ಕಳ್ಳಭಟ್ಟಿ ಕುಡಿದರೆ ಕೊರೋನಾ ಬರಲ್ಲ ಎಂದು ಸುಳ್ಳು ಸುದ್ದಿ ಹರಡಿ ಕಳ್ಳಭಟ್ಟಿ ತಯಾರಿಸುತ್ತಿದ್ದವನ ಬಂಧನ
ಕಳ್ಳಭಟ್ಟಿ ಕುಡಿದರೆ ಕೊರೊನಾ ಬರಲ್ಲವೆಂದು ಕಳ್ಳಭಟ್ಟಿ ತಯಾರಿಸುತ್ತಿದ್ದವನನ್ನು ಅಬಕಾರಿ ಪೊಲೀಸರು ಬಂಧಿಸಿರುವ ಘಟನೆ ಹನೂರು ತಾಲೂಕಿನ ದೊರೆದೊಡ್ಡಿ ಗ್ರಾಮದಲ್ಲಿ ನಡೆದಿದೆ.ಕಳ್ಳಭಟ್ಟಿ ಕುಡಿದರೆ ಕೊರೊನಾ ಬರಲ್ಲ ಎಂದು ಕಳ್ಳು ತಯಾರಿಸುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರ: ಕಳ್ಳಭಟ್ಟಿ ಕುಡಿದರೆ ಕೊರೊನಾ ಬರಲ್ಲವೆಂದು ಕಳ್ಳಭಟ್ಟಿ ತಯಾರಿಸುತ್ತಿದ್ದವನನ್ನು ಅಬಕಾರಿ ಪೊಲೀಸರು ಬಂಧಿಸಿರುವ ಘಟನೆ ಹನೂರು ತಾಲೂಕಿನ ದೊರೆದೊಡ್ಡಿ ಗ್ರಾಮದಲ್ಲಿ ನಡೆದಿದೆ.ಕಳ್ಳಭಟ್ಟಿ ಕುಡಿದರೆ ಕೊರೊನಾ ಬರಲ್ಲ ಎಂದು ಕಳ್ಳು ತಯಾರಿಸುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಭೀಮನಾಯ್ಕ ಎಂದು ಗುರುತಿಸಲಾಗಿದ್ದು, ಕಳ್ಳಭಟ್ಟಿ ಕುಡಿದರೆ ಕೊರೊನಾ ಬರಲ್ಲವೆಂದು ಬೆಲ್ಲದ ಕೊಳೆ, ಮರದ ಚಕ್ಕೆಯನ್ನು ಜಮೀನನಲ್ಲಿ ಶೇಖರಿಸಿದ್ದಾನೆ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕೊಳ್ಳೇಗಾಲ ಅಬಕಾರಿ ಸಿಪಿಐ ಮೀನಾ ನೇತೃತ್ವದ ತಂಡ ದಾಳಿ ನಡೆಸಿ ಮಾಲು ವಶಕ್ಕೆ ಪಡೆದಿದೆ.
ಕಳೆದ ಮೂರೂವರೆ ವರ್ಷಗಳಿಂದ ಜಿಲ್ಲೆಯಲ್ಲಿ ಕಳ್ಳಭಟ್ಟಿ ಪ್ರಕರಣಗಳು ನಡೆದಿರಲಿಲ್ಲ. ಲಾಕ್ಡೌನ್ನಿಂದ ಮದ್ಯಕ್ಕೆ ಎಣ್ಣೆಪ್ರಿಯರು ಪರದಾಡುತ್ತಿರುವುದರಿಂದ ಕೊರೋನಾ ನೆಪವೊಡ್ಡಿ ಕಳ್ಳಭಟ್ಟಿ ತಯಾರಿಕೆಗೆ ಆರೋಪಿ ಮುಂದಾಗಿದ್ದ ಎಂದು ತಿಳಿದುಬಂದಿದೆ. ಕಾರ್ಯಾಚರಣೆಯಲ್ಲಿ 90 ಲೀ. ಬೆಲ್ಲದ ಕೊಳೆ, 6-7 ಚೀಲ ಮರದ ಚಕ್ಕೆಯನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ವರದಿ ಗುಳಿಪುರ ನಂದೀಶ ಎಂ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


