Corona Virus

ಹುಬೈ ಪ್ರಾಂತ್ಯ ಹೊರತುಪಡಿಸಿ ಚೀನಾದಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಶೇ 42.8 ರಷ್ಟು ಇಳಿಮುಖ
ಹುಬೈ ಕೇಂದ್ರೀಯ ಪ್ರಾಂತ್ಯದ ಹೊರಗೆ ಮತ್ತು ಇಡೀ ಚೀನಾದಲ್ಲಿ ಕಳೆದ ಒಂದು ವಾರದಲ್ಲಿ ಕೊರೊನ ವೈರಸ್ ಸೋಂಕು ಪ್ರಕರಣಗಳಲ್ಲಿ ಶೇ 40ರಷ್ಟು ಇಳಿಮುಖವಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ (ಎನ್‌ಎಚ್‌ಸಿ) ವಕ್ತಾರ ಮಿ ಫೆಂಗ್ ಭಾನುವಾರ ಹೇಳಿದ್ದಾರೆ.

ಕೊರೋನಾ ಸೋಂಕು : ಚೀನಾದಲ್ಲಿ ಮೃತರ ಸಂಖ್ಯೆ 811 ಕ್ಕೆ ಏರಿಕೆ, 'ಸಾರ್ಸ್' ಅನ್ನೂ ಹಿಂದಿಕ್ಕಿದ 'ಮಹಾಮಾರಿ'
ಚೀನಾದಲ್ಲಿನ ಕೊರೋನಾ ಸೋಂಕಿನಿಂದ ಮೃತರ ಸಂಖ್ಯೆ ಈಗ 811 ಕ್ಕೆ ಏರಿದ್ದು 6,188 ಮಂದಿ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದು, ಒಟ್ಟಾರೆ ಅಲ್ಲಿ ಮರಣ ಮೃದಂಗ ಮುಂದುವರೆದಿದೆ.

ಕೊರೋನಾ ಸೋಂಕಿಗೆ ಔಷಧಿ ಕಂಡುಹಿಡಿದ ನಿತ್ಯಾನಂದ!
ಜಗತ್ತಿನಾದ್ಯಂತ ಹರಡುತ್ತಿರುವ ಮಾರಕ ಕೊರೋನಾ ವೈರಸ್ ಗೆ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಔಷಧಿ ಕಂಡುಹಿಡಿರುವುದಾಗಿ ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿದೆ.

ಕೊರೋನಾ ಭೀತಿ ಹಿನ್ನೆಲೆ: ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ತಲಾ 10ಹಾಸಿಗೆ ಮೀಸಲಿಡಲು ಸೂಚನೆ- ಶ್ರೀರಾಮುಲು
ದೇಶದೆಲ್ಲೆಡೆ ಭೀತಿ ಹುಟ್ಟಿಸಿರುವ ಕೊರೋನಾ ವೈರಸ್ ಕುರಿತು ಯಾರೂ ಭಯ ಪಡುವ ಅಗತ್ಯವಿಲ್ಲ. ರಾಜ್ಯದಲ್ಲಿ ಈ ವೈರಸ್ ಹರಡದಂತೆ ಅಗತ್ಯ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

'ಕೊರೊನಾ' ತಡೆಗಟ್ಟಲು ನಮ್ಮ ಮುಂದೆ ಸಾಕಷ್ಟು ಅವಕಾಶಗಳಿವೆ: ವಿಶ್ವ ಆರೋಗ್ಯ ಸಂಸ್ಥೆ
ಮಾರಣಾಂತಿಕ ಕೊರೊನಾ ವೈರಸ್ ನಿಯಂತ್ರಣಕ್ಕೆ ಚೀನಾ ದೇಶ ಕೈಗೊಂಡ ಹಲವು ಕ್ರಮಗಳು ವಿದೇಶಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಿದ್ದು, ಇದರ ನಿಗ್ರಹಕ್ಕೆ ಹಲವು ಅವಕಾಶಗಳ ಬಾಗಿಲನ್ನು ತೆರೆದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಚೀನಾದಿಂದ ಬಂದ ಹುಬ್ಬಳ್ಳಿ ವ್ಯಕ್ತಿಯಲ್ಲಿ 'ಕೊರೊನಾ' ಭೀತಿ; ಪುಣೆಗೆ ರಕ್ತದ ಮಾದರಿ
ಕೊರೊನಾ ವೈರಸ್ ಭೀತಿ ಕರ್ನಾಟಕಕ್ಕೂ ಕಾಲಿಟ್ಟಿದೆ. ಈಗಾಗಲೇ ಕೊರೊನಾ ವೈರಸ್ ಭೀತಿಯಲ್ಲಿರುವ ಚೀನಾದಿಂದ ವಾಪಸ್ ಬಂದಿರುವ ಹುಬ್ಬಳ್ಳಿ ಮೂಲದ ವ್ಯಕ್ತಿಯಲ್ಲಿ ಮಾರಕ ಕೊರೊನಾ ವೈರಸ್ ತಗುಲಿರುವ ಶಂಕೆ ಮೂಡಿದ್ದು, ಅವರನ್ನು ನಿನ್ನೆ ಹುಬ್ಬಳ್ಳಿಯ ವೈದ್ಯಕೀಯ ವಿಜ್ಞಾನ ಆಸ್ಪತ್ರೆಗೆ ದಾಖಲಿಸಲಾಗಿದೆ.

'ಕೊರೊನಾ' ದಾಳಿ:ಚೀನಾದಲ್ಲಿ ಮೃತರ ಸಂಖ್ಯೆ 425ಕ್ಕೆ ಏರಿಕೆ
ಜಗತ್ತಿನಲ್ಲಿ ಈಗ ಬಹು ಚರ್ಚಿತವಾಗುವ ವಿಷಯ ಕೊರೊನಾ ವೈರಸ್ ಸೋಂಕು. ಇದು ಮೊದಲು ಕಾಣಿಸಿಕೊಂಡಿರುವುದು ಚೀನಾದ ವುಹಾನ್ ಪ್ರಾಂತ್ಯದಲ್ಲಿ. ಚೀನಾದಲ್ಲಿ ಕೊರೊನಾ ವೈರಸ್ ಗೆ ಮೃತಪಟ್ಟವರ ಸಂಖ್ಯೆ 425ಕ್ಕೇರಿದೆ.

ಕೊರೋನಾ ವೈರಸ್ ಹರಡದಂತೆ ಮುಂಜಾಗೃತಾ ಕ್ರಮ: ಆರೋಗ್ಯ ಸಚಿವ ಶ್ರೀರಾಮುಲು
ಕೊರೋನೂ ವೈರಸ್ ಹರಡದಂತೆ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ರಾಜ್ಯಕ್ಕೆ ವಿದೇಶದಿಂದ ಬಂದ 44 ಮಂದಿ ಪ್ರವಾಸಿಗರ ರಕ್ತ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 29 ಮಂದಿಯ ರಕ್ತದಲ್ಲಿ ಕೆರೋನ್ ಶಂಕೆ ಇಲ್ಲ ಎಂಬ ವರದಿ ಬಂದಿದೆ.

'ಕೊರೊನಾ ವೈರಸ್' ದಾಳಿ: ಕೇರಳದಲ್ಲಿ ಎರಡನೇ ಪ್ರಕರಣ ಪತ್ತೆ
ಭಾರತದ ಕೇರಳ ರಾಜ್ಯದಲ್ಲಿ ಚೀನಾ ಮೂಲದ ಕೊರೊನಾ ವೈರಸ್ ಸೋಂಕು ಪತ್ತೆಯಾದ ಎರಡು ದಿನಗಳ ನಂತರ ಮತ್ತೆ ಅದೇ ರಾಜ್ಯದಲ್ಲಿ ಎರಡನೇ ಸೋಂಕು ಪ್ರಕರಣ ಪತ್ತೆಯಾಗಿದೆ.

