Gadag

ಗದಗ: ಬಸ್–ಟಾಟಾ ಸುಮೋ ಮುಖಾಮುಖಿ ಡಿಕ್ಕಿ; ಮೂವರು ಮಹಿಳೆಯರು ಸೇರಿ ಐವರ ದುರ್ಮರಣ
ಕೆಎಸ್ಆರ್'ಟಿಸಿ ಬಸ್ ಹಾಗೂ ಟಾಟಾ ಸುಮೋ ವಾಹನ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮಹಿಳೆಯರು ಸೇರಿ ಐವರು ದುರ್ಮರಣವನ್ನಪ್ಪಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಿಡಗುಂದಿಕೊಪ್ಪ ಕ್ರಾಸ್ ಬಳಿ ಸೋಮವಾರ ನಡೆದಿದೆ.

ಬರ-ನಷ್ಟ, ಆರ್ಥಿಕ ಅಭದ್ರತೆ: ಈ ಗ್ರಾಮಗಳ ಯುವಕರನ್ನು ಮದುವೆಯಾಗಲು ಹುಡುಗಿಯರೇ ಒಪ್ಪುತ್ತಿಲ್ಲ!
ಹುಡುಗಿಯನ್ನು ಮದುವೆ ಮಾಡಿ ಕೊಡುವಾಗ ಮನೆಯವರು, ಹೆಣ್ಣಿನ ಹೆತ್ತವರು ಮುಖ್ಯವಾಗಿ ಹುಡುಗನ ಆರ್ಥಿಕ ಭದ್ರತೆ ಬಗ್ಗೆ ವಿಚಾರ ಮಾಡುತ್ತಾರೆ. ಆರ್ಥಿಕವಾಗಿ ಸಬಲರಾಗಿಲ್ಲದಿದ್ದರೆ ಮಗಳನ್ನು ಕೊಡಲು ತಂದೆ-ತಾಯಿ ಹಿಂದೇಟು ಹಾಕುತ್ತಾರೆ.

ಗದಗ: ರೈಲಿಗೆ ಸಿಲುಕಿ ಎಂಟು ಅಡಿ ಉದ್ದದ ಮೊಸಳೆ ಸಾವು
ರೈಲಿನಡಿ ಸಿಲುಕಿ ಮೊಸಳೆ ಸಾವಿಗೀಡಾಗಿರುವ ಘಟನೆ ಗದಗ ಜಿಲ್ಲೆಯಲ್ಲಿ ಸೋಮವಾರ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಳೇ ಆಲೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಆಪರೇಷನ್ ಹಸ್ತ: ಬಿಜೆಪಿ ಮಾಜಿ ಶಾಸಕ ರಾಮಣ್ಣ ಲಮಾಣಿ ಅ.10ಕ್ಕೆ ಕಾಂಗ್ರೆಸ್ ಸೇರ್ಪಡೆ
ಮಾಜಿ ಶಾಸಕ ರಾಮಣ್ಣ ಲಮಾಣಿ ಅವರು ಬಿಜೆಪಿಗೆ ಗುಡ್ ಬೈ ಹೇಳಿದ್ದು, ಅಕ್ಟೋಬರ್ 10 ರಂದು ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಹೇಳಿದ್ದಾರೆ.

ಪಂಚತಂತ್ರ ಕಥೆಗಳ ಹಿಂದಿರುವ ವ್ಯಕ್ತಿ ದುರ್ಗಸಿಂಹನ ಕಥೆ ಹೇಳುತ್ತದೆ ಈ ದೇವಾಲಯ!
ಗದಗ ಜಿಲ್ಲೆಯ ರೋಣ ತಾಲೂಕಿನ ಸವದಿ ಗ್ರಾಮದ ದುರ್ಗಸಿಂಹ ಈ ಕಥೆಗಳ ಮೂಲ ಲೇಖಕ. ಅವುಗಳನ್ನು ಆತ ಅಸಂಖ್ಯಾತ ಭಾರತೀಯ ಮತ್ತು ವಿದೇಶಿ ಭಾಷೆಗಳಿಗೆ ಅನುವಾದಿಸಿದ್ದಾನೆ ಎಂದು ಕೆಲವು ಇತಿಹಾಸ ಪ್ರಾಧ್ಯಾಪಕರು ಪ್ರತಿಪಾದಿಸುತ್ತಾರೆ.

ಗದಗ: ಸೋಮೇಶ್ವರ ದೇವಸ್ಥಾನದಲ್ಲಿ ನಿಧಿ ಶೋಧ; ಶಿವನ ಮೂರ್ತಿಯನ್ನು ವಿರೂಪಗೊಳಿಸಿದ ದುಷ್ಕರ್ಮಿಗಳು
ಲಕ್ಕುಂಡಿಯ ಐತಿಹಾಸಿಕ ಸೋಮೇಶ್ವರ ದೇವಸ್ಥಾನದ ಶಿವನ ಮೂರ್ತಿಯನ್ನು ಕೆಲ ಕಿಡಿಗೇಡಿಗಳು ಶುಕ್ರವಾರ ಹೊರತೆಗೆದಿದ್ದಾರೆ. ದೇವಸ್ಥಾನದ ಅರ್ಚಕರು ಪೊಲೀಸರಿಗೆ ದೂರು ನೀಡಿದ್ದು, ಘಟನೆ ಬೆಳಕಿಗೆ ಬಂದಿದೆ. ನಿಧಿಯನ್ನು ಪರಿಶೀಲಿಸಲು ದುಷ್ಕರ್ಮಿಗಳು ಶಿವನ ಮೂರ್ತಿಯನ್ನು ತೆಗೆದು ಅದರಡಿಯಲ್ಲಿ 10 ಅಡಿಗೂ ಹೆಚ್ಚು ಆಳಕ್ಕೆ ನೆಲವನ್ನು ಅಗೆದಿದ್ದಾರೆ.

ಗದಗ: ಆಂಜನೇಯ ದೇವಾಲಯದ ಅರ್ಚಕರಾಗಿ ಕೆಲಸ ನಿರ್ವಹಿಸುತ್ತಿರುವ ಮುಸ್ಲಿಂ ವ್ಯಕ್ತಿ; ಕೋಮು ಸೌಹಾರ್ದತೆಗೆ ಉದಾಹರಣೆ!
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಕೋರಿಕೊಪ್ಪ ಹನುಮಾನ ದೇವಸ್ಥಾನದಲ್ಲಿ ಕಳೆದ 150 ವರ್ಷಗಳಿಂದ ಮುಸ್ಲಿಮರು ಅರ್ಚಕ ವೃತ್ತಿ ನಿರ್ವಹಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಹಿಂದೂ ಸಹೋದರರು ಅವರಿಗೆ ವಿಶೇಷ ಹಕ್ಕು ನೀಡಿದ್ದಾರೆ.

ಸೆಪ್ಟೆಂಬರ್ 3 ರಂದು ಟರ್ಫ ಹಾಕಿ ಕ್ರೀಡಾಂಗಣ ಲೋಕಾರ್ಪಣೆ: ಸಚಿವ ಎಚ್.ಕೆ ಪಾಟೀಲ್
ಗದಗ-ಬೆಟಗೇರಿ ನಗರದ ಹೃದಯ ಭಾಗದಲ್ಲಿ ಅಂದಾಜು 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಟರ್ಫ ಹಾಕಿ ಕ್ರೀಡಾಂಗಣ ಸೆಪ್ಟೆಂಬರ 3 ರಂದು ಮುಂಜಾನೆ 9 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಸಚಿವ ಎಚ್.ಕೆ ಪಾಟೀಲ್ ಅವರು ಸೋಮವಾರ ಹೇಳಿದ್ದಾರೆ.

ಚಂದ್ರಯಾನ-3 ಮಿಷನ್ ಯಶಸ್ವಿ: ಕರ್ನಾಟಕದ ಗದಗ, ಶಿವಮೊಗ್ಗ ಜಿಲ್ಲೆಯ ವಿಜ್ಞಾನಿಗಳ ಕೊಡುಗೆ ಏನು?
ಚಂದ್ರಯಾನ-3ರ ಯಶಸ್ಸಿಗೆ ಇಡೀ ದೇಶವೇ ಸಂಭ್ರಮದಿಂದ ಕೂಡಿದ್ದರೆ, ಪ್ರೊಪಲ್ಷನ್ ಸಿಸ್ಟಮ್, ಪ್ರೊಪಲ್ಷನ್ ಮಾಡ್ಯೂಲ್ನ ಉಪ ಯೋಜನಾ ನಿರ್ದೇಶಕ (ಡಿಪಿಡಿ) ಸಿ. ರಾಮು ಅವರ ತವರೂರಾದ ಶಿವಮೊಗ್ಗ ನಗರವು ಹೆಮ್ಮೆಯಿಂದ ಕುಣಿದಾಡಿದೆ.

