ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ: ಗದಗ ಅಭಿಮಾನಿಯಿಂದ ಗ್ರಾಮಸ್ಥರಿಗೆ ಭರ್ಜರಿ ಬಾಡೂಟ!
ಡಿಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಉಚಿತ ಊಟ ವಿತರಿಸುವುದಾಗಿ ತಮ್ಮ ಸ್ನೇಹಿತರು ಮತ್ತು ಗ್ರಾಮಸ್ಥರಿಗೆ ಭರವಸೆ ನೀಡಿದ್ದರು. ಅದರಂತೆ ಬುಧವಾರ ರಾತ್ರಿ ನಿಂಬಣ್ಣವರ್ ಗ್ರಾಮಸ್ಥರಿಗೆ ಕೋಳಿ, ಮಟನ್ ಮತ್ತು ಎಗ್ ರೈಸ್ ಸಿದ್ಧಪಡಿಸಿ ಊಟ ಹಾಕಿದ್ದಾರೆ.

ಗದಗ: ಡಿ.ಕೆ.ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಯೊಬ್ಬರು ಗ್ರಾಮಸ್ಥರಿಗೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ.
ತಾಲ್ಲೂಕಿನ ರಾಮೇನಹಳ್ಳಿ ಗ್ರಾಮದ ನಿಂಗರಾಜ ನಿಂಬಣ್ಣವರ ಅವರು ಬುಧವಾರ ರಾತ್ರಿ ಗ್ರಾಮಸ್ಥರಿಗೆ ಬಾಡೂಟ ಹಾಕಿಸಿದರು. ಇದಕ್ಕಾಗಿ ಅವರು ಸುಮಾರು 45 ಸಾವಿರವರೆಗೆ ಖರ್ಚು ಮಾಡಿ ಅಡುಗೆ ಸಿದ್ಧಪಡಿಸಿದರು.
ಡಿಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಉಚಿತ ಊಟ ವಿತರಿಸುವುದಾಗಿ ತಮ್ಮ ಸ್ನೇಹಿತರು ಮತ್ತು ಗ್ರಾಮಸ್ಥರಿಗೆ ಈ ಹಿಂದೆ ಭರವಸೆ ನೀಡಿದ್ದರು. ಅದರಂತೆ ಬುಧವಾರ ರಾತ್ರಿ ನಿಂಬಣ್ಣವರ್ ಗ್ರಾಮಸ್ಥರಿಗೆ ಕೋಳಿ, ಮಟನ್ ಮತ್ತು ಎಗ್ ರೈಸ್ ಸಿದ್ಧಪಡಿಸಿ ಊಟ ಹಾಕಿದ್ದಾರೆ.
ನಿಂಗರಾಜ್ ಡಿಕೆಶಿ ಅವರ ಅಭಿಮಾನಿ, ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ ನಮ್ಮೆಲ್ಲರನ್ನೂ ಆಹ್ವಾನಿಸಿದ್ದಾರೆ. ಅನೇಕ ಗ್ರಾಮಸ್ಥರು ಭೋಜನ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಅವರು ಕೋಳಿ, ಮಟನ್ ಮತ್ತು ಎಗ್ ರೈಸ್ ತಯಾರಿಸಿದರು. ನಿಂಗರಾಜ್ ಶ್ರೀಮಂತರಲ್ಲ. ಅವರು ಕಡಿಮೆ ಸಂಪಾದಿಸುತ್ತಾರೆ, ಆದರೆ ಅವರ ನಾಯಕನ ಮೇಲಿನ ಗೌರವ ಅದ್ಭುತವಾಗಿದೆ. ಅನೇಕ ಗ್ರಾಮಸ್ಥರು ಅವರ ಕಾರ್ಯವೈಖರಿಯನ್ನು ಮೆಚ್ಚಿದರು" ಎಂದು ಭೋಜನದಲ್ಲಿ ಭಾಗವಹಿಸಿದ್ದ ರಾಮೇನಹಳ್ಳಿ ನಿವಾಸಿ ಧನೇಶ್ ರಣತೂರ್ ತಿಳಿಸಿದ್ದಾರೆ.
ಮುಂಡರಗಿಯಲ್ಲಿ ಎಗ್‌ರೈಸ್ ಅಂಗಡಿ ನಡೆಸುತ್ತೇನೆ. ಬಾಲ್ಯದಿಂದಲೂ ನಾನು ಡಿ.ಕೆ.ಶಿವಕುಮಾರ್ ಅಭಿಮಾನಿಯಾಗಿದ್ದು, ಅವರು ಮುಖ್ಯಮಂತ್ರಿಯಾಗಿದ್ದ ಖುಷಿಯಲ್ಲಿ ಬಾಡೂಟವನ್ನು ಗ್ರಾಮಸ್ಥರಿಗೆ ಹಾಕಿಸಿದ್ದೇನೆ ಎಂದು ನಿಂಗರಾಜ ತಿಳಿಸಿದರು. ‘ಒಂದಿಲ್ಲೊಂದು ದಿನ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವರು ಎಂಬ ನಿರೀಕ್ಷೆಯಿತ್ತು. ಅದು ಜೂನ್ 3ರಂದು ಈಡೇರಿತು. ಅವಕಾಶ ಸಿಕ್ಕರೆ, ಅವರನ್ನು ಖಂಡಿತ ಭೇಟಿಯಾಗಿ ಅಭಿನಂದಿಸುತ್ತೇನೆ’ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



