divorce

ಮುರಿದು ಬಿತ್ತು 27 ವರ್ಷದ ದಾಂಪತ್ಯ: ಬಿಲ್ ಗೇಟ್ಸ್ ದಂಪತಿ ವಿಚ್ಛೇದನ ಘೋಷಣೆ
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಗೇಟ್ಸ್ ದಂಪತಿ ಮದುವೆಯಾಗಿ 27 ವರ್ಷದ ದಾಂಪತ್ಯದ ನಂತರ ವಿಚ್ಛೇದನ ಪಡೆಯುವುದಾಗಿ ಘೋಷಿಸಿದ್ದಾರೆ.

ಗಂಡನಿಂದ ಬೇರ್ಪಡಲು ಬರೋಬ್ಬರಿ 1,248 ಕೋಟಿ ರೂ. ಪರಿಹಾರ ನೀಡಿದ ಗಾಯಕಿ!
ಸಾಮಾನ್ಯವಾಗಿ ಪತ್ನಿಯಿಂದ ಬೇರ್ಪಡಲು ಪತಿ ಜೀವನಾಂಶ ನೀಡಿ ವಿಚ್ಛೇದನ ಪಡೆಯುತ್ತಾರೆ. ಆದರೆ ಖ್ಯಾತ ಗಾಯಕಿಯೊಬ್ಬರು ಗಂಡನಿಂದ ಬೇರ್ಪಡಲು ಬರೋಬ್ಬರಿ 1,248 ಕೋಟಿ ರೂಪಾಯ ಪರಿಹಾರ ನೀಡಿದ್ದಾರೆ.

ಐಎಎಸ್ ಟಾಪರ್ ಟೀನಾ ಡಾಬಿ, ಅಥರ್ ಖಾನ್ ಜೋಡಿ ವಿಚ್ಛೇದನಕ್ಕೆ ಅರ್ಜಿ!
2015ನೇ ಸಾಲಿನ ಐಎಎಸ್ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ ಟೀನಾ ಡಾಬಿ ಹಾಗೂ ಅವರ ಪತಿ ಅಥರ್ ಖಾನ್ ವಿಚ್ಛೇದನಕ್ಕೆ ಜೈಪುರ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ತಾಳ ತಪ್ಪಿದ ಸಾಹಿತಿ ಕೆ. ಕಲ್ಯಾಣ್ ಬದುಕು: ಪತಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ಪತ್ನಿ ಅಶ್ವಿನಿ!
ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಗೀತರಚನಾಕಾರ ಕೆ. ಕಲ್ಯಾಣ್ ಪತ್ನಿ ಅಶ್ವಿನಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಪತಿ ಹೆಚ್ಚು ಪ್ರೀತಿಸುತ್ತಾರೆ, ಜಗಳವೇ ಆಡುವುದಿಲ್ಲ ಎಂದು ವಿಚ್ದೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ!
ನನ್ನ ಪತಿ ಹೆಚ್ಚು ಪ್ರೀತಿಸುತ್ತಾರೆ, ಜಗಳವೇ ಆಡುವುದಿಲ್ಲ ಎಂದು ಆರೋಪಿಸಿ ಪತ್ನಿಯೊಬ್ಬಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಪೋಷಕರನ್ನು ಮನೆಯಿಂದ ಹೊರಹಾಕುವಂತೆ ಪೀಡಿಸಿದರೆ ವಿಚ್ಛೇದನ ನೀಡಬಹುದು: ಕೇರಳ ಕೋರ್ಟ್ ಮಹತ್ವದ ತೀರ್ಪು!
ಪೋಷಕರನ್ನು ಮನೆಯಿಂದ ಹೊರಹಾಕುವಂತೆ ಅಥವಾ ಕುಟುಂಬದಿಂದ ದೂರ ಇಡುವಂತೆ ಪೀಡಿಸುವುದು ಕೌರ್ಯ. ಇಂತಹ ನಡೆಯ ಅಧಾರದ ಮೇಲೆ ಪತ್ನಿಗೆ ವಿಚ್ಧೇಧನ ನೀಡಬಹುದು ಎಂದು ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಹುಟ್ಟುಹಬ್ಬದಂದೇ ನವಾಜುದ್ದೀನ್ ಸಿದ್ಧಿಕಿಗೆ ಶಾಕ್: ಡೈವೋರ್ಸ್ ನೊಟೀಸ್ ಕಳುಹಿಸಿದ ಪತ್ನಿ
ಈ ವಿವಾಹಕ್ಕೆ ನಾನು ಅಂತ್ಯ ಹಾಡುತ್ತಿದ್ದೇನೆ ಎಂದು ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ಪತ್ನಿ ಅಲಿಯಾ ಸಿದ್ದಿಕಿ ವಾಟ್ಸಾಪ್ ಮತ್ತು ಇಮೇಲ್ ಮೂಲಕ ನೊಟೀಸ್ ಕಳುಹಿಸಿದ್ದಾರೆ.

ದಾಂಪತ್ಯಕ್ಕೂ ಭಂಗ ತಂದ ಕೊರೋನಾ: ಮನೆಯಲ್ಲೇ ಇರುವ ದಂಪತಿಗಳ ನಡುವೆ ಕಿತ್ತಾಟ, ಚೀನಾದಲ್ಲಿ ಡಿವೋರ್ಸ್ ಸಂಖ್ಯೆ ಹೆಚ್ಚಳ!
ಇಷ್ಟು ಕೇವಲ ಮನುಷ್ಯನ ಜೀವವನ್ನೂ ಮಾತ್ರ ತೆಗೆದುಕೊಳ್ಳುತ್ತಿದ್ದ ಕೊರೋನಾ ಇದೀಗ ದಂಪತಿಗಳ ದಾಂಪತ್ಯ ಜೀವನಕ್ಕೂ ಭಂಗ ತಂದಿದೆ. ವೈರಸ್ ಪರಿಣಾಮ ಮನೆಗಳಲ್ಲಿಯೇ ಇರುತ್ತಿರುವ ದಂಪತಿಗಳಲ್ಲಿ ಕಿತ್ತಾಟ ಹೆಚ್ಚಾಗುತ್ತಿದ್ದು, ಪರಿಣಾಮ ಚೀನಾದಲ್ಲಿ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ.

ಏಳು ವರ್ಷಗಳ ದಾಂಪತ್ಯ ಜೀವನ ಮುರಿದುಕೊಂಡ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮೈಕೆಲ್ ಕ್ಲಾರ್ಕ್ ಅವರ ಪತ್ನಿ ಕೈಲಿಗೆ ವಿಚ್ಚೇದನ ನೀಡಿದ್ದು, ಏಳು ವರ್ಷಗಳ ದಾಂಪತ್ಯ ಜೀವನವನ್ನು ಕಡಿದುಕೊಂಡಿದ್ದಾರೆ.

