Corona Virus

ಕರ್ನಾಟಕದಲ್ಲಿ ತಗ್ಗಿದ ಕೊರೋನಾ: ಇಂದು 2,756 ಸೋಂಕು ಪತ್ತೆ, 7,140 ಡಿಸ್ಚಾರ್ಜ್, 40 ಸಾವಿರಕ್ಕಿಳಿದ ಸಕ್ರಿಯ ಸೋಂಕು!
ದಿನ ಕಳೆದಂತೆ ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಕಡಿಮೆಯಾಗುತ್ತಿದ್ದು, ಇಂದು 2,756 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 8,32,396ಕ್ಕೆ ಏರಿಕೆಯಾಗಿದೆ.

ಕೊರೋನಾ ಲಸಿಕೆಗಾಗಿ 50 ಸಾವಿರ ಕೋಟಿ ಮೀಸಲಿಟ್ಟ ಮೋದಿ ಸರ್ಕಾರ: ವರದಿ
ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಆದರೂ ಕೊರೋನಾ ಹತೋಟಿಗೆ ಬರುತ್ತಿಲ್ಲ. ಇದರ ನಡುವೆ ಕೊರೋನಾ ಲಸಿಕೆಗಾಗಿ 50 ಸಾವಿರ ಕೋಟಿ ರುಪಾಯಿಯನ್ನು ಮೀಸಲಿಡಲಿದೆ ಎಂದು ವರದಿಗಳು ತಿಳಿಸಿವೆ.

ರಾಜ್ಯದಲ್ಲಿ ತಗ್ಗಿದ ಕೊರೋನಾ ಅಬ್ಬರ: ಇಂದು 8,005 ಡಿಸ್ಚಾರ್ಜ್, 5,018 ಪಾಸಿಟಿವ್!
ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಕೊಂಚ ಕಡಿಮೆಯಾಗುತ್ತಿದ್ದು ಇಂದು 5,018 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 7,70,604ಕ್ಕೆ ಏರಿಕೆಯಾಗಿದೆ.

ಚಾಮರಾಜನಗರ ಕಾರಾಗೃಹದ 16 ಮಂದಿ ಕೈದಿಗಳಿಗೆ ಸೋಂಕು
ಕೊರೊನಾ ಮಹಾಮಾರಿ ಈಗ ನಾಲ್ಕುಗೋಡೆಗಳನ್ನೇ ಪ್ರಪಂಚ ಮಾಡಿಕೊಂಡಿದ್ದ ವಿಚಾರಣಾಧೀನ ಕೈದಿಗಳಿಗೂ ತಗುಲುವ ಮೂಲಕ ಸಹ ಕೈದಿಗಳಿಗೆ, ಸಿಬ್ಬಂದಿಗೆ ಆತಂಕ ತರಿಸಿದೆ.

ನರೇಂದ್ರ ಮೋದಿ ಮತ್ತು ಬಿ ಎಸ್ ಯಡಿಯೂರಪ್ಪನವರು ಕೊರೋನಾಕ್ಕಿಂತಲೂ ಅಪಾಯಕಾರಿ: ಸಿದ್ದರಾಮಯ್ಯ ಆರೋಪ
ಕೊರೋನಾ ಸೋಂಕಿನಲ್ಲಿ ಭಾರತವನ್ನು ವಿಶ್ವದಲ್ಲಿಯೇ ನಂಬರ್ 1 ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ಸುಕವಾಗಿದ್ದರೆ, ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕರ್ನಾಟಕವನ್ನು ಕೊರೋನಾ ಸೋಂಕಿನಲ್ಲಿ ದೇಶದಲ್ಲಿ ನಂಬರ್ 1 ಮಾಡಲು ಹೊರಟಿದ್ದಾರೆ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ನಿಲ್ಲದ ಕೊರೋನಾ ತಾಂಡವ: 100 ಸಾವು, ಬೆಂಗಳೂರಿನಲ್ಲಿ 3,925 ಸೇರಿ ರಾಜ್ಯದಲ್ಲಿ 9,886 ಮಂದಿಗೆ ಪಾಸಿಟಿವ್!
ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು ಇಂದು ದಾಖಲೆಯ 9,886 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 6,30,516ಕ್ಕೆ ಏರಿಕೆಯಾಗಿದೆ.

ಲಾಕ್ ಡೌನ್ ನಂತರ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿರೋ ಮೊದಲ ಚಿತ್ರ ಆರ್‌ಜಿವಿಯ 'ಕರೋನಾ ವೈರಸ್'
ಜಾಗತಿಕ ಕೊರೋನಾವೈರಸ್ ಸಾಂಕ್ರಾಮಿಕದಿಂದ ಚಲನಚಿತ್ರೋದ್ಯಮ ಭಾರಿ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದೆ ಎಂಬುದು ತಿಳಿದಿರುವ ಸಂಗತಿ. ಈ ಕಾರಣದಿಂದ ದೇಶಾದ್ಯಂತ ಸಾವಿರಾರು ಚಿತ್ರಮಂದಿರಗಳುಬಾಗಿಲು ಮುಚ್ಚಬೇಕಾಗಿದೆ.

2021ರಲ್ಲಿ ಸಿರಮ್ ಸಂಸ್ಥೆಯಿಂದ 200 ಮಿಲಿಯನ್ ಡೋಸ್ ಕೋವಿಡ್ ಲಸಿಕೆ ಉತ್ಪಾದನೆ!
ಭಾರತ ಸೇರಿದಂತೆ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಿಗೆ(ಎಲ್‌ಎಂಐಸಿ) ಹೆಚ್ಚುವರಿ 100 ಮಿಲಿಯನ್ ಡೋಸ್ ಕೋವಿಡ್-19 ಲಸಿಕೆಯನ್ನು ಸಿರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) 2021ರಲ್ಲಿ ಉತ್ಪಾದಿಸಲಿದೆ.

ಜಾಗತಿಕ ಕೋವಿಡ್ ಸಾವಿನ ಸಂಖ್ಯೆ 10 ಲಕ್ಷ ತಲುಪಿರುವುದು 'ಸಂಕಟ ಮೈಲಿಗಲ್ಲು'- ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಗುಟೇರಸ್
ಕೊರೋನಾ ವೈರಸ್(ಕೊವಿಡ್ -19) ಸೋಂಕಿನಿಂದ ವಿಶ್ವದಾದ್ಯಂತ ಸಾವಿನ ಸಂಖ್ಯೆ 10 ಲಕ್ಷ ತಲುಪಿರುವುದು ‘ಸಂಕಟದ ಮೈಲಿಗಲ್ಲು’ ಎಂದು ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಅಂಟೊನಿಯೊ ಗುಟೆರೆಸ್ ನೋವಿನಿಂದ ಹೇಳಿದ್ದಾರೆ.

