ಬಹುಭಾಷಾ ನಟ ಪ್ರಕಾಶ್ ರಾಜ್ ತಾಯಿಗೆ ಮರೆಗುಳಿತನ!
ಬಹುಭಾಷಾ ನಟ ಪ್ರಕಾಶ್ ರಾಜ್ ತಾಯಿಗೆ ನೆನಪಿನ ಶಕ್ತಿ ಕಡಿಮೆ ಅಂತೆ. ಹೀಗಂತಾ ಅವರೇ ಹೇಳಿಕೊಂಡಿದ್ದಾರೆ.ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದ ಡಿಮೆನ್ಷಿಯಾ -2018 ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಸಮಾರಂಭದಲ್ಲಿ ಪ್ರಕಾಶ್ ರಾಜ್ ಈ ವಿಷಯ ತಿಳಿಸಿದರು.

ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರಾಜ್ ತಾಯಿಗೆ ನೆನಪಿನ ಶಕ್ತಿ ಕಡಿಮೆ ಅಂತೆ. ಹೀಗಂತಾ ಅವರೇ ಹೇಳಿಕೊಂಡಿದ್ದಾರೆ.ಡಿಮೆನ್ಷಿಯಾ ( ಬುದ್ದಿಮಾಂದ್ಯತೆ ) ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದ ಡಿಮೆನ್ಷಿಯಾ -2018 ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಸಮಾರಂಭದಲ್ಲಿ ಪ್ರಕಾಶ್ ರಾಜ್ ಈ ವಿಷಯ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ,ಸಿನಿಮಾ ಮತ್ತು ಮತ್ತಿತರ ವೇದಿಕೆಗಳಲ್ಲಿ ಅಭಿಯನದ ಮೂಲಕ ಡಿಮೆನ್ಷಿಯಾ ರೋಗಕ್ಕೆ ತುತ್ತಾದವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು. ಬುದ್ಧಿಮಾಂದ್ಯತೆ ಕಾಯಿಲೆ ಇರುವ ರೋಗಿಗಳಿಗೆ ಪಾತ್ರ ನೀಡುವಂತೆ 500 ನಿಯೋಗಗಳ ಮನವೊಲಿಸಿರುವುದಾಗಿ ತಿಳಿಸಿದರು.
ಕೆಲ ತಿಂಗಳ ಹಿಂದೆ ಆಲ್ಝೈಮರ್ ರೋಗಿಯಪಾತ್ರದಲ್ಲಿ ನಿರ್ವಹಿಸಿದ್ದೇನೆ ಎಂದು ತಿಳಿಸಿದ ಪ್ರಕಾಶ್ ರಾಜ್ ತಮ್ಮ ತಾಯಿಗೂ ಮರೆಗುಳಿತನ ಇರುವ ಬಗ್ಗೆ ವಿವರಿಸಿದರು. ತಮ್ಮ ತಾಯಿ ಆಲ್ಝೈಮರ್ ರೋಗಿ ಅಲ್ಲ ಆದರೆ, ಮೆದುಳಿನಲ್ಲಿ ತೊಂದರೆಯಿಂದಾಗಿ ಚಿಕಿತ್ಸೆಯಾದ ಮೂರು ದಿನಗಳ ಬಳಿಕ ತನ್ನ ತಾಯಿ ಸ್ವಂತ ಮಗಳನ್ನೇ ನೀನು ಯಾರು ಎಂದು ಕೇಳಿದ್ದು ನನ್ನನ್ನೂ ಈಗಲೂ ಕಾಡುತ್ತದೆ ಎಂದರು.
ತಮ್ಮ ಗುರು ಬಾಲಚಂದರ್ ಅವರಿಗೆ ಮರೆವು ಕಾಯಿಲೆ ಇದೇ ಎಂದೂ ಗೊತ್ತಿದ್ದೂ ಅವರಿಗಾಗದವರು ಅವರನ್ನು ವೇದಿಕೆ ಕಾರ್ಯಕ್ರಮಗಳಿಗೆ ಬೇಕಂತಲೆ ಆಹ್ವಾನಿಸಿ ಹೀಯಾಳಿಸಿದ್ದನ್ನು ನಾನು ಕಂಡಿದ್ದೇನೆ. ಬಾಲ್ಯದಲ್ಲಿ ನಮ್ಮ ಊರಿನ ಶ್ರಿಮಂತ ವ್ಯಕ್ತಿಯೊಬ್ಬರು ಈ ಕಾಯಿಲೆಗೆ ತುತ್ತಾಗಿ ಎಲ್ಲವೂ ಇದ್ದು ಏನು ಇಲ್ಲದ ರೀತಿಯಲ್ಲಿ ಬದುಕಿದ್ದನ್ನೂ ಕಂಡಿದ್ದೇನೆ. ಅವರ ಈ ದೌರ್ಬಲ್ಯವನ್ನು ದುರ್ಬಳಕೆ ಮಾಡಿಕೊಂಡು ಅನೇಕರು ಅವರ ಆಸ್ತಿ ಲಪಾಟಿಸಿದರು. ಕೊನೆಗೂ ತನ್ನ ಆಸ್ತಿ ಲಪಟಾಯಿಸಿದವರ ಬಳಿಯೇ ಅವರು ಕೆಲಸ ಮಾಡಿದ್ದನ್ನು ನಾನು ನೋಡಿದ್ದೇನೆ ಎಂದರು.
ಇಂತಹ ರೋಗದಿಂದ ಕಂಡು ಸಮಾಜ ಹೇಗೆ ವರ್ತಿಸುತ್ತದೆ ಎಂಬುದನ್ನು ನೋಡಿದ್ದೇನೆ. ಕೆಲವು ಸಲ ಸಾರ್ವಜನಿಕ ಸಮಾರಂಭಗಳಿಗೆ ತೆರಳಲು ಮಾತನಾಡಲು ಭಯವಾಗುತ್ತದೆ ತಪ್ಪುಗಳನ್ನು ಹುಡುಕಲು ಜನರು ಕಾಯುತ್ತಿರುತ್ತಾರೆ
ಬುದ್ದಿಮಾಂದ್ಯತೆಯಿಂದ ಬಳಲುತ್ತಿರುವ ರೋಗಿಗಳನ್ನು ಅವಮಾನಿಸಿ ನಗುವ ಬದಲು ಅವರಿಗೆ ಗೌರವ ನೀಡಬೇಕಾಗಿದೆ. ಮಾನವೀಯ ಮೌಲ್ಯ ಹಾಗೂ ಸಂಬಂಧಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಪ್ರಕಾಶ್ ರಾಜ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


