2021ರಲ್ಲಿ ಸಿರಮ್ ಸಂಸ್ಥೆಯಿಂದ 200 ಮಿಲಿಯನ್ ಡೋಸ್ ಕೋವಿಡ್ ಲಸಿಕೆ ಉತ್ಪಾದನೆ!
ಭಾರತ ಸೇರಿದಂತೆ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಿಗೆ(ಎಲ್‌ಎಂಐಸಿ) ಹೆಚ್ಚುವರಿ 100 ಮಿಲಿಯನ್ ಡೋಸ್ ಕೋವಿಡ್-19 ಲಸಿಕೆಯನ್ನು ಸಿರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) 2021ರಲ್ಲಿ ಉತ್ಪಾದಿಸಲಿದೆ.

ನವದೆಹಲಿ: ಭಾರತ ಸೇರಿದಂತೆ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಿಗೆ(ಎಲ್‌ಎಂಐಸಿ) ಹೆಚ್ಚುವರಿ 100 ಮಿಲಿಯನ್ ಡೋಸ್ ಕೋವಿಡ್ -19 ಲಸಿಕೆಯನ್ನು ಸಿರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) 2021ರಲ್ಲಿ ಉತ್ಪಾದಿಸಲಿದೆ.
ಎಸ್ಐಐ ಹಾಗೂ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ 100 ಮಿಲಿಯನ್ ಲಸಿಕೆಯನ್ನು ತಯಾರಿಸುವ ಗುರಿಯೊಂದಿಗೆ ಈ ಎರಡೂ ಸಂಸ್ಥೆಗಳು ಒಗ್ಗೂಡಿದ್ದವು. ಇದೀಗ ಹೆಚ್ಚುವರಿಯಾಗಿ 100 ಮಿಲಿಯನ್ ಲಸಿಕೆಯನ್ನು ಉತ್ಪಾದಿಸಲಿದೆ.
ಸಹಯೋಗವು ಈಗ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡಲು ಎಸ್‌ಐಐಗೆ ಮುಂಗಡ ಬಂಡವಾಳವನ್ನು ಒದಗಿಸುತ್ತದೆ. ಇದರಿಂದಾಗಿ ಒಮ್ಮೆ ಲಸಿಕೆ ಅಥವಾ ಲಸಿಕೆಗಳು ನಿಯಂತ್ರಕ ಅನುಮೋದನೆ ಮತ್ತು ಡಬ್ಲ್ಯುಎಚ್‌ಒ ಪೂರ್ವಭಾವಿತ್ವವನ್ನು ಪಡೆದುಕೊಂಡರೆ, 2021 ರ ಮೊದಲಾರ್ಧದಲ್ಲಿ ಗವಿ ಕೋವಾಕ್ಸ್ ಎಎಂಸಿ ಕಾರ್ಯವಿಧಾನದ ಭಾಗವಾಗಿ ಎಲ್‌ಎಂಐಸಿಗಳಿಗೆ ವಿತರಿಸಬಹುದು ಎಂದು ಕಂಪನಿ ಹೇಳಿದೆ.
ಎಸ್‌ಐಐನ ಸಿಇಒ ಅಡರ್ ಪೂನವಾಲ್ಲಾ, "ಗವಿ ಮತ್ತು ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ಅತ್ಯಾಸಕ್ತಿಯ ಬೆಂಬಲದ ಮೂಲಕ ಇಮ್ಯುನೊಜೆನಿಕ್ ಲಸಿಕೆ ಯಶಸ್ವಿಯಾದರೆ ನಾವು ಹೆಚ್ಚುವರಿ 100 ಮಿಲಿಯನ್ ಡೋಸ್ ಉತ್ಪಾದಿಸಲಿದ್ದು ಭವಿಷ್ಯದಲ್ಲಿ ಕೋವಿಡ್ 19 ಲಸಿಕೆಗಳನ್ನು ಭಾರತ ಸೇರಿದಂತೆ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಿಗೆ(ಎಲ್‌ಎಂಐಸಿ) ತಲುಪಿಸುತ್ತೇವೆ ಎಂದರು.
ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಭವಿಷ್ಯದ ಲಸಿಕೆಯನ್ನು ವಿಶ್ವದ ನಾನಾ ಭಾಗಗಳಿಗೆ ತಲುಪುತ್ತವೆ ಎಂದು ನೋಡುವ ನಮ್ಮ ಪ್ರಯತ್ನಗಳಿಗೆ ಈ ಸಂಘವು ಅನುಗುಣವಾಗಿದೆ ಎಂದು ಪೂನವಾಲಾ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


