ಐಎಎಸ್ ಟಾಪರ್ ಟೀನಾ ಡಾಬಿ, ಅಥರ್ ಖಾನ್ ಜೋಡಿ ವಿಚ್ಛೇದನಕ್ಕೆ ಅರ್ಜಿ!
2015ನೇ ಸಾಲಿನ ಐಎಎಸ್ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದಿದ್ದ ಟೀನಾ ಡಾಬಿ ಹಾಗೂ ಅವರ ಪತಿ ಅಥರ್ ಖಾನ್ ವಿಚ್ಛೇದನಕ್ಕೆ ಜೈಪುರ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಜೈಪುರ: 2015ನೇ ಸಾಲಿನ ಐಎಎಸ್ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದಿದ್ದ ಟೀನಾ ಡಾಬಿ ಹಾಗೂ ಅವರ ಪತಿ ಅಥರ್ ಖಾನ್ ವಿಚ್ಛೇದನಕ್ಕೆ ಜೈಪುರ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಡಿಎನ್ ಎ ಪತ್ರಿಕೆ ವರದಿ ಮಾಡಿದ್ದು. ಜೈಪುರ ಕೋರ್ಟ್ ನಲ್ಲಿ ಟೀನಾ ಡಾಬಿ ಹಾಗೂ ಅವರ ಪತಿ ಅಥರ್ ಖಾನ್ ಅವರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ವರದಿಯಲ್ಲಿರುವಂತೆ ಕೆಲ ದಿನಗಳ ಹಿಂದೆ ಟೀನಾ ಡಾಬಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ʼಖಾನ್ʼ ಸರ್ ನೇಮ್ ತೆಗೆದು ಹಾಕಿದ್ದರು. ಅಥರ್ ಖಾನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಟಿನಾ ಅವರನ್ನು ಅನ್ಫಾಲೋ ಮಾಡಿದ್ದರು.
ಇದೀಗ ಅಧಿಕೃತವಾಗಿ ಇಬ್ಬರೂ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಕಾಶ್ಮೀರ ಮೂಲದವರಾದ ಅಥರ್ ಖಾನ್ 2015ರ ಐಎಎಸ್ ಪರೀಕ್ಷೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಇದೇ ಪರೀಕ್ಷೆಯಲ್ಲಿ ಟೀನಾ ಡಾಬಿ ಅಗ್ರ ಸ್ಥಾನಿಯಾಗಿದ್ದರು. ಟೀನಾ ಮತ್ತು ಅಥರ್ ತರಬೇತಿ ಸಂದರ್ಭದಲ್ಲಿ ಪರಸ್ಪರ ಪ್ರೀತಿಸಲಾರಂಭಿಸಿದ್ದರು ಎನ್ನಲಾಗಿದ್ದು, ಪ್ರೇಮಿಗಳಾಗಿದ್ದ ಇಬ್ಬರು 2018ರಲ್ಲಿ ಮದುವೆಯಾಗಿದ್ದರು. ಸದ್ಯ ಇಬ್ಬರೂ ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇನ್ನು ಐಎಎಸ್ ಪರೀಕ್ಷೆಯಲ್ಲಿ ಅಗ್ರ ಸ್ಥಾನದಿಂದ ಖ್ಯಾತಿಗಳಿಸಿದ್ದ ಟೀನಾ ಡಾಬಿ ಎರಡನೇ ರ್ಯಾಂಕ್ ಗಳಿಸಿದ್ದ ಅಥರ್ ಖಾನ್ ರನ್ನು ವಿವಾಹವಾಗುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದರು. ಐಎಎಸ್ ಟಾಪರ್ಸ್ ಅಂತರ ಧರ್ಮೀಯ ವಿವಾಹವಾಗಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಖ್ಯಾತ ರಾಜಕೀಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದರು. ಹಿಂದೂ ಮಹಾಸಭಾ ಈ ಮದುವೆಯನ್ನು ಲವ್ ಜಿಹಾದ್ಗೆ ಹೋಲಿಸಿ ಟೀಕಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


