Chamarajanagar

ಚಾಮರಾಜನಗರದಲ್ಲಿ ನೀರಿಗಾಗಿ ಹಾಹಾಕಾರ: ಮಳೆಗಾಗಿ ಕಪ್ಪೆಗೆ ಪೂಜೆ; 'ಹುಯ್ಯೋ ಹುಯ್ಯೋ ಮಳೆರಾಯ' ಎಂದು ಪ್ರಾರ್ಥನೆ..!
ಮಕ್ಕಳೇ ಮುಖ್ಯ ಪಾತ್ರವಹಿಸುವ ಈ ಆಚರಣೆಯಲ್ಲಿ, ಕಪ್ಪೆಗಳನ್ನು ಬೇವಿನ ಎಲೆಗಳಿಂದ ಅಲಂಕರಿಸಿದ ಬುಟ್ಟಿಯಲ್ಲಿ ಇಟ್ಟು ತಲೆಯ ಮೇಲೆ ಹೊತ್ತು ಗ್ರಾಮ ಸುತ್ತುವಂತೆ ಮಾಡಲಾಗಿದೆ.

ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎನ್ನುವುದು ಮೂಢನಂಬಿಕೆ; ಈ ಮೌಢ್ಯದಲ್ಲಿ ನನಗೆ ನಂಬಿಕೆಯಿಲ್ಲ: ಸಿದ್ದರಾಮಯ್ಯ
ಮೃತರ ಕುಟುಂಬ ಸದಸ್ಯರಿಗೆ ಕಾಯಂ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು. ಈ ಮೂಲಕ ಸಂತ್ರಸ್ತ ಕುಟುಂಬಗಳ 5 ವರ್ಷಗಳ ನಿರಂತರ ಹೋರಾಟಕ್ಕೆ ಕೊನೆಗೂ ಪ್ರತಿಫಲ ಸಿಕ್ಕಂತಾಯಿತು.

ಚಾಮರಾಜನಗರ: ವಿದ್ಯುತ್ ತಂತಿ ತಗುಲಿ ಹುಲಿ ಸಾವು
ಸುಮಾರು ಒಂದೂವರೆ ವರ್ಷದ ಹುಲಿ, ಸ್ಥಳೀಯ ರೈತ ತನ್ನ ಬೆಳೆಗಳನ್ನು ರಕ್ಷಿಸಲು ಅಳವಡಿಸಿದ್ದ ವಿದ್ಯುತ್ ತಂತಿ ಬೇಲಿಗೆ ಸಿಲುಕಿ ಸಾವನ್ನಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಾಮರಾಜನಗರ: ಹುಲಿ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಸಾವು
ಕಳೆದ ಎಂಟು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕೆಲಸ ಮಾಡುತ್ತಿದ್ದ ಸಣ್ಣ ಹೈದ ಹುಲಿ ದಾಳಿಗೆ ಮೃತಪಟ್ಟಿದ್ದಾರೆ.

ಚಾಮರಾಜನಗರ: 5 ಹುಲಿಗಳು ಪ್ರತ್ಯಕ್ಷ ; ಜನರಲ್ಲಿ ಆತಂಕ; ನಿಷೇದಾಜ್ಞೆ ಜಾರಿ
ಜಿಲ್ಲೆಯ ನಂಜೇದೇವನಪುರ, ವೀರನಪುರ ಹಾಗೂ ಉಡಿಗಾಲ ಗ್ರಾಮದ ಜಮೀನುಗಳಲ್ಲಿ ಹುಲಿಗಳು ಓಡಾಟ ಹೆಚ್ಚಿದೆ. ಹೀಗಾಗಿ ಈ ಪ್ರದೇಶಗಳಲ್ಲಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳ ಜಟಾಪಟಿ: ಗೊಂದಲ ಸೃಷ್ಟಿ
5 ತಿಂಗಳ ಹಿಂದಷ್ಟೇ ಚಾಮರಾಜನಗರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾಗಿ ಸುರೇಶ್ ಅವರು ನೇಮಕಗೊಂಡಿದ್ದರು.

ಚಾಮರಾಜನಗರ: ವೇತನ ಸಿಗದ್ದಕ್ಕೆ ವಾಟರ್‌ಮೆನ್ ಆತ್ಮಹತ್ಯೆ; PDO ಅಮಾನತು..!
ಹೊಂಗನೂರು ಗ್ರಾಮ ಪಂಚಾಯತ್‌ನಲ್ಲಿ ವಾಟರ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಮಾಜಿ ಪಂಚಾಯತ್ ಉದ್ಯೋಗಿ ಚಿಕ್ಕುಸನಾಯಕ ಅವರು ಪಂಚಾಯತ್ ಕಟ್ಟಡದ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಚಾಮರಾಜನಗರ: 27 ತಿಂಗಳ ಸಂಬಳ ಬಾಕಿ; ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಲ್ಲೇ 'ವಾಟರ್ ಮ್ಯಾನ್' ಆತ್ಮಹತ್ಯೆ!
ಹಲವು ಬಾರಿ ಮನವಿ ಮಾಡಿದರೂ ಪಂಚಾಯಿತಿ ಅಧ್ಯಕ್ಷೆಯ ಪತಿ ಮೋಹನ್‌ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಾಮೇಗೌಡ ಸೇರಿದಂತೆ ಪಂಚಾಯಿತಿ ಅಧಿಕಾರಿಗಳು 27 ತಿಂಗಳಿಂದ ವೇತನ ನೀಡಿಲ್ಲ ಎಂದು ಆರೋಪಿಸಲಾಗಿದೆ.

ಚಾಮರಾಜನಗರ: Hindu ಯುವಕನ ಜೊತೆ Muslim ಯುವತಿ ಪರಾರಿ?; ಪೊಲೀಸ್ ಠಾಣೆ ಎದುರೇ ಚೂರಿ ಇರಿತ!
ಮುಸ್ಲಿಂ (Muslim) ಯುವತಿಯೊಬ್ಬಳು ಯುವಕನೊಂದಿಗೆ ಓಡಿಹೋಗಿದ್ದಾಳೆ ಎಂದು ಆರೋಪಿಸಿ ಯುವತಿಯ ಸಂಬಂಧಿಕರು ಯುವನೋರ್ವನಿಗೆ ಚೂರಿ ಇರಿದಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.

