಮತ್ತು ನಿಷ್ಠೆಯ ಸಂಕೇತವಾಗಿ ಆತ್ಮತ್ಯಾಗ ಮಾಡಲು ನಿರ್ಧರಿಸಿದ್ದನು.

ಬರನಾಡಿನ ಭಗೀರಥ: 200 ಕೆರೆ-3,000 ಕೊಳವೆ ಬಾವಿಗಳಿಗೆ ಮರುಜೀವ; ಗದಗದ 'ಜಲಯೋಧ'ನ ಪ್ರೇರಣಾದಾಯಕ ಯಶೋಗಾಥೆ..!
ಬಾಲ್ಯದಲ್ಲಿ ನೀರಿಗಾಗಿ ಜನರು ಅನುಭವಿಸುತ್ತಿದ್ದ ಸಂಕಷ್ಟವನ್ನು ಕಣ್ಣಾರೆ ಕಂಡಿದ್ದ ಸಿಕಂದರ್, ಅದನ್ನೇ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು ಇಂದು ಸಾವಿರಾರು ರೈತ ಕುಟುಂಬಗಳ ಬದುಕಿನಲ್ಲಿ ಆಶಾಕಿರಣವಾಗಿದ್ದಾರೆ.

ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ: ಗದಗ ಅಭಿಮಾನಿಯಿಂದ ಗ್ರಾಮಸ್ಥರಿಗೆ ಭರ್ಜರಿ ಬಾಡೂಟ!
ಡಿಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಉಚಿತ ಊಟ ವಿತರಿಸುವುದಾಗಿ ತಮ್ಮ ಸ್ನೇಹಿತರು ಮತ್ತು ಗ್ರಾಮಸ್ಥರಿಗೆ ಭರವಸೆ ನೀಡಿದ್ದರು. ಅದರಂತೆ ಬುಧವಾರ ರಾತ್ರಿ ನಿಂಬಣ್ಣವರ್ ಗ್ರಾಮಸ್ಥರಿಗೆ ಕೋಳಿ, ಮಟನ್ ಮತ್ತು ಎಗ್ ರೈಸ್ ಸಿದ್ಧಪಡಿಸಿ ಊಟ ಹಾಕಿದ್ದಾರೆ.

