Chamarajanagar

ಲಾಕ್ ಡೌನ್: ಜನ ಮನೆಯಿಂದ ಹೊರಬರದಂತೆ ತಡೆಯಲು ಚಾಮರಾಜನಗರ ಡಿಸಿ ಮಾಸ್ಟರ್ ಪ್ಲಾನ್, ಮನೆ ಬಾಗಿಲಿಗೇ ಮೆಡಿಸಿನ್!
ಕೊರೋನಾ ವೈರಸ್ ಲಾಕ್ ಡೌನ್ ನಿಂದ ಜನತೆ ಮನೆಯಿಂದ ಹೊರಗೆ ಬರುವುದನ್ನು ತಡೆಯಲು ಚಾಮರಾಜನಗರ ಡಿಸಿ ಎಂ.ಆರ್. ರವಿ ವಿನೂತನ ಔಷಧಿ ಮಿತ್ರ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಅನ್ವಯ ಜಿಲ್ಲೆಯ ಜನರ ಮನೆ ಬಾಗಿಲಿಗೇ ಔಷಧಿ ತಂದು ನೀಡಲಾಗುತ್ತದೆ.

ಚಾಮರಾಜನಗರ ಸೇರಿ 9 ಜಿಲ್ಲೆಗಳು ಕೊರೋನ ಮುಕ್ತ: ಸುರೇಶ್ ಕುಮಾರ್
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ ಸದ್ಯಕ್ಕೆ ರಾಜ್ಯದಲ್ಲಿ ಚಾಮರಾಜನಗರವೂ ಸೇರಿದಂತೆ 9 ಜಿಲ್ಲೆಗಳು ಕೊರೊನಾ ಮುಕ್ತವಾಗಿವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಚಾಮರಾಜನಗರ: ಜೂಜು ಅಡ್ಡೆ ಮೇಲೆ ದಿಢೀರ್ ದಾಳಿ, 25 ಮಂದಿ ವಿರುದ್ಧ ಎಫ್‌ಐಆರ್ ದಾಖಲು
ಲಾಕ್ಡೌನ್ ವೇಳೆ ಜೂಜಾಟಕ್ಕಿಳಿದಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳ್ಳಭಟ್ಟಿ ಕುಡಿದರೆ ಕೊರೋನಾ ಬರಲ್ಲ ಎಂದು ಸುಳ್ಳು ಸುದ್ದಿ ಹರಡಿ ಕಳ್ಳಭಟ್ಟಿ ತಯಾರಿಸುತ್ತಿದ್ದವನ ಬಂಧನ
ಕಳ್ಳಭಟ್ಟಿ ಕುಡಿದರೆ ಕೊರೊನಾ ಬರಲ್ಲವೆಂದು ಕಳ್ಳಭಟ್ಟಿ ತಯಾರಿಸುತ್ತಿದ್ದವನನ್ನು ಅಬಕಾರಿ ಪೊಲೀಸರು ಬಂಧಿಸಿರುವ ಘಟನೆ ಹನೂರು ತಾಲೂಕಿನ ದೊರೆದೊಡ್ಡಿ ಗ್ರಾಮದಲ್ಲಿ ನಡೆದಿದೆ.ಕಳ್ಳಭಟ್ಟಿ ಕುಡಿದರೆ ಕೊರೊನಾ ಬರಲ್ಲ ಎಂದು ಕಳ್ಳು ತಯಾರಿಸುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರದಿಂದ ದೆಹಲಿಯ ಜಮಾತ್ ಸಭೆಗೆ 80 ಮಂದಿ ಹೋಗಿದ್ರು: ಜಿಲ್ಲಾಧಿಕಾರಿ ರವಿ
ಮೊದಲು 12 ಮಂದಿ, ಬಳಿಕ ಇಬ್ಬರು ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆಗೆ ತೆರಳಿದ್ದರು ಎಂದುಕೊಳ್ಳಲಾಗಿತ್ತು.

ಕರ್ನಾಟಕ ಲಾಕ್ ಡೌನ್: ಇದ್ದಿಲು ತಯಾರಿಸುವ ಅಲೆಮಾರಿ ಜನಾಂಗದ ನೆರವಿಗೆ ಧಾವಿಸಿದ ಚಾಮರಾಜನಗರ ಜಿಲ್ಲಾಡಳಿತ
ಕೊರೊನಾ ವೈರಸ್ ಭೀತಿಯಿಂದ ಲಾಕ್‌ಡೌನ್ ಜಾರಿಯಾಗಿದೆ. ಈ ಹಿನ್ನಲೆಯಲ್ಲಿ ಯಳಂದೂರು ತಾಲ್ಲೂಕಿನ, ಗೌಡಹಳ್ಳಿ, ಅಂಬಳೆ, ಹೊನ್ನೂರು, ಉಪ್ಪಿನಮೋಳೆ, ಮಲ್ಲಿಗೆಹಳ್ಳಿ, ಸಂತೇಮರಹಳ್ಳಿ, ಗೂಳಿಪುರ ಭಾಗದಲ್ಲಿ ಬೀಡು ಬಿಟ್ಟಿರುವ ಜಾಲಿಮುಳ್ಳುಗನ್ನು ತರಿದು ಇದ್ದಿಲು ತಯಾರಿಸುವ 144 ಮಂದಿ ಅಲೆಮಾರಿ ಜನರ ಸ್ಥಿತಿ ಈಗ ಚಿಂತಾಜನಕವಾಗಿದ್ದು...

ಚಾಮರಾಜನಗರ: ಸುತ್ತಾಡಲು ಬಂದವರಿಗೆ ಕೂರುವ ಶಿಕ್ಷೆ
ಲಾಕ್ಡೌನ್ ಆದರೂ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುತ್ತಿದ್ದ 20ಕ್ಕೂ ಹೆಚ್ಚು ಮಂದಿಗೆ ರಾತ್ರಿ ಮಂಡಿಯೂರಿ ಕೂರುವ ಶಿಕ್ಷೆ ಅನುಭವಿಸಿದರು.

ಚಾಮರಾಜನಗರ ಜಿಲ್ಲಾಧಿಕಾರಿ ಆದೇಶ: ಮೈಕ್ರೋ ಫೈನಾನ್ಸ್, ಸ್ವಸಹಾಯ ಸಂಘಗಳ ಸಾಲ ಮರುಪಾವತಿಗೆ ಕಾಲಾವಕಾಶ ವಿಸ್ತರಣೆ
ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದ್ಯಂತ ಲಾಕ್‍ಡೌನ್ ಆಗಿರುವ ಹಿನ್ನಲೆಯಲ್ಲಿ ಜಿಲ್ಲೆಯ ರೈತರಿಗೆ ಹಾಗೂ ಕೂಲಿಕಾಮೀಕರು, ಸಣ್ಣ ಉದ್ದಿಮೆದಾರರು, ಸಾರ್ವಜನಿಕರಿಗೆ ಅನಗತ್ಯ ಕಿರುಕುಳ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಅವರು ರಾಜ್ಯದಲ್ಲೆ ಮೊದಲು ಎನ್ನಬಹುದಾದ ಎರಡು ಮಹತ್ವದ ಆದೇಶಗಳನ್ನು ಹೊರಡಿಸಿ ಅನುಕೂಲ ಕಲ್ಪಿಸಿಕೊಟ್ಟ

ಚಾಮರಾಜನಗರ: ಅಂಬ್ಯುಲೆನ್ಸ್ ಸಿಬ್ಬಂದಿಯ ನಿರ್ಲಕ್ಷ್ಯ, ಅರಣ್ಯ ಇಲಾಖೆ ಜೀಪಿನಲ್ಲಿ ಜನಿಸಿದ್ದ ಶಿಶು ಆಸ್ಪತ್ರೆಯಲ್ಲಿ ಸಾವು
ಆಸ್ಪತ್ರೆಯ ಆ್ಯಂಬುಲೆನ್ಸ್ ಸಿಬ್ಬಂದಿ ಸರಿಯಾಗಿ ಸ್ಪಂದಿಸದೆ ಚೆಲ್ಲಾಟವಾಡಿದ ಪರಿಣಾಮ ಆಗತಾನೆ ಜನಿಸಿದ್ದ ಶಿಶು ಅಸುನೀಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

