fine

ಅಂತರ್ಜಾತಿ ವಿವಾಹವಾಗಿದ್ದಕ್ಕೆ ದಂಪತಿಗೆ 3 ಲಕ್ಷ ರೂ. ದಂಡ; ದೂರು ನೀಡಿದ್ದಕ್ಕೆ 6 ಲಕ್ಷಕ್ಕೆ ಏರಿಸಿ, ಬಹಿಷ್ಕಾರದ ಶಿಕ್ಷೆ!
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಟ ಪದ್ಧತಿಗಳು ಮಾತ್ರ ಇನ್ನೂ ದೂರವಾಗಿಲ್ಲ. ಗಡಿನಾಡು ಚಾಮರಾಜನಗರ ಜಿಲ್ಲೆಯಲ್ಲಿ ಅದೆಷ್ಟೋ ಕುಟುಂಬಗಳು ಈ ಅನಿಷ್ಠ ಪದ್ಧತಿಗೆ ಸಿಲುಕಿ ಪರಿತಪಿಸುತ್ತಲೇ ಇವೆ.

ಮಾರಾಟವಾಗಿದ್ದ ನಿವೇಶನ ಮರು ಹರಾಜು ಹಾಕಿದ 'ಮುಡಾ'ಗೆ 11.88 ಲಕ್ಷ ರೂ. ದಂಡ!
ಅದಾಗಲೇ ಮಾರಾಟವಾಗಿದ್ದ ಭೂಮಿಯನ್ನು ವ್ಯಕ್ತಿಯೊಬ್ಬರಿಗೆ ಮರು ಮಾರಾಟ ಮಾಡಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ರೂ.11.88 ಲಕ್ಷ ದಂಡವನ್ನು ವಿಧಿಸಿದೆ.

77 ವರ್ಷದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮಾಜಿ ಅಧಿಕಾರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ, 2 ಲಕ್ಷ ರೂಪಾಯಿ ದಂಡ
1991 ಮತ್ತು 1998 ರ ನಡುವೆ 4.40 ಕೋಟಿ ರೂಪಾಯಿ ದುರುಪಯೋಗದ ಆರೋಪದ ಮೇಲೆ 77 ವರ್ಷದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮಾಜಿ ಡೆಪ್ಯುಟಿ ಮ್ಯಾನೇಜರ್ಗೆ ವಿಶೇಷ ಸಿಬಿಐ ನ್ಯಾಯಾಲಯವು ನಾಲ್ಕು ವರ್ಷಗಳ ಸಾದಾ ಜೈಲು ಶಿಕ್ಷೆ ಮತ್ತು 2 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಜನವರಿ ಒಂದೇ ತಿಂಗಳಿನಲ್ಲಿ 6.7 ಲಕ್ಷ ರೂ. ದಂಡ ಸಂಗ್ರಹಿಸಿದ ಬಿಎಂಟಿಸಿ
ಸಂಸ್ಥೆಯ ಆದಾಯ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಿರುವ ಬಿಎಂಟಿಸಿ, ದಂಡದ ರೂಪದಲ್ಲಿ ಜನವರಿ ಒಂದೇ ತಿಂಗಳಿನಲ್ಲಿ 6.77 ಲಕ್ಷ ರುಪಾಯಿಗಳನ್ನು ಸಂಗ್ರಹಿಸಿದೆ.

ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ ನೀಡಲು ವಿಳಂಬ ನೀತಿ; ಬ್ಯಾಂಕ್, ಕೇಂದ್ರ ಸರ್ಕಾರಕ್ಕೆ ರೂ.1 ಲಕ್ಷ ದಂಡ ವಿಧಿಸಿದ ಹೈಕೋರ್ಟ್
ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರರೊಬ್ಬರಿಗೆ ಬರಬೇಕಿದ್ದ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಯ ಬಾಕಿ ಪಾವತಿಸದೆ ಇಳಿವಯಸ್ಸಿನಲ್ಲಿ ಅವರನ್ನು ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಿದ್ದ ಕೇಂದ್ರ ಗೃಹ ಸಚಿವಾಲಯ ಮತ್ತು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕೆನರಾ ಬ್ಯಾಂಕ್ಗೆ ಹೈಕೋರ್ಟ್...

ಪೈಲಟ್ ತರಬೇತಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಏರ್ ಏಷ್ಯಾಗೆ 20 ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ
ಪೈಲಟ್ ತರಬೇತಿ ನಿಯಮಗಳನ್ನು ಸರಿಯಾಗಿ ಪಾಲಿಸದ ಏರ್ ಏಷ್ಯಾಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) 20 ಲಕ್ಷ ದಂಡ ವಿಧಿಸಿದೆ.

ದಂಡ ಮನ್ನಾ ಮಾಡಿ, ಬಾಡಿಗೆ ಪಡೆಯಿರಿ: ಬಿಬಿಎಂಪಿಗೆ ಶಿವಾಜಿನಗರದ ವ್ಯಾಪಾರಿಗಳ ಮನವಿ
ಶಿವಾಜಿನಗರ ಮಾರುಕಟ್ಟೆಗಳಲ್ಲಿ ಬಾಡಿಗೆ ಹಾಗೂ ದಂಡ ಪಾವತಿಸದ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ನೋಟಿಸ್ ಪಡೆದಿರುವ ವ್ಯಾಪಾರಿಗಳು ಇದೀಗ ದಂಡವನ್ನು ಮನ್ನಾ ಮಾಡಿ ಬಾಡಿಗೆ ಮಾತ್ರ ವಸೂಲಿ ಮಾಡುವಂತೆ ಬಿಬಿಎಂಪಿ ವಲಯ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರು: ರಸ್ತೆಯ ಕಳಪೆ ಕಾಮಗಾರಿಗೆ ದಂಡ ಕಟ್ಟಿದ್ದ ಗುತ್ತಿಗೆದಾರನಿಗೆ ಮತ್ತೆ 99 ಕೋಟಿ ರೂ. ಮೌಲ್ಯದ ಗುತ್ತಿಗೆ!
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಜೂನ್ನಲ್ಲಿ ಬೆಂಗಳೂರಿಗೆ ಭೇಟಿ ನೀಡುವುದಕ್ಕೆ ಮೊದಲು ಮಾಡಿದ ಕಳಪೆ ರಸ್ತೆ ಕಾಮಗಾರಿಯ ಧೂಳು ಇನ್ನೂ ಮಾಸುವ ಮುನ್ನವೇ ಅದರ ಕಾಮಗಾರಿಯ ಗುತ್ತಿಗೆ ಪಡೆದಿದ್ದ ರಮೇಶ್ ಎಸ್ ಗೆ ಮತ್ತೊಂದು ಕೋಟ್ಯಂತರ ರೂಪಾಯಿ ಮೌಲ್ಯದ ಗುತ್ತಿಗೆ ಕಾಮಗಾರಿ ಸಿಕ್ಕಿದೆ.

ಸಂಚಾರ ನಿಯಮ ಉಲ್ಲಂಘನೆ: ವೈರಲ್ ವಿಡಿಯೋ ನೋಡಿ ತಮಿಳು ನಟ ವಿಜಯ್ಗೆ ದಂಡ ವಿಧಿಸಿದ ಪೊಲೀಸರು
ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ತಮಿಳು ನಟ ವಿಜಯ್ಗೆ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ ಎನ್ನಲಾಗಿದೆ. ತನ್ನ ಕಾರಿನ ಮೇಲೆ ಕಪ್ಪು ಟಿಂಟೆಡ್ ಗ್ಲಾಸ್ ಅನ್ನು ಹೊಂದಿದ್ದಕ್ಕಾಗಿ ನಟನಿಗೆ 500 ರೂಪಾಯಿ ದಂಡ ವಿಧಿಸಲಾಗಿದೆ.

