coronavirus

ನೊಯ್ಡಾ ವ್ಯಕ್ತಿಯಲ್ಲಿ ದೃಢಪಟ್ಟ ಕೊರೋನಾ ವೈರಸ್: ಭಾರತದಲ್ಲಿ ಸೋಂಕಿತರ ಸಂಖ್ಯೆ 69ಕ್ಕೆ ಏರಿಕೆ
ನೊಯ್ಡಾ ಮೂಲಕ ವ್ಯಕ್ತಿಯೊಬ್ಬರಲ್ಲಿ ಕೊರೋನಾ ವೈರಸ್ ದೃಢಪಟ್ಟಿದೆ ಎಂದು ಹೇಳಲಾಗುತ್ತಿದ್ದು, ಈ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 69ಕ್ಕೆ ಏರಿಕೆಯಾಗಿದೆ.

ಕೊರೋನಾ ಸಾಂಕ್ರಾಮಿಕ ರೋಗ ಎಂದ ಡಬ್ಲ್ಯೂಹೆಚ್ಒ: ಎಲ್ಲಾ ರೀತಿಯ ವೀಸಾ ರದ್ದುಗೊಳಿಸಿದ ಭಾರತ
ಕೊರೋನಾ ವೈರಸ್ ವಿಶ್ವದಾದ್ಯಂತ ಹರಡುತ್ತಿರುವ ಹಿನ್ನೆಲೆಯಲ್ಲಿ ವೈರಸನ್ನು ಸಾಂಕ್ರಾಮಿಕ ರೋಗವೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದ ಬೆನ್ನಲ್ಲೇ, ಇದೀಗ ಭಾರತ ಸರ್ಕಾರ ಎಲ್ಲಾ ರೀತಿಯ ವೀಸಾಗಳನ್ನು ಅಮಾನತು ಮಾಡಿದೆ.

ಇಟಲಿ: ತವರಿಗೆ ಮರಳಲಾಗದೆ ಭಾರತೀಯರ ಸಂಕಷ್ಟ, ನಮ್ಮನ್ನು ಸ್ಮಗ್ಲರ್ ರೀತಿ ನೋಡಲಾಗುತ್ತಿದೆ ಎನ್ನುತ್ತಿರುವ ಸಂತ್ರಸ್ತರು
ಕೊರೋನಾ ವೈರಸ್ ಪೀಡಿತ ಇಟಲಿಯಿಂದ ಸ್ವದೇಶಕ್ಕೆ ಮರಳಲು ಸಾಧ್ಯವಾಗದೇ ಸುಮಾರು 2000 ಭಾರತೀಯರು ಇಟಲಿಯಲ್ಲಿ ಪರದಾಡುತ್ತಿದ್ದಾರೆ.

ಕೊರೊನಾವೈರಸ್ ಭೀತಿ: ಹೆಚ್ಚಿನ ಬೆಲೆಗೆ ಮಾಸ್ಕ್ ಮಾರಾಟ; ಹಲವೆಡೆ ದಾಳಿ
ರಾಜ್ಯದಲ್ಲಿ ಕೋವಿಡ್-19 ಸೋಂಕು ಹರಡದಂತೆ ರಕ್ಷಿಸಿಕೊಳ್ಳಲು ಸಾರ್ವಜನಿಕರು ಮಾಸ್ಕ್ ಬಳಸುತ್ತಿದ್ದು ಮುಖಗವಸುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಔಷಧ ನಿಯಂತ್ರಕರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೂಚಿಸಿದ್ದಾರೆ.

ಕರಗ ಉತ್ಸವಕ್ಕೆ ಕೊರೋನಾ ಅಡ್ಡಿಯಾಗದು, ಸಂಪ್ರದಾಯದಂತೆ ಆಚರಣೆ; ಮೇಯರ್ ಗೌತಮ್ ಕುಮಾರ್
ರಾಜ್ಯದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಾಣು ಸೋಂಕು ಭೀತಿಯ ನಡುವೆಯೂ ಈ ವರ್ಷದ ಐತಿಹಾಸಿಕ ಕರಗ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಂದು ಮೇಯರ್ ಗೌತಮ್ ಕುಮಾರ್ ಜೈನ್ ಹೇಳಿದ್ದಾರೆ.

ಕೊರೋನಾ ವೈರಸ್"ನ್ನು ಸಾಂಕ್ರಾಮಿಕ ರೋಗವೆಂದು ರಾಜ್ಯ ಘೋಷಿಸಿಲ್ಲ: ಆರೋಗ್ಯ ಇಲಾಖೆ
ಕೊರೋನಾ ವೈರಸ್'ನ್ನು ರಾಜ್ಯ ಸರ್ಕಾರ ಸಾಂಕ್ರಾಮಿಕ ರೋಗವೆಂದು ಇನ್ನೂ ಘೋಷಣೆ ಮಾಡಿಲ್ಲ. ಸಾಂಕ್ರಾಮಿಕ ರೋಗ ಕುರಿತ ಇಲ್ಲದ ಸುದ್ದಿಗಳನ್ನು ನಂಬಬೇಡಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್, ಪತ್ನಿ ರೀಟಾರಲ್ಲಿ ಕೊರೋನಾ ಪಾಸಿಟಿವ್
ಇಡೀ ವಿಶ್ವವನ್ನು ಬೆಚ್ಚಿಬೀಳಿಸುತ್ತಿರುವ ಕೊರೋನಾ ವೈರಸ್ ಇದೀಗ ಹಾಲಿವುಡ್'ಗೂ ಕಂಟಕವಾಗಿ ಪರಿಣಮಿಸಿದ್ದು, ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ಹಾಗೂ ಅವರ ಪತ್ನಿ ರೀಟಾರಲ್ಲಿ ವೈರಸ್ ಇರುವುದು ದೃಢಪಟ್ಟಿದೆ.

ಕೊರೋನ ವೈರಸ್; ಚೀನಾದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 3,158ಕ್ಕೆ ಏರಿಕೆ
ಚೀನಾದಲ್ಲಿ ಕೊರೋನ ವೈರಸ್ ಮಹಾಮಾರಿ ಸೋಂಕಿನ ಪ್ರಕರಣಗಳ ಸಂಖ್ಯೆ 80,770 ಮೀರಿದ್ದು, ಸಾವಿನ ಸಂಖ್ಯೆ 3,158ಕ್ಕೆ ತಲುಪಿದೆ. 61,000 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಆರೋಗ್ಯ ಸಮಿತಿ ಬುಧವಾರ ತಿಳಿಸಿದೆ.

ಕೊರೋನಾ ಸೋಂಕಿತರನ್ನು ಇರಿಸಿದ್ದ ಚೀನಾದ ಹೋಟೆಲ್ ಕಟ್ಟಡ ಕುಸಿತ; ಮೃತ ಸಂಖ್ಯೆ 26ಕ್ಕೆ ಏರಿಕೆ
ಚೀನಾದಲ್ಲಿ ಕೊರೋನಾ ಸೋಂಕಿತರನ್ನು ಇರಿಸಿದ್ದ ಗ್ಸಿನ್ಜಿಯಾ ಎಕ್ಸ್ ಪ್ರೆಸ್ ಹೋಟೆಲ್ ಕುಸಿತದಿಂದ ಮೃತಪಟ್ಟವರ ಸಂಖ್ಯೆ 26ಕ್ಕೇರಿಕೆಯಾಗಿದ್ದು, ಇನ್ನೂ ಮೂವರು ಕಟ್ಟಡದ ಅವಶೇಷಗಳ ಅಡಿಗೆ ಸಿಲುಕಿದ್ದಾರೆ ಎನ್ನಲಾಗಿದೆ.

