Death

ತೆಲಂಗಾಣ Hazelo Pharmaದಲ್ಲಿ ಭೀಕರ ಅಗ್ನಿ ಅವಘಡ; ಇಬ್ಬರ ದುರ್ಮರಣ, ಎಂಟು ಮಂದಿಗೆ ಗಂಭೀರ ಗಾಯ..!
ಕಾರ್ಖಾನೆಯೊಳಗೆ ರಾಸಾಯನಿಕ ರಿಯಾಕ್ಟರ್ ಸ್ಫೋಟಗೊಂಡ ಬಳಿಕ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಸರಗಳ್ಳರ ಅಟ್ಟಹಾಸ: ಮಾಂಗಲ್ಯ ಸರಕ್ಕಾಗಿ 30 ಮೀಟರ್ ಎಳೆದೊಯ್ದ ಖದೀಮರು, ಮಹಿಳೆ ಸಾವು..!
ರಾಧಮ್ಮ ಸರವನ್ನು ಬಿಡದೆ ಪ್ರತಿರೋಧ ವ್ಯಕ್ತಪಡಿಸಿದಾಗ, ಸರಗಳ್ಳರು ಅವರನ್ನು ಸುಮಾರು 30 ಮೀಟರ್‌ವರೆಗೆ ರಸ್ತೆಯಲ್ಲಿ ಎಳೆದೊಯ್ದಿದ್ದಾರೆ ಎನ್ನಲಾಗಿದೆ. ಇದರಿಂದ ಅವರ ಕುತ್ತಿಗೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ತೀವ್ರ ಗಾಯಗಳಾಗಿವೆ.

ಬೆಂಗಳೂರು: 18ನೇ ಮಹಡಿಯಿಂದ ಬಿದ್ದು 72 ವರ್ಷದ ವೃದ್ಧ ಸಾವು; ಆತ್ಮಹತ್ಯೆ ಶಂಕೆ
ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಕುಟುಂಬಸ್ಥರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ನಡುವೆ ಸ್ಥಳಕ್ಕೆ ಬಂದ ಪೊಲೀಸರಿಗೆ ಪರಮೇಶ್ವರ ಅವರು ಆಕಸ್ಮಿಕವಾಗಿ ಕೆಳಗೆ ಬಿದ್ದಿರಬಹುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಯುರೋಪ್‌ನಲ್ಲಿ ತೀವ್ರಗೊಂಡ Heatwave; ಒಂದೆ ವಾರದಲ್ಲಿ 16,000 ಸಾವು!
ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಯುರೋಪಿನಾದ್ಯಂತ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ದಾಟಿ, ವಾಯುವ್ಯ ಪ್ರದೇಶಗಳಲ್ಲಿ ಮಾತ್ರ ಸಾವುಗಳು ಹೆಚ್ಚಾಗಿವೆ. ಉತ್ತರದಲ್ಲಿ ಹವಾನಿಯಂತ್ರಣದ ಕಡಿಮೆ ಅಳವಡಿಕೆಯೂ ರಾಜಕೀಯ ಸಮಸ್ಯೆಯಾಗಿ ಪರಿಣಮಿಸಿದೆ.

ಭೀಕರ: ಚಲಿಸುತ್ತಿದ್ದ ರೈಲಿನಿಂದ ಮೊಬೈಲ್ ಕದಿಯಲು ಕಳ್ಳನ ಯತ್ನ, ಕೆಳಗೆ ಬಿದ್ದು ಪ್ರಯಾಣಿಕ ದುರಂತ ಸಾವು, Video
ಗುಜರಾತ್‌ನ ಅಂಕಲೇಶ್ವರ ಸಮೀಪದ ಪನೋಲಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮೊಬೈಲ್ ಕಸಿಯುವ ಯತ್ನವೊಂದು ದುರಂತದಲ್ಲಿ ಅಂತ್ಯಗೊಂಡಿದ್ದು, ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ಪ್ರಯಾಣಿಕರೊಬ್ಬರು ಮೃತಪಟ್ಟಿದ್ದಾರೆ.

ಮನೆಯೊಳಗೇ ನಿಗೂಢ ಸಾವು, ವರ್ಷ ಕಳೆದರೂ ಸುಳಿವೇ ಇಲ್ಲ; ಬೆಂಗಳೂರಿನಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆ
ಪ್ರಾಥಮಿಕ ಮಾಹಿತಿಯ ಪ್ರಕಾರ, ದಾಕ್ಷಾಯಿಣಿ ಅವರು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಪತಿ ಹಾಗೂ ಮಗನ ಸಾವಿನ ಬಳಿಕ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

"Justice for Manasa": ಆಟೋ ಡಿಕ್ಕಿಯಾಗಿ ವಿದ್ಯಾರ್ಥಿನಿ ದಾರುಣ ಸಾವು; ಬೆಂಗಳೂರು ವಿವಿ ಆವರಣದಲ್ಲಿ ರಸ್ತೆ ತಡೆದು ವಿದ್ಯಾರ್ಥಿಗಳ ಆಕ್ರೋಶ..!
ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಮಾನಸಾ, ಬೆಂಗಳೂರು ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದು, ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ ವಾಸವಾಗಿದ್ದರು.

ಆನೆಯೊಂದಿಗೆ selfie ತೆಗೆಯಲು ಹೋಗಿ ಜೀವ ಕಳೆದುಕೊಂಡ ಉದ್ಯಮಿ; ಕನಕಪುರ ವನ್ಯಜೀವಿ ಅಭಯಾರಣ್ಯದಲ್ಲಿ ದುರಂತ..!
ಸೋಮವಾರ ಮುಂಜಾನೆ ಸುಮಾರು 1.30ರ ವೇಳೆಗೆ ಕನಕಪುರ ವನ್ಯಜೀವಿ ಅಭಯಾರಣ್ಯದ ಬಸವನಬೆಟ್ಟ ಸಮೀಪ, ಕರಬಗೆರೆ ಕೆರೆಯ ಬಳಿ ಈ ಘಟನೆ ನಡೆದಿದೆ.

ಪೆರು: ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ನೆಲಕ್ಕಪ್ಪಳಿಸಿ ಸ್ಫೋಟಗೊಂಡ ವಿಮಾನ; 11 ವಿದೇಶಿ ಪ್ರವಾಸಿಗರು ಸೇರಿ 13 ಮಂದಿ ದುರ್ಮರಣ..!
ಮೃತ ಪ್ರವಾಸಿಗರಲ್ಲಿ ಇಟಲಿಯ ಏಳು, ಜರ್ಮನಿಯ ಇಬ್ಬರು ಹಾಗೂ ಸ್ಪೇನ್ ದೇಶದ ಇಬ್ಬರು ನಾಗರಿಕರು ಇದ್ದಾರೆ ಎಂದು ಪೆರುವಿನ ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.

