ರಾಜ್ಯದಲ್ಲಿ ಕೋವಿಡ್-19 ಪ್ರಕರಣ ಏರಿಕೆಯಾಗುತ್ತಿದ್ದರೂ ಚೇತರಿಕೆ ಪ್ರಮಾಣ ಆಶಾದಾಯಕ! ಕಾರಣ ಏನು ಗೊತ್ತಾ?
ಕಳೆದ ವಾರದಿಂದ ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಪ್ರಕರಣ ಹಠಾತ್ತನೆ ಏರಿಕೆಯಾಗಿದ್ದರೂ ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿನ ಚೇತರಿಕೆ ಪ್ರಮಾಣ ಆಶಾದಾಯಕವಾಗಿದೆ. ಒಟ್ಟಾರೇ 500 ಪ್ರಕರಣಗಳ ಪೈಕಿಯಲ್ಲಿ 158 ಜನರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಶನಿವಾರದ ಚೇತರಿಕೆ ಪ್ರಮಾಣ ಶೇ. 31. 6 ರಷ್ಟಿತ್ತು

ಬೆಂಗಳೂರು: ಕಳೆದ ವಾರದಿಂದ ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಪ್ರಕರಣ ಹಠಾತ್ತನೆ ಏರಿಕೆಯಾಗಿದ್ದರೂ ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿನ ಚೇತರಿಕೆ ಪ್ರಮಾಣ ಆಶಾದಾಯಕವಾಗಿದೆ. ಒಟ್ಟಾರೇ 500 ಪ್ರಕರಣಗಳ ಪೈಕಿಯಲ್ಲಿ 158 ಜನರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಶನಿವಾರದ ಚೇತರಿಕೆ ಪ್ರಮಾಣ ಶೇ. 31. 6 ರಷ್ಟಿತ್ತು
ಚೇತರಿಕೆ ಪ್ರಮಾಣದಲ್ಲಿ ನೆರೆಯ ಕೇರಳ ರಾಜ್ಯಕ್ಕಿಂತ ಹಿಂದುಳಿದಿರುವ ಕರ್ನಾಟಕ, ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ. 20. 88ಕ್ಕಿಂತಲೂ ಉತ್ತಮ ಪ್ರಗತಿ ಸಾಧಿಸಿದೆ.
ಹೆಚ್ಚಿನ ಕೊರೋನಾವೈರಸ್ ಸೋಂಕು ಪ್ರಕರಣ ಕಂಡುಬಂದಿರುವ ಮಹಾರಾಷ್ಟ್ರದಲ್ಲಿ ಚೇತರಿಕೆ ಪ್ರಮಾಣ ಶೇ. 14. 03, ತೆಲಂಗಾಣ ಶೇ. 25. 71, ಆಂಧ್ರ ಪ್ರದೇಶ ಶೇ. 16.11 ರಷ್ಟಿದೆ. ತಮಿಳುನಾಡಿನಲ್ಲಿ ಶೇ. 49. 34 ರಷ್ಟಿದ್ದು, ಎರಡನೇ ಸ್ಥಾನದಲ್ಲಿದೆ. ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಶೇ. 73.39 ರೊಂದಿಗೆ ಕೇರಳ ಮೊದಲ ಸ್ಥಾನದಲ್ಲಿದೆ.
ಸೋಂಕನ್ನು ಬೇಗ ಪತ್ತೆ ಹಚ್ಚುವಿಕೆ, ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ಸೇರಿದಂತೆ ಹಲವಾರು ಅಂಶಗಳಿಂದ ಕೋವಿಡ್-19 ರೋಗಿಗಳು ಬೇಗನೆ ಗುಣಮುಖರಾಗುತ್ತಿದ್ದಾರೆ ಎಂದು ಕೋವಿಡ್-19 ವಿರುದ್ಧ ಹೋರಾಡುತ್ತಿರುವ ರಾಜ್ಯ ಟಾಸ್ಕ್ ಪೋರ್ಸ್ ಸದಸ್ಯರು ಆಗಿರುವ ತಜ್ಞರು ಹೇಳುತ್ತಾರೆ.
ಸಾಮಾನ್ಯವಾಗಿ ಎರಡು ವಾರಗಳ ಕಾಲ ರೋಗಿಗಳು ಆಸ್ಪತ್ರೆಯಲ್ಲಿರಬೇಕಾಗುತ್ತದೆ. ಆದರೆ, ಕೆಲವರನ್ನು 20 ರಿಂದ 22 ದಿನಗಳ ಕಾಲ ಅದಕ್ಕೂ ಹೆಚ್ಚಿನ ಕಾಲ ಆಸ್ಪತ್ರೆಯಲ್ಲಿ ಇರಿಸಿಕೊಳ್ಳಲಾಗುತ್ತದೆ ಎಂದು ಕೋವಿಡ್-19 ರೋಗಿಗೆ ಚಿಕಿತ್ಸೆ ನೀಡುತ್ತಿರುವ ತಜ್ಞರೊಬ್ಬರು ತಿಳಿಸಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆಯಾಗುವ ಮುನ್ನ 24 ಗಂಟೆ ಅವಧಿಯಲ್ಲಿ ರೋಗಿಗೆ ಎರಡು ಪರೀಕ್ಷೆಗಳನ್ನು ಮಾಡಲಾಗುತ್ತದೆ. ಎರಡು ಟೆಸ್ಟ್ ಗಳಲ್ಲಿ ನೆಗೆಟಿವ್ ಬರಬೇಕಾಗುತ್ತದೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕವೂ ರಾಜ್ಯ ಜಾಗೃತ ಅಧಿಕಾರಿ ಮೇಲ್ವಿಚಾರಣೆಯಲ್ಲಿ 14 ದಿನಗಳ ಕಾಲ ನಿಗಾ ವಹಿಸಲಾಗುತ್ತದೆ.
ಆಸ್ಪತ್ರೆಯಿಂದ ಡಿಸ್ಚಾರ್ಚ್ ಆದ ಬಳಿಕವೂ ರೋಗ ಲಕ್ಷಣಗಳು ಕಂಡುಬಂದರೆ ಮತ್ತೆ ಪರೀಕ್ಷೆ ಮಾಡಲಾಗುವುದು, ಸೋಂಕನ್ನು ಮೊದಲೇ ಪತ್ತೆ ಹಚ್ಚುವುದು ಹಾಗೂ ಉತ್ತಮವಾದ ಮುಂಜಾಗ್ರತಾ ಕ್ರಮಗಳು ರೋಗಿ ಬೇಗನೆ ಚೇತರಿಸಿಕೊಳ್ಳಲು ಪ್ರಮುಖವಾದ ಅಂಶವಾಗಿದೆ ಎಂದು ರಾಜೀವ್ ಗಾಂಧಿ ಎದೆ ರೋಗಗಳ ನಿರ್ದೇಶಕ ಡಾ.ಸಿ.ಎನ್. ನಾಗರಾಜ್ ದಿ ನ್ಯೂ ಸಂಡೆ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಉತ್ತಮ ಆರೋಗ್ಯ ಸೇವೆ ಸೌಕರ್ಯಗಳೊಂದಿಗೆ ಕರ್ನಾಟಕ ದೇಶದಲ್ಲಿ ಪ್ರಗತಿದಾಯಕ ರಾಜ್ಯವಾಗಿದೆ. ನಿಪಾಹ್ ವೈರಸ್ ನಿಯಂತ್ರಣದಲ್ಲಿ ಅನುಭವ ಪಡೆದಿರುವ ಕೇರಳ ಕೋವಿಡ್- 19 ರೋಗದ ವಿರುದ್ಧದ ಹೋರಾಟದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥ ಡಾ. ಹೆಚ್. ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


