Death

ಜಿಗಣಿ ಕ್ವಾರಿ ದುರಂತ: 2 ದಿನಗಳ ನಿರಂತರ ಶೋಧದ ಬಳಿಕ ಟೆಕ್ಕಿ ಮೃತದೇಹ ಪತ್ತೆ..!
30 ವರ್ಷದ ವಿನಯ್ ಹಲಸೂರು ನಿವಾಸಿಯಾಗಿದ್ದು, ಮೂಲತಃ ಆಂಧ್ರಪ್ರದೇಶದವರು. ಶುಕ್ರವಾರ ಟ್ರೆಕ್ಕಿಂಗ್ ತಂಡದೊಂದಿಗೆ ಜಿಗಣಿ ಬಳಿಯ ಯಲ್ಲಮ್ಮನದೊಡ್ಡಿಗೆ ಟ್ರೆಕ್ಕಿಂಗ್‌ಗೆ ತೆರಳಿದ್ದರು.

ಕನ್ನಡ ಚಿತ್ರರಂಗದಲ್ಲಿ ಖಳನಾಯಕಿಯಾಗಿ ಮಿಂಚಿದ್ದ ಹಿರಿಯ ನಟಿ ಲಲಿತಮ್ಮ ಇನ್ನಿಲ್ಲ..!
ಅನಾರೋಗ್ಯದ ಸಂದರ್ಭದಲ್ಲಿ ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲದ ಹಿನ್ನೆಲೆಯಲ್ಲಿ ಕಷ್ಟದ ಪರಿಸ್ಥಿತಿಯಲ್ಲಿದ್ದ ಅವರಿಗೆ ‘ಅಮ್ಮನ ಮಡಿಲು ಟ್ರಸ್ಟ್’ ಆಶ್ರಯ ನೀಡಿತ್ತು.

ಪ್ರೇಮಾನಂದ ಮಹಾರಾಜರ ಶಿಷ್ಯನ ಆತ್ಮಹತ್ಯೆಗೂ ಮುನ್ನ ಏನಾಯಿತು? ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!
ನಂತರ ಟೆರೇಸ್ ಮೇಲೆ ಮಲಗಿಕೊಂಡವರು ಇದ್ದಕ್ಕಿದ್ದಂತೆ ಎದ್ದು ಕೆಳಗೆ ಹಾರಿರುವುದು ಕಂಡುಬರುತ್ತದೆ. ಮತ್ತೊಬ್ಬ ಶಿಷ್ಯರು ಅವರ ಬಳಿಗೆ ಹೋಗಲು ಮೆಟ್ಟಿಲುಗಳ ಮೂಲಕ ಮೇಲ್ಛಾವಣಿಯತ್ತ ಬರುತ್ತಿರುವುದು ಕಾಣಿಸುತ್ತದೆ.

ಚಿಕ್ಕಬಳ್ಳಾಪುರ: ಶ್ರೀನಿವಾಸ ಸಾಗರ ಡ್ಯಾಮ್ ನಲ್ಲಿ ಮುಳುಗಿ ತಾಯಿ-ಮಗ ಸಾವು!
ಆಟೋ ಚಾಲಕರಾಗಿರುವ ರಾಜು, ಮಕ್ಕಳಿಗೆ ಗಾಂಧಿ ಜಯಂತಿ ರಜೆ ಇದ್ದಿದ್ದರಿಂದ ಕುಟುಂಬ ಸಮೇತ ಜಲಾಶಯಕ್ಕೆ ಬಂದಿದ್ದರು. ಈ ವೇಳೆ, ಜಲಾಶಯದ ನೀರಿನಲ್ಲಿ ಆಟ ಆಡಲು ನೀರಿನಲ್ಲಿ ಇಳಿದಿದ್ದಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ಸಕ್ರೆಬೈಲು: ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆ 'ಶೌರ್ಯ' ಸಾವು
ಸಕ್ರೆಬೈಲು ಆನೆ ಬಿಡಾರಕ್ಕೆ ಕರೆತಂದ ನಂತರ ಇಲ್ಲಿನ ಕ್ರಾಲ್ ನಲ್ಲಿಟ್ಟು ಪಳಗಿಸುವ ಕಾರ್ಯ ನಡೆಸಲಾಗುತ್ತಿತ್ತು. ಆದರೆ, ಪಳಗಿಸುವ ವೇಳೆ ಆನೆಯು ಅನಾರೋಗ್ಯದಿಂದ ಬಳಲುತ್ತಿತ್ತು. ಬಿಡಾರದ ವೈದ್ಯರಾದ ಡಾ. ಮುರುಳಿ ಅವರು ಆನೆಗೆ ಚಿಕಿತ್ಸೆ ನೀಡುತ್ತಿದ್ಧರು

ಉತ್ತರ ಪ್ರದೇಶದಲ್ಲಿ ವರುಣನ ರೌದ್ರಾವತಾರ; 63 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆ; ಅವಾಂತರಕ್ಕೆ 10 ಮಂದಿ ಬಲಿ, 17 ಜನರಿಗೆ ಗಾಯ..!
ರಾಜ್ಯದ 63 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಹಲವು ಪ್ರದೇಶಗಳಲ್ಲಿ ಹಠಾತ್ ಪ್ರವಾಹದ ಆತಂಕ ಎದುರಾಗಿದೆ. ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶದಲ್ಲಿ ವಾಡಿಕೆಗಿಂತ 19 ಪಟ್ಟು ಹೆಚ್ಚು ಮಳೆಯಾಗಿದೆ.

ಸಂಗೀತ ಲೋಕಕ್ಕೆ ಆಘಾತ: 'ಕನ್ನಡದ ಶಿವಮಣಿ' ಎಂದೇ ಖ್ಯಾತರಾಗಿದ್ದ ಡ್ರಮ್ಮರ್ ದೇವ ಇನ್ನಿಲ್ಲ..!
ಕಳೆದ ಜೂನ್‌ನಲ್ಲಿ ದೇವ್ ಅವರಿಗೆ ಪಾರ್ಶ್ವವಾಯು (ಸ್ಟ್ರೋಕ್) ಕಾಣಿಸಿಕೊಂಡಿತ್ತು. ಬಳಿಕ ಅವರ ಆರೋಗ್ಯ ಸ್ಥಿತಿ ಕ್ರಮೇಣ ಹದಗೆಟ್ಟಿತ್ತು. ಗ್ಯಾಂಗ್ರಿನ್ ಸಮಸ್ಯೆಯಿಂದ ಅವರ ಬಲಗಾಲನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿತ್ತು.

Yamuna Expressway ದುರಂತ: 'ನೀವು ಸತ್ತರೂ ಚಿಂತೆಯಿಲ್ಲ, ಬಸ್ ಮಾತ್ರ ನಿಲ್ಲಿಸಲ್ಲ'; ಪ್ರಯಾಣಿಕರ ಎಚ್ಚರಿಕೆ ನಿರ್ಲಕ್ಷಿಸಿ 9 ಜನರ ಸಾವಿಗೆ ಕಾರಣವಾದ ಚಾಲಕ..!
ದೆಹಲಿ ಕಾಶ್ಮೀರಿ ಗೇಟ್‌ನಿಂದ ಉತ್ತರ ಪ್ರದೇಶದ ಮಹೋಬಾಗೆ ತೆರಳುತ್ತಿದ್ದ ರಾಜ್ ಕಲ್ಪನಾ ಟ್ರಾವೆಲ್ಸ್ ಬಸ್ ಬುಧವಾರ ತಡರಾತ್ರಿ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಬೆಂಕಿಗೆ ಸಿಲುಕಿದ್ದು, ಘಟನೆಯಲ್ಲಿ 9 ಪ್ರಯಾಣಿಕರು ಮೃತಪಟ್ಟಿದ್ದಾರೆ.

ನಾವಿಕರು, ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ನಿಲ್ಲಲಿ: ಒಮಾನ್ ಕರಾವಳಿಯಲ್ಲಿ ಕ್ಷಿಪಣಿ ದಾಳಿ ಬೆನ್ನಲ್ಲೇ ವಿಶ್ವಕ್ಕೆ ಭಾರತ ಖಡಕ್ ಸಂದೇಶ..!
ದಾಳಿಯ ಕುರಿತು ನಿಕಟವಾಗಿ ಗಮನಹರಿಸಲಾಗುತ್ತಿದ್ದು, ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿಯ ಸುರಕ್ಷತೆ, ಅದರಲ್ಲೂ 19 ಭಾರತೀಯ ನಾವಿಕರ ಸುರಕ್ಷತೆ ಕುರಿತು ಒಮಾನ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ.

