Dies

'ಲಗಾನ್' ಖ್ಯಾತಿಯ ನಟ ಜಾವೇದ್ ಖಾನ್ ಅಮ್ರೋಹಿ ನಿಧನ
ಹಿರಿಯ ರಂಗಭೂಮಿ ಮತ್ತು ಬಾಲಿವುಡ್ ನಟ ಜಾವೇದ್ ಖಾನ್ ಅಮ್ರೋಹಿ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಜನಪ್ರಿಯ ಡಿಡಿ ಧಾರಾವಾಹಿ ನುಕ್ಕಡ್, ಲಗಾನ್ ಮತ್ತು ಚಕ್ ದೇ ಮತ್ತಿತರ ಚಿತ್ರಗಳಲ್ಲಿನ ಅಮೋಘ ಅಭಿನಯದಿಂದ ಅವರು ಪ್ರಸಿದ್ದರಾಗಿದ್ದರು.

ಕನ್ನಡದ ಯುವ ನಟ ಧನುಷ್ ನಿಧನ, ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ
ಕನ್ನಡ ಚಿತ್ರರಂಗದ ಮತ್ತೋರ್ವ ಉದಯೋನ್ಮುಖ ನಟ ಧನುಷ್ ನಿಧನರಾಗಿದ್ದಾರೆ. ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಲೀಡರ್, ಸಂಪಿಗೆ ಹಳ್ಳಿ, ಕೊಟ್ಲಲ್ಲಪ್ಪೋ ಕೈ, ಪ್ಯಾರ್ ಕಾ ಗೋಲು ಗುಂಬಜ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಧನುಷ್ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಕಾಶ್ಮೀರದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ರೆಹಮಾನ್ ರಹಿ ನಿಧನ
ಕಾಶ್ಮೀರದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹೆಸರಾಂತ ಕವಿ ಮತ್ತು ಪ್ರೊಫೆಸರ್ ರೆಹಮಾನ್ ರಹಿ ಸೋಮವಾರ ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು.

ರಾಮನಗರ: 250 ಪ್ರಕರಣದ ಬೇಧಿಸಿದ್ದ 'ರಾಮ್' ಹೃದಯಾಘಾತದಿಂದ ಸಾವು: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ!
ರಾಮನಗರದಲ್ಲಿ ಕಳೆದ ಆರು ವರ್ಷಗಳಿಂದ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ನಿಷ್ಣಾತನಾಗಿದ್ದ ಶ್ವಾನ ರಾಮ್ ಹೃದಯಾಘಾತದಿಂದ ಸಾವನ್ನಪ್ಪಿದೆ.

ಚಿಕನ್ ಟಿಕ್ಕಾ ಮಸಾಲಾ ಕಂಡುಹಿಡಿದ ಅಲಿ ಅಹ್ಮದ್ ಅಸ್ಲಾಮ್ ನಿಧನ
ಅತ್ಯಂತ ಜನಪ್ರಿಯ ಖಾದ್ಯ ಚಿಕನ್ ಟಿಕ್ಕಾ ಮಸಾಲಾವನ್ನು ಕಂಡುಹಿಡಿದ ಖ್ಯಾತ ಬಾಣಸಿಗ ಅಲಿ ಅಹ್ಮದ್ ಅಸ್ಲಾಮ್ ಅವರು ನಿಧನರಾಗಿದ್ದಾರೆ.

ಟಾಲಿವುಡ್ ಹಿರಿಯ ನಟ ಕೈಕಾಲ ಸತ್ಯನಾರಾಯಣ ವಿಧಿವಶ: ರಾಜ್ಕುಮಾರ್ ನಟನೆಯ ‘ಸ್ವರ್ಣಗೌರಿ’ ಚಿತ್ರದಲ್ಲಿಯೂ ನಟನೆ
ಹಿರಿಯ ನಟ ಕೈಕಾಲ ಸತ್ಯನಾರಾಯಣ ಅವರು 87ನೇ ವರ್ಷದಲ್ಲಿ ನಿಧನರಾಗಿದ್ದಾರೆ. 2021ರ ನವೆಂಬರ್ ನಂತರದಲ್ಲಿ ಕೃತಕ ಉಸಿರಾಟದ ಸಹಾಯ ಪಡೆದಿದ್ದರು.

ಡಚ್ ವಿದ್ಯಾರ್ಥಿನಿ ರೇಪ್, ಕೊಲೆಗೈದು ಆಕೆಯ ಮಾಂಸ ತಿಂದರೂ ಶಿಕ್ಷೆಗೊಳಗಾಗದ ಜಪಾನಿನ 'ನರಭಕ್ಷಕ' ಸಾವು
ಡಚ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದು ಬಳಿಕ ಆಕೆಯ ಮಾಂಸವನ್ನೇ ತಿಂದು 'ಕೋಬ್ ನರಭಕ್ಷಕ' ಎಂದು ಕುಖ್ಯಾತಿ ಪಡೆದಿದ್ದ ಜಪಾನಿನ ಹಂತಕ ಇಸ್ಸಿ ಸಾಗಾವಾ ಮೃತಪಟ್ಟಿದ್ದಾನೆ. ಆತನಿಗೆ 73 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ.

ಹಿರಿಯ ನಟಿ ತಬಸ್ಸುಮ್ ಹೃದಯಾಘಾತದಿಂದ ನಿಧನ
ಹಿರಿಯ ನಟಿ ತಬಸ್ಸುಮ್ ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.

ಚೆನ್ನೈ: ಚಲಿಸುತ್ತಿದ್ದ ರೈಲಿನ ಮುಂಭಾಗಕ್ಕೆ ತಳ್ಳಿ ಯುವತಿಯ ಹತ್ಯೆ, ಆರೋಪಿಗಾಗಿ ಪೊಲೀಸರ ಹುಡುಕಾಟ
ಚಲಿಸುತ್ತಿದ್ದ ರೈಲಿನ ಮುಂಭಾಗಕ್ಕೆ ತಳ್ಳಿ 20 ವರ್ಷದ ಯುವತಿಯನ್ನು ಹತ್ಯೆ ಮಾಡಿರುವ ಘಟನೆ ಇಲ್ಲಿನ ಸೆಂಟ್ ಥೋಮಸ್ ಮೌಂಟ್ ರೈಲ್ವೆ ನಿಲ್ದಾಣದಲ್ಲಿ ಇಂದು ನಡೆದಿದೆ.

