fine

ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಫಲಶ್ರುತಿ: ದಾವಣಗೆರೆಯಲ್ಲಿ ಕಸ ಎಸೆದ 8 ಮಂದಿಗೆ ದಂಡ ವಿಧಿಸಿದ ಅಧಿಕಾರಿಗಳು
ನಗರದ ರೇಣುಕಾ ಮಂದಿರದ ಬಳಿಯಲ್ಲಿ ಕಸ ಎಸೆಯುವ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದ ನಂತರ ದಾವಣಗೆರೆ ಸಿಟಿ ಕಾರ್ಪೊರೇಷನ್ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ನಗರದಲ್ಲಿ ಕಸ ಎಸೆಯುವವರ ಮೇಲೆ ಕಣ್ಣಿಟ್ಟಿದ್ದು, ದಂಡ ವಿಧಿಸುತ್ತಿದ್ದಾರೆ.

ಪ್ಲೇ ಸ್ಟೋರ್ ನೀತಿ; ಗೂಗಲ್ ಗೆ 936.44 ಕೋಟಿ ರೂಪಾಯಿ ದಂಡ, 1 ತಿಂಗಳ ಅವಧಿಯಲ್ಲಿ ಟೆಕ್ ದೈತ್ಯ ಸಂಸ್ಥೆಗೆ 2 ನೇ ಶಾಕ್!
ಗೂಗಲ್ ನ ಪ್ಲೇ ಸ್ಟೋರ್ ನೀತಿಗಳ ವಿರುದ್ಧ ಭಾರತದ ಸ್ಪರ್ಧಾತ್ಮಕ ಆಯೋಗ 2 ನೇ ಬಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, 936.44 ಕೋಟಿ ರೂಪಾಯಿ ದಂಡ ವಿಧಿಸಿದೆ.

ಸೀಟ್ ಬೆಲ್ಟ್ ಧರಿಸದವರಿಗೆ 1,000 ರೂ. ದಂಡ ವಿಧಿಸಲು ರಾಜ್ಯ ಸರ್ಕಾರ ಆದೇಶ
ಸೀಟ್ ಬೆಲ್ಟ್ ಧರಿಸದವರಿಗೆ 1,000 ರೂ. ದಂಡ ವಿಧಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ಮೇರೆಗೆ ಪೊಲೀಸ್ ಇಲಾಖೆ ಈ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲಾ ಕಮಿಷನರೇಟ್ ಮತ್ತು ಪೊಲೀಸ್ ಅಧೀಕ್ಷಕರುಗಳಿಗೆ ಇಲಾಖೆಯಿಂದ ಸೂಚನೆ ನೀಡಲಾಗಿದೆ.

ಅರ್ಜಿಯಲ್ಲಿ ಆಕ್ಷೇಪಾರ್ಹ ಫೋಟೋಗಳು: ಅಡ್ವೊಕೇಟ್ ಗೆ ಬಾಂಬೆ ಹೈಕೋರ್ಟ್ ನಿಂದ 25,000 ರೂಪಾಯಿ ದಂಡ
ತನ್ನ ಕಕ್ಷಿದಾರರ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದ ಅರ್ಜಿಯಲ್ಲಿ ಆಕ್ಷೇಪಾರ್ಗ ಫೋಟೊ ಬಳಸಿದ್ದ ಅಡ್ವೊಕೇಟ್ ಗೆ ಬಾಂಬೆ ಹೈಕೋರ್ಟ್ 25,000 ರೂಪಾಯಿ ದಂಡ ವಿಧಿಸಿದೆ

ಕ್ಷುಲ್ಲಕ ಕಾರಣಕ್ಕೆ ಅರ್ಜಿ: ವಕೀಲರಿಗೆ 5 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್
ಮುಖ್ಯ ಮಾಹಿತಿ ಆಯುಕ್ತ ಮತ್ತು ಮಾಹಿತಿ ಆಯುಕ್ತರ ನೇಮಕ ಕುರಿತು ಏಕ ಸದಸ್ಯ ನ್ಯಾಯಪೀಠದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿ ಸಾರ್ವಜನಿಕ ಸಮಯ ಹಾಳು ಮಾಡಿದ್ದಕ್ಕಾಗಿ ಸುಳ್ಯ ತಾಲೂಕಿನ ಪಂಜಿಗರ ಹೌಸ್ನ ವಕೀಲ ಪಿ ಮೋಹನ್ ಚಂದ್ರ ಅವರಿಗೆ ಹೈಕೋರ್ಟ್ ರೂ. 5 ಲಕ್ಷ ದಂಡ ವಿಧಿಸಿದೆ.

ಮುಂಬೈನ ಪ್ರತಿಷ್ಠಿತ ಲಾಲ್ಬಾಗ್ಚಾ ರಾಜಾ ಗಣೇಶ ಸಮಿತಿಗೆ 3.66 ಲಕ್ಷ ರೂ ದಂಡ..!; ಕಾರಣ ಏನು ಗೊತ್ತಾ?
ದೇಶದ ಪ್ರತಿಷ್ಠಿಕ ಗಣೇಶೋತ್ಸವ ಸಮಿತಿಗಳಲ್ಲಿ ಒಂದಾದ ಮುಂಬೈನ ಪ್ರತಿಷ್ಠಿತ ಲಾಲ್ಬಾಗ್ಚಾ ರಾಜಾ ಗಣೇಶ ಸಮಿತಿಗೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ಬರೊಬ್ಬರಿ 3.66 ಲಕ್ಷ ರೂ ದಂಡ ವಿಧಿಸಿದೆ.

ಬೆಂಗಳೂರು: ಮಳೆಯಿಂದ ರಕ್ಷಣೆ ಪಡೆಯಲು ಅಂಡರ್ ಪಾಸ್ ನಲ್ಲಿ ವಾಹನ ನಿಲ್ಲಿಸಿದರೆ ದಂಡ!
ಮಳೆ ಬರುವ ವೇಳೆ ಅಂಡರ್ಪಾಸ್ನಲ್ಲಿ ವಾಹನ ನಿಲ್ಲಿಸಿಕೊಂಡು ನಿಂತರೆ ದಂಡ ವಿಧಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ, ಮಳೆ ಬರುವ ಸಂದರ್ಭದಲ್ಲಿ ಬ್ರಿಡ್ಜ್ ಗಳ ಕೆಳಗೆ ಮತ್ತು ಅಂಡರ್ ಪಾಸ್ ಗಳಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ.

ಭಾರತ-ಪಾಕ್ ಪಂದ್ಯ ವೀಕ್ಷಿಸುವ ವಿದ್ಯಾರ್ಥಿಗಳಿಗೆ ₹ 5,000 ದಂಡ: ಶ್ರೀನಗರ ಕಾಲೇಜು ಆದೇಶ
ಭಾನುವಾರ ನಡೆಯಲಿರುವ ಭಾರತ-ಪಾಕಿಸ್ತಾನ ಏಷ್ಯಾಕಪ್ ಕ್ರಿಕೆಟ್ ಪಂದ್ಯವನ್ನು ಗುಂಪು ಕಟ್ಟಿಕೊಂಡು ನೋಡದಂತೆ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ವಿಚಾರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡದಂತೆ ಶ್ರೀನಗರದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ಐಟಿ) ವಿದ್ಯಾರ್ಥಿಗಳಿಗೆ ತಿಳಿಸಿದೆ.

ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸುತ್ತಿದ್ದೀರಾ? ಶೀಘ್ರದಲ್ಲೇ 250 ರೂ. ದಂಡ ಕಟ್ಟಲು ಸಿದ್ಧರಾಗಿ...
ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸುವವರಿಗೆ ಶೀಘ್ರದಲ್ಲೇ ರೂ.250 ದಂಡ ವಿಧಿಸಲು ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

