cases

ಕೋವಿಡ್-19: ವುಹಾನ್ ನಲ್ಲಿ ಮೊದಲ ಬಾರಿಗೆ ಲಕ್ಷಣ ರಹಿತ ಪ್ರಕರಣ ಶೂನ್ಯ, ಪಾಸಿಟಿವ್ ಇದ್ದ ವೈದ್ಯ ಸಾವು
ಚೀನಾದಲ್ಲಿ ಹೊಸದಾಗಿ 15 ಕೊರೋನಾವೈರಸ್ ಪ್ರಕರಣಗಳು ವರದಿಯಾಗಿದ್ದು, ಕೋವಿಡ್- 19 ಹುಟ್ಟಿಕೊಂಡಿದ್ದ ವುಹಾನ್ ನಗರದಲ್ಲಿ ಕಳೆದ ಕೆಲ ವಾರಗಳಲ್ಲಿ ಸುಮಾರು 9 ಮಿಲಿಯನ್ ಜನರನ್ನು ಪರೀಕ್ಷೆ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ಯಾವುದೇ ಲಕ್ಷಣ ರಹಿತ ಪ್ರಕರಣಗಳು ದಾಖಲಾಗಿಲ್ಲ ಎಂದು ಆರೋಗ್ಯ ಪ್ರಾಧಿಕಾರ ಮಂಗಳವಾರ ತಿಳಿಸಿದೆ.

ರಾಜ್ಯದಲ್ಲಿ ಕೋವಿಡ್-19 ಪ್ರಕರಣ ಏರಿಕೆಯಾಗುತ್ತಿದ್ದರೂ ಚೇತರಿಕೆ ಪ್ರಮಾಣ ಆಶಾದಾಯಕ! ಕಾರಣ ಏನು ಗೊತ್ತಾ?
ಕಳೆದ ವಾರದಿಂದ ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಪ್ರಕರಣ ಹಠಾತ್ತನೆ ಏರಿಕೆಯಾಗಿದ್ದರೂ ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿನ ಚೇತರಿಕೆ ಪ್ರಮಾಣ ಆಶಾದಾಯಕವಾಗಿದೆ. ಒಟ್ಟಾರೇ 500 ಪ್ರಕರಣಗಳ ಪೈಕಿಯಲ್ಲಿ 158 ಜನರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಶನಿವಾರದ ಚೇತರಿಕೆ ಪ್ರಮಾಣ ಶೇ. 31. 6 ರಷ್ಟಿತ್ತು

ಬಾಗಲಕೋಟೆಯಲ್ಲಿ ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆ
ಆಲಮಟ್ಟಿ ಜಲಾಶಯ ಹಿನ್ನೀರು ಬಾಧಿತ ಬಾಗಲಕೋಟೆ ಹಳೆ ಪಟ್ಟಣಕ್ಕೆ ಮಹಾಮಾರಿ ಕೊರೋನಾ ಒಕ್ಕರಿಸಿ ಸಂತ್ರಸ್ತರ ಬದುಕಿನೊಂದಿಗೆ ಚೆಲ್ಲಾಟ ಆರಂಭಿಸಿದೆ.

ಕೊರೋನಾಗೆ ವಿಶ್ವದ ದೊಡ್ಡಣ್ಣ ತತ್ತರ: ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕಾಕ್ಕೆ ಅಗ್ರಸ್ಥಾನ!
ನಿನ್ನೆ ಒಂದೇ ದಿನ ಅಮೆರಿಕಾದಲ್ಲಿ 16 ಸಾವಿರ ಕೊರೋನಾ ಸೋಂಕು ಪ್ರಕರಣಗಳು ವರದಿಯಾಗಿದೆ. ವರ್ಲ್ಡೊಮೀಟರ್ ನೀಡಿರುವ ಮಾಹಿತಿ ಪ್ರಕಾರ ಅಮೆರಿಕಾದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 85, 088 ಆಗಿದ್ದು, ವಿಶ್ವದಲ್ಲಿಯೇ ಅತಿ ಹೆಚ್ಚಿನ ಮಂದಿ ಅಮೆರಿಕಾದ ಜನರು ಈ ಸೋಂಕಿಗೆ ತುತ್ತಾಗಿದ್ದಾರೆ

ರಾಜ್ಯಾದ್ಯಂತ ಜನವರಿಯಲ್ಲಿ 40 ಎಚ್ 1 ಎನ್ 1 ಪ್ರಕರಣಗಳು ಪತ್ತೆ
ರಾಜ್ಯದಲ್ಲಿ ಮತ್ತೆ ಎಚ್ 1ಎನ್ 1 ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಜನವರಿ ತಿಂಗಳ ಮೊದಲ 20 ದಿನಗಳಲ್ಲಿ ರಾಜ್ಯಾದ್ಯಂತ 40 ಎಚ್ 1ಎನ್ 1 ಪ್ರಕರಣಗಳು ಪತ್ತೆಯಾಗಿವೆ.

ಭೀಮಾ ಕೋರೆಗಾಂವ್ ಹಿಂಸಾಚಾರ: ಕೇಸ್ ಗಳು ವಾಪಾಸ್- ಉದ್ಧವ್ ಠಾಕ್ರೆ
ಭೀಮಾ- ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳನ್ನು ಮಹಾ ವಿಕಾಸ್ ಅಘಾಡಿ ಸರ್ಕಾರ ವಾಪಾಸ್ ಪಡೆಯುವುದಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.

3 ವರ್ಷಗಳಲ್ಲಿ 207 ಪ್ರಕರಣ: ಮಂಗಳೂರು ಸೈಬರ್ ಕ್ರೈಮ್ ಬ್ರಾಂಚ್ ಇತ್ಯರ್ಥಗೊಳಿಸಿದ್ದು ಕೇವಲ 6!
ಮಂಗಳೂರು ವಿಭಾಗದ ಸಿಟಿ ಸೈಬರ್ ಕ್ರೈಮ್ ಬ್ರಾಂಚ್ (ಸಿಸಿಸಿಬಿ) ಪ್ರಾರಂಭವಾಗಿ 3 ವರ್ಷಗಳಾಗಿದೆ. ಈ ವರೆಗೆ ಒಟ್ಟಾರೆ 207 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಇತ್ಯರ್ಥಗೊಳಿಸಲು ಸಾಧ್ಯವಾಗಿರುವುದು ಕೇವಲ 6 ಪ್ರಕರಣಗಳನ್ನಷ್ಟೇ!

ಕಾವೇರಿ ಹೋರಾಟಗಾರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ: ರೈತರ ಮೇಲಿದ್ದ ಕೇಸ್ ವಾಪಸ್
ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ಹೋರಾಟದ ಸಂದರ್ಭದಲ್ಲಿ ರೈತರ ಮೇಲೆ ಹಾಕಿದ್ದ ಕೇಸುಗಳ ವಾಪಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ....

ಮಧ್ಯಪ್ರದೇಶ, ರಾಜಸ್ಥಾನ: ಕೊನೆಗೂ ಮಾಯಾವತಿ ಬೆದರಿಕೆಗೆ ಮಂಡಿಯೂರಿದ ಕಾಂಗ್ರೆಸ್!
ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಮಾಯಾವತಿ ಬೆಂಬಲ ವಾಪಸ್ ಪಡೆಯುವ ಬೆದರಿಕೆಗೆ ಬಗ್ಗಿರುವ ಕಾಂಗ್ರೆಸ್ ದಲಿತರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಲು ನಿರ್ಧರಿಸಿದೆ.

