ಡಚ್ ವಿದ್ಯಾರ್ಥಿನಿ ರೇಪ್, ಕೊಲೆಗೈದು ಆಕೆಯ ಮಾಂಸ ತಿಂದರೂ ಶಿಕ್ಷೆಗೊಳಗಾಗದ ಜಪಾನಿನ 'ನರಭಕ್ಷಕ' ಸಾವು
ಡಚ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದು ಬಳಿಕ ಆಕೆಯ ಮಾಂಸವನ್ನೇ ತಿಂದು 'ಕೋಬ್ ನರಭಕ್ಷಕ' ಎಂದು ಕುಖ್ಯಾತಿ ಪಡೆದಿದ್ದ ಜಪಾನಿನ ಹಂತಕ ಇಸ್ಸಿ ಸಾಗಾವಾ ಮೃತಪಟ್ಟಿದ್ದಾನೆ. ಆತನಿಗೆ 73 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ.

ಟೋಕಿಯೋ: ಡಚ್ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದು ಬಳಿಕ ಆಕೆಯ ಮಾಂಸವನ್ನೇ ತಿಂದು ' ಕೋಬ್ ನರಭಕ್ಷಕ' ಎಂದು ಕುಖ್ಯಾತಿ ಪಡೆದಿದ್ದ ಜಪಾನಿನ ಹಂತಕ ಇಸ್ಸಿ ಸಾಗಾವಾ ಮೃತಪಟ್ಟಿದ್ದಾನೆ. ಆತನಿಗೆ 73 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ನ್ಯೂಮೋನಿಯಾದಿಂದ ನವೆಂಬರ್ 24 ರಂದು ಸಾಗವಾ ಸಾವನ್ನಪ್ಪಿದ್ದು, ಕುಟುಂಬಸ್ಥರು ಮಾತ್ರ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ಆತನ ಕಿರಿಯ ಸಹೋದರ ಹಾಗೂ ಸ್ನೇಹಿತನೊಬ್ಬ ಹೇಳಿಕೆಯಲ್ಲಿ ತಿಳಿಸಿದ್ದಾರೆ.
1981ರಲ್ಲಿ ಇಸ್ಸಿ ಸಾಗವಾ ಪ್ಯಾರಿಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ರೆನೀ ಹಾರ್ಟೆವೆಲ್ಟ್ ಎಂಬ ಡಚ್ ವಿದ್ಯಾರ್ಥಿನಿಯನ್ನು ತನ್ನ ಮನೆಗೆ ಕರೆದು, ಆಕೆಯ ಮೇಲೆ ಅತ್ಯಾಚಾರ ನಡೆಸಿ ಕೊಂದು ಹಾಕಿದ್ದ. ನಂತರ ವಿದ್ಯಾರ್ಥಿನಿಯ ಶವವನ್ನು ಮನೆಯಲ್ಲಿ ಬಚ್ಚಿಟ್ಟು ದೇಹದ ಕೆಲ ಭಾಗಗಳನ್ನು ತಿಂದಿದ್ದಾನೆ. ಅನೇಕ ದಿನಗಳ ನಂತರ ದೇಹದ ಉಳಿದ ಭಾಗಗಳನ್ನು ಪಾರ್ಕ್ ನಲ್ಲಿ ಎಸೆಯುತ್ತಿದ್ದಾಗ ಪೊಲೀಸರು ಬಂಧಿಸಿದ್ದರು. ನಂತರ ಪೊಲೀಸರ ಮುಂದೆ ತನ್ನ ಹೀನ ಅಪರಾಧವನ್ನು ಒಪ್ಪಿಕೊಂಡಿದ್ದ.
ಆದಾಗ್ಯೂ, 1983 ರಲ್ಲಿ, ಫ್ರೆಂಚ್ ವೈದ್ಯಕೀಯ ತಜ್ಞರು ಇಸ್ಸಿ ಅವರ ಕಳಪೆ ಮಾನಸಿಕ ಸ್ಥಿತಿಯಿಂದಾಗಿ ವಿಚಾರಣೆ ಮಾಡಲು ಅನರ್ಹರು ಎಂದು ಘೋಷಿಸಿದರು. ವೈದ್ಯಕೀಯ ತಜ್ಞರು ನೀಡಿದ ವರದಿ ಪ್ರಕಾರ ಫ್ರೆಂಚ್ ಸರ್ಕಾರ ಅವರನ್ನು ಮಾನಸಿಕ ರೋಗಿ ಎಂದು ಪರಿಗಣಿಸಿ ಮನೋವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿತ್ತು. ನಂತರ 1984ರಲ್ಲಿ ಅಪರಾಧದ ಮೂರು ವರ್ಷಗಳ ನಂತರ ಫ್ರಾನ್ಸ್ ದೇಶದಿಂದ ಹೊರಹಾಕಿ ಜಪಾನ್ ಗೆ ಕಳುಹಿಸಲಾಯಿತು.
ಸಂತ್ರಸ್ತೆಯ ಕುಟುಂಬ ಸದಸ್ಯರು ಇಸ್ಸಿ ಸಾಗವಾ ನಿಗೆ ಜಪಾನ್‌ನಲ್ಲಿ ಶಿಕ್ಷೆಗೆ ಗುರಿಪಡಿಸಲು ಪ್ರಯತ್ನಿಸಿದರು. ಆದರೆ ಜಪಾನ್‌ಗೆ ಬಂದ ಇಸ್ಸೆ ಸಾಗಾವಾ ವಿಭಿನ್ನ ವ್ಯಕ್ತಿ ಎಂದು ಪರಿಗಣಿಸಿದ ಅಧಿಕಾರಿಗಳು ಅವರಿಗೆ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಅವರು ನಿರ್ಧರಿಸಿದರು. ಅಲ್ಲದೇ ಆತನನ್ನು ಜಪಾನ್‌ಗೆ ಗಡಿಪಾರು ಮಾಡಿದ ಫ್ರಾನ್ಸ್, ಅಪರಾಧ ಇತಿಹಾಸಕ್ಕೆ ಸಂಬಂಧಿಸಿದ ಫೈಲ್ ಅನ್ನು ಜಪಾನ್ ಅಧಿಕಾರಿಗಳಿಗೆ ನೀಡಲಿಲ್ಲ. ಪರಿಣಾಮವಾಗಿ, ಜಪಾನಿನ ಅಧಿಕಾರಿಗಳು ಅವನ ಪ್ರಕರಣವನ್ನು ಮುಚ್ಚಲಾಗಿದೆ ಎಂದು ಭಾವಿಸಿದರು.
ಆನಂತರ ಇಸ್ಸೆ ಸಾಗವಾ ತನ್ನ ಕಾದಂಬರಿ 'ಇನ್ ದಿ ಫಾಗ್' ಸೇರಿದಂತೆ ಎಲ್ಲೂ ಕೂಡಾ ತನ್ನ ಕೊಲೆಯ ರಹಸ್ಯವನ್ನು ಬಹಿರಂಗಪಡಿಸಲಿಲ್ಲ. ಆತನ ಹೀನ ಕೃತ್ಯದ ಹೊರತಾಗಿಯೂ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಆಗಾಗ್ಗೆ ಸಂದರ್ಶನಗಳನ್ನು ನೀಡುವ ದೊಡ್ಡ ಸೆಲೆಬ್ರಿಟಿಯಾಗಿದ್ದ. ನರಭಕ್ಷಕ ಎಂದು ಹೆಸರಾಗಿದ್ದ ಇಸ್ಸೆ ಸಾಗವಾರ ಬಗ್ಗೆ ಲೆಕ್ಕವಿಲ್ಲದಷ್ಟು ವರದಿಗಳು ಬಂದಿವೆ. ಸಾಕ್ಷ್ಯಚಿತ್ರಗಳು ತೆರೆಕಂಡಿವೆ. ಸೆಲೆಬ್ರಿಟಿ ಸ್ಟೇಟಸ್ ಅನುಭವಿಸುತ್ತಿರುವ ಇಸ್ಸೆ ಸಾಗವಾ ವಿರುದ್ಧ ವಾಗ್ದಾಳಿ ನಡೆಸಿದವರೂ ಇದ್ದಾರೆ.
ತನ್ನ ಜೀವನದುದ್ದಕ್ಕೂ ಸಹೋದರನೊಂದಿಗೆ ವಾಸಿಸುತ್ತಿದ್ದ ಇಸ್ಸೆ ಸಾಗವಾ, ಸ್ಟ್ರೋಕ್ ಸೇರಿದಂತೆ ಅವರು ಅನೇಕ ಆರೋಗ್ಯ ಸಮಸ್ಯೆಗಳ ನಂತರ ನವೆಂಬರ್ 24 ರಂದು ಮೃತಪಟ್ಟಿರುವುದಾಗಿ ವರದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


