ಕೊರೋನಾ ಸಾಂಕ್ರಾಮಿಕ ರೋಗ ಎಂದ ಡಬ್ಲ್ಯೂಹೆಚ್ಒ: ಎಲ್ಲಾ ರೀತಿಯ ವೀಸಾ ರದ್ದುಗೊಳಿಸಿದ ಭಾರತ
ಕೊರೋನಾ ವೈರಸ್ ವಿಶ್ವದಾದ್ಯಂತ ಹರಡುತ್ತಿರುವ ಹಿನ್ನೆಲೆಯಲ್ಲಿ ವೈರಸನ್ನು ಸಾಂಕ್ರಾಮಿಕ ರೋಗವೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದ ಬೆನ್ನಲ್ಲೇ, ಇದೀಗ ಭಾರತ ಸರ್ಕಾರ ಎಲ್ಲಾ ರೀತಿಯ ವೀಸಾಗಳನ್ನು ಅಮಾನತು ಮಾಡಿದೆ.

ನವದೆಹಲಿ: ಕೊರೋನಾ ವೈರಸ್ ವಿಶ್ವದಾದ್ಯಂತ ಹರಡುತ್ತಿರುವ ಹಿನ್ನೆಲೆಯಲ್ಲಿ ವೈರಸನ್ನು ಸಾಂಕ್ರಾಮಿಕ ರೋಗವೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದ ಬೆನ್ನಲ್ಲೇ, ಇದೀಗ ಭಾರತ ಸರ್ಕಾರ ಎಲ್ಲಾ ರೀತಿಯ ವೀಸಾಗಳನ್ನು ಅಮಾನತು ಮಾಡಿದೆ.
ಹೊಸ ಪ್ರವಾಸಿ ಮಾರ್ಗಸೂಚಿಗಳನ್ನು ಜಾರಿಗೊಳಿಸಿರುವ ಸರ್ಕಾರ, ಮಾರ್ಚ್ 13ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ ಎಂದು ತಿಳಿಸಿದೆ.
ಹೊಸ ನಿಯಮಗಳು ಇಂತಿವೆ...
- ಸಾಗರೋತ್ತರ ಭಾರತೀಯರ ವೀಸಾ ಮುಕ್ತ ಪ್ರವಾಸ ಸವಲತ್ತನ್ನು ಏ.15ರವರೆಗೆ ತಡೆಹಿಡಯಲಾಗಿದೆ.
- ಭಾರತಕ್ಕೆ ಅನಿವಾರ್ಯಭೇಟಿ ನೀಡಬೇಕು ಎನ್ನುವ ವಿದೇಶೀಯರು ಸಮೀಪದ ಭಾರತೀಯ ದೂತವಾಸ ಸಂಪರ್ಕಿಸಬೇಕು.
- ಚೀನಾ, ಇಟಲಿ, ಇರಾನ್, ಕೊರಿಯಾ, ಫ್ರಾನ್ಸ್, ಸ್ಪೇನ್ ಹಾಗೂ ಜರ್ಮನಿಯಿಂದ ಬರುವ ಎಲ್ಲಾ ಪ್ರವಾಸಿಗರನ್ನು ಕಡ್ಡಾಯವಾಗಿ ಪ್ರತ್ಯೇಕವಾಗಿ ಇರಿಸಿ 14 ದಿನ ತಪಾಸಣೆಗೆ ಒಳಪಡಿಸಲಾಗುವುದು.
- ಭಾರತೀಯರು ಹಾಗೂ ವಿದೇಶಿಯರು ಅಗತ್ಯವಿಲ್ಲದೇ ಹೋದರೆ ಭಾರತಕ್ಕೆ ಪ್ರವಾಸ ರದ್ದುಗೊಳಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


