ಹಿರಿಯ ನಟಿ ತಬಸ್ಸುಮ್ ಹೃದಯಾಘಾತದಿಂದ ನಿಧನ
ಹಿರಿಯ ನಟಿ ತಬಸ್ಸುಮ್ ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.

ಮುಂಬೈ: ಹಿರಿಯ ನಟಿ ತಬಸ್ಸುಮ್ ಅವರು ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.
ಬಾಲ ಕಲಾವಿದೆಯಾಗಿ ಮತ್ತು ಜನಪ್ರಿಯ ದೂರದರ್ಶನ ಟಾಕ್ ಶೋ ಫೂಲ್ ಖಿಲೆ ಹೈ ಗುಲ್ಶನ್ ಗುಲ್ಶನ್ ನಿರೂಪಕಿಯಾಗಿ ಹೆಸರುವಾಸಿಯಾಗಿದ್ದ ತಬಸ್ಸುಮ್ ಹೃದಯ ಸ್ತಂಭನದ ನಂತರ ಸಾವನ್ನಪ್ಪಿದ್ದಾರೆ ಎಂದು ಅವರ ಪುತ್ರ ಹೋಶಾಂಗ್ ಗೋವಿಲ್ ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಗ್ಯಾಸ್ಟ್ರೋ ಸಮಸ್ಯೆಯಿಂದ ತಪಾಸಣೆಗಾಗಿ ಆಸ್ಪತ್ರೆಗೆ ಹೋದಾಗ ಶುಕ್ರವಾರ ರಾತ್ರಿ 8.40 ಮತ್ತು 8.42 ಕ್ಕೆ ಎರಡು ಬಾರಿ ಹೃದಯಾಘಾತದ ನಂತರ ಅವರು ಸಾವನ್ನಪ್ಪಿದ್ದಾಗಿ ಹೋಶಾಂಗ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ತಬಸ್ಸುಮ್ ಬಾಲ ಕಲಾವಿದೆಯಾಗಿ ಬೇಬಿ ತಬಸ್ಸುಮ್ ಎಂದು ಖ್ಯಾತರಾಗಿದ್ದರು. 1940 ರ ದಶಕದ ಉತ್ತರಾರ್ಧದಲ್ಲಿ ನರ್ಗೀಸ್, ಮೇರಾ ಸುಹಾಗ್, ಮಂಜಧರ್ ಮತ್ತು ಬರಿ ಬೆಹೆನ್‌ನಂತಹ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ದೂರದರ್ಶನದಲ್ಲಿ 1972 ರಿಂದ 1993 ರವರೆಗೆ ಫೂಲ್ ಖಿಲೆ ಹೈ ಗುಲ್ಶನ್ ಗುಲ್ಶನ್ ಎಂಬ ಪ್ರಸಿದ್ಧ ಟಾಕ್ ಶೋ ನಡೆಸಿಕೊಡುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


