Entertainment

ಇದೇ ಶುಕ್ರವಾರ ಮೇಘನರಾಜ್ ಅಭಿನಯದ 'ಇರುವುದೆಲ್ಲವ ಬಿಟ್ಟು' ಚಿತ್ರ ಬಿಡುಗಡೆ
ಸಿನಿಮಾ ಸುದ್ದಿ

ಇದೇ ಶುಕ್ರವಾರ ಮೇಘನರಾಜ್ ಅಭಿನಯದ 'ಇರುವುದೆಲ್ಲವ ಬಿಟ್ಟು' ಚಿತ್ರ ಬಿಡುಗಡೆ

ಮೇಘನರಾಜ್ ವಿವಾಹದ ನಂತರ ಅಭಿಯಿಸಿರುವ 'ಇರುವುದೆಲ್ಲವ ಬಿಟ್ಟು' ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ವೃತ್ತಿ ಬದುಕು, ವಿವಾಹ ಹಾಗೂ ಕುಟುಂಬ ಮತ್ತಿತರ ಸಂಬಂಧದ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಕಾಂತಾ ಕನ್ನಲ್ಲಿ ನಿರ್ದೇಶನ ಮಾಡಿದ್ದಾರೆ.

ಸುರಾಜ್ ಗೌಡ ಮುಂದಿನ ಸಿನಿಮಾ 'ಲಕ್ಷ್ಮಿತನಯ 'ಕ್ಕೆ ಸಹಿ
ಸಿನಿಮಾ ಸುದ್ದಿ

ಸುರಾಜ್ ಗೌಡ ಮುಂದಿನ ಸಿನಿಮಾ 'ಲಕ್ಷ್ಮಿತನಯ 'ಕ್ಕೆ ಸಹಿ

ಮದುವೆಯ ಮಮತೆಯ ಕರೆಯೋಲೊ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಸುರಾಜ್ ಗೌಡ , ಮುಂದಿನ ಸಿನಿಮಾ ಲಕ್ಷ್ಮಿ ತನಯದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.

ಬಹುಭಾಷಾ ನಟ ಪ್ರಕಾಶ್ ರಾಜ್ ತಾಯಿಗೆ ಮರೆಗುಳಿತನ!
ಸಿನಿಮಾ ಸುದ್ದಿ

ಬಹುಭಾಷಾ ನಟ ಪ್ರಕಾಶ್ ರಾಜ್ ತಾಯಿಗೆ ಮರೆಗುಳಿತನ!

ಬಹುಭಾಷಾ ನಟ ಪ್ರಕಾಶ್ ರಾಜ್ ತಾಯಿಗೆ ನೆನಪಿನ ಶಕ್ತಿ ಕಡಿಮೆ ಅಂತೆ. ಹೀಗಂತಾ ಅವರೇ ಹೇಳಿಕೊಂಡಿದ್ದಾರೆ.ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದ ಡಿಮೆನ್ಷಿಯಾ -2018 ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಸಮಾರಂಭದಲ್ಲಿ ಪ್ರಕಾಶ್ ರಾಜ್ ಈ ವಿಷಯ ತಿಳಿಸಿದರು.

ಡಾ. ವಿಷ್ಮುವರ್ಧನ್ ನಿಷ್ಠಾವಂತ  ಅಭಿಮಾನಿಯಾಗಿ  ಶ್ರೇಯಸ್ ಮಂಜು  ಬದಲು !
ಸಿನಿಮಾ ಸುದ್ದಿ

ಡಾ. ವಿಷ್ಮುವರ್ಧನ್ ನಿಷ್ಠಾವಂತ ಅಭಿಮಾನಿಯಾಗಿ ಶ್ರೇಯಸ್ ಮಂಜು ಬದಲು !

ಸ್ಯಾಂಡಲ್ ವುಡ್ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಮಂಜು ಅವರ ಚೊಚ್ಚಲ ಚಿತ್ರ ಪಡ್ಡೆಹುಲಿಯಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಸಾಂಗ್ ವೊಂದನ್ನು ಅವರಿಗೆ ಸಮರ್ಪಿಸಲು ಚಿತ್ರ ನಿರ್ಮಾಪಕರು ನಿರ್ಧರಿಸಿದ್ದಾರೆ.

ಆಶು ಬೆದ್ರೆ ತಾರಾಗಣದ 'ರಂಗ ಮಂದಿರ' ಚಿತ್ರಕ್ಕೆ ಶಾಹುರಾಜ್ ಶಿಂಧೆ ನಿರ್ದೇಶನ
ಸಿನಿಮಾ ಸುದ್ದಿ

ಆಶು ಬೆದ್ರೆ ತಾರಾಗಣದ 'ರಂಗ ಮಂದಿರ' ಚಿತ್ರಕ್ಕೆ ಶಾಹುರಾಜ್ ಶಿಂಧೆ ನಿರ್ದೇಶನ

ರಾಧಾ ಕಲ್ಯಾಣ, ಸರ್ಪ ಸಂಪದ ಮತ್ತಿತರ ಜನಪ್ರಿಯ ಧಾರಾವಾಹಿಗಳ ನಿರ್ಮಾಪಕ ಅಶು ಬೆದ್ರೆ ಜೊತೆಗೆ ಎಂಟು ವರ್ಷಗಳ ನಂತರ ಶಾಹುರಾಜ್ ಶಿಂಧೆ ರಂಗಮಂದಿರ ಶೀರ್ಷಿಕೆಯ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ

ಕನ್ನಡದಲ್ಲಿ ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೇನೆ: ತಮನ್ನಾ ಭಾಟಿಯಾ
ಸಿನಿಮಾ ಸುದ್ದಿ

ಕನ್ನಡದಲ್ಲಿ ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೇನೆ: ತಮನ್ನಾ ಭಾಟಿಯಾ

ಮಿಲ್ಕಿ ಬ್ಯೂಟಿ, ಬಹುಭಾಷಾ ತಾರೆ ತಮನ್ನಾ ಭಾಟಿಯಾ , ಸದ್ಯದಲ್ಲೇ ಕನ್ನಡ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸುವ ಇಂಗಿತ ವ್ಯಕ್ತಪಡಿಸಿದ್ದು, ಒಳ್ಳೆಯ ಕಥೆಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

ಅಭಿಷೇಕ್  ಚೊಚ್ಚಲ 'ಅಮರ್' ಚಿತ್ರದಲ್ಲಿ ನಿರುಪ್ ಭಂಡಾರಿ ಅತಿಥಿ ಪಾತ್ರ
ಸಿನಿಮಾ ಸುದ್ದಿ

ಅಭಿಷೇಕ್ ಚೊಚ್ಚಲ 'ಅಮರ್' ಚಿತ್ರದಲ್ಲಿ ನಿರುಪ್ ಭಂಡಾರಿ ಅತಿಥಿ ಪಾತ್ರ

ರಂಗಿತರಂಗ, ರಾಜರತ್ನ ಖ್ಯಾತಿಯ ನಟ ನಿರೂಪ್ ಭಂಡಾರಿ, ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಭಿನಯದ ಚೊಚ್ಚಲ ಅಮರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಳೆಯಿಂದ ಅವರು ಚಿತ್ರತಂಡ ಸೇರಲಿದ್ದಾರೆ.

'ಮೊಡವೆ' ಚಿತ್ರದಲ್ಲಿ ಆದಿತ್ಯ ಶಶಿಕುಮಾರ್ ಮತ್ತು ಅಪೂರ್ವಗೆ ತರುಣ-ತರುಣಿಯ ಪಾತ್ರ!
ಸಿನಿಮಾ ಸುದ್ದಿ

'ಮೊಡವೆ' ಚಿತ್ರದಲ್ಲಿ ಆದಿತ್ಯ ಶಶಿಕುಮಾರ್ ಮತ್ತು ಅಪೂರ್ವಗೆ ತರುಣ-ತರುಣಿಯ ಪಾತ್ರ!

ನಿರ್ದೇಶನದ ಪ್ರಥಮ ಪರಿಚಯದಲ್ಲಿಯೇ ಸಿದ್ಧಾರ್ಥ್ ಮಾರದೆಪ್ಪ ' ಮೊಡವೆ ' ಅಸಾಮಾನ್ಯ ಶೀರ್ಷಿಕೆಯನ್ನು ಆರಿಸಿಕೊಂಡಿದ್ದಾರೆ. ನಟ ಶಶಿಕುಮಾರ್ ಮಗ ಆದಿತ್ಯ ಶಶಿಕುಮಾರ್ ಈ ಚಿತ್ರದ ನಾಯಕ ನಟನಾಗಿ ಅಪೂರ್ವ ನಟಿಯಾಗಿ ಅಭಿನಯಿಸುತ್ತಿದ್ದಾರೆ.

ಹೈದ್ರಾಬಾದ್ ನಲ್ಲಿ 'ಅಯೋಗ್ಯ' ಚಿತ್ರ ಪ್ರದರ್ಶನಕ್ಕೆ ಸಂಕಷ್ಟ!
ಸಿನಿಮಾ ಸುದ್ದಿ

ಹೈದ್ರಾಬಾದ್ ನಲ್ಲಿ 'ಅಯೋಗ್ಯ' ಚಿತ್ರ ಪ್ರದರ್ಶನಕ್ಕೆ ಸಂಕಷ್ಟ!

ಅಯೋಗ್ಯ ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಬ್ಲಾಕ್ ಬುಸ್ಟರ್ ಎಂಬ ಪ್ರಶಂಸೆಗೂ ಪಾತ್ರವಾಗಿದೆ. ಆದರೆ. ಹೈದಾರಾಬಾದಿನಲ್ಲಿ ಚಿತ್ರ ಪ್ರದರ್ಶನಕ್ಕೆ ಹೋರಾಟ ಎದುರಾಗಿದೆ.