Ajit Pawar

ಪವಾರ್ v/s ಪವಾರ್: ನಾಳೆ ಎನ್‌ಸಿಪಿ ಸಭೆ ಕರೆದ ಇಬ್ಬರೂ ನಾಯಕರು!
ಮಹಾರಾಷ್ಟ್ರ ರಾಜಕೀಯ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಏಕನಾಥ್ ಶಿಂಧೆ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಎನ್ ಸಿಪಿ ಬಂಡಾಯ ನಾಯಕ ಅಜಿತ್ ಪವಾರ್ ಹಾಗೂ...

ನನ್ನನ್ನು ವಜಾ ಮಾಡುವ ಅಧಿಕಾರ ಅಜಿತ್ ಪವಾರ್ ಬಣಕ್ಕೆ ಇಲ್ಲ: ಜಯಂತ್ ಪಾಟೀಲ್
ನನ್ನನ್ನು ಎನ್ ಸಿಪಿ ರಾಜ್ಯಾಧ್ಯಕ್ಷ ಹುದ್ದೆಯಿಂದ ತೆಗೆದುಹಾಕುವ ಅಧಿಕಾರ ಅಜಿತ್ ಪವಾರ್ ನೇತೃತ್ವದ ಬಂಡಾಯ ಬಣಕ್ಕೆ ಇಲ್ಲ ಎಂದು ಮಹಾರಾಷ್ಟ್ರ ಎನ್‌ಸಿಪಿ ಅಧ್ಯಕ್ಷ ಜಯಂತ್ ಪಾಟೀಲ್ ಮಂಗಳವಾರ ಹೇಳಿದ್ದಾರೆ.

ಮೋದಿಯಂತಹ ನಾಯಕ ಮತ್ತೊಬ್ಬರಿಲ್ಲ: ಅಜಿತ್ ಪವಾರ್
ಪ್ರಧಾನಿ ನರೇಂದ್ರ ಮೋದಿಯಂತಹ ನಾಯಕ ಮತ್ತೊಬ್ಬರಿಲ್ಲ ಎಂದು ಮಹಾರಾಷ್ಟ್ರ ನೂತನ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮಂಗಳವಾರ ಹೇಳಿದ್ದಾರೆ.

ಎನ್ ಸಿಪಿ ಪಕ್ಷದಿಂದ ಸಂಸದ ಪ್ರಫುಲ್ ಪಟೇಲ್, ಸುನಿಲ್ ತಾತ್ಕರೆ ವಜಾ: ಶರದ್ ಪವಾರ್ ಘೋಷಣೆ
ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಸಂಸದರಾದ ಸುನಿಲ್ ತಾತ್ಕರೆ, ಪ್ರಫುಲ್ ಪಟೇಲ್ ಅವರ ಹೆಸರನ್ನು ಪಕ್ಷದ ಸಂಸದರ ಪಟ್ಟಿಯಿಂದ ತೆಗೆದುಹಾಕುವುದಾಗಿ ಪಕ್ಷದ ಮುಖಂಡ ಶರದ್ ಪವಾರ್ ಘೋಷಿಸಿದ್ದಾರೆ.

ಮಹಾರಾಷ್ಟ್ರ: ಅಜಿತ್ ಪವಾರ್- ದೇವೇಂದ್ರ ಫಡ್ನವಿಸ್ ಭೇಟಿ, ಖಾತೆಗಳ ಹಂಚಿಕೆ ಕುರಿತು ಚರ್ಚೆ
ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಬೆಂಬಲ ಘೋಷಿಸಿದ ಒಂದು ದಿನದ ನಂತರ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೋಮವಾರ ತಮ್ಮ ಸಹವರ್ತಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿ, ಖಾತೆ ಹಂಚಿಕೆ ಮತ್ತು ಹೊಸ ಮೈತ್ರಿಗೆ ಸಂಬಂಧಿಸಿದ ಕಾನೂನು ಅಂಶಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಮ್ಮ ರಾಜ್ಯದಲ್ಲಿ ಯಾವ ಅಜಿತ್ ಪವಾರ್ ಹುಟ್ಟಿಕೊಳ್ಳುತ್ತಾರೋ ಗೊತ್ತಿಲ್ಲ: ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಲೇವಡಿ
ಮಹಾರಾಷ್ಟ್ರದಲ್ಲಿ ದಿಢೀರ್ ರಾಜಕೀಯ ಬದಲಾವಣೆ ನೋಡಿ ಶಾಕ್ ಆಗಿದೆ. ನಮ್ಮ ರಾಜ್ಯದಲ್ಲಿ ರಾಜ್ಯದಲ್ಲಿ ಯಾವ ಅಜಿತ್ ಪವಾರ್ ಹುಟ್ಟಿಕೊಳ್ಳುತ್ತಾರೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸೋಮವಾರ...

ಎನ್‌ಸಿಪಿ ಪಕ್ಷವನ್ನು ಒಡೆಯಲು ಬಿಜೆಪಿ ಬಯಸಿತ್ತು ಎಂಬುದು ಗೊತ್ತಿತ್ತು: ರೋಹಿತ್ ಪವಾರ್
ಎನ್‌ಸಿಪಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ಮೊಮ್ಮಗ, ಶಾಸಕ ರೋಹಿತ್ ಪವಾರ್, ಪಕ್ಷವನ್ನು ಒಡೆಯುವ ಬಿಜೆಪಿಯ 'ಉದ್ದೇಶ'ದ ಬಗ್ಗೆ ಹಿರಿಯ ನಾಯಕರಿಗೆ ಸುಳಿವು ಇತ್ತು. ಆದರೆ, ಆಡಳಿತದ ಮೈತ್ರಿಕೂಟದೊಂದಿಗೆ ಕೈಜೋಡಿಸುವ ಅಜಿತ್ ಪವಾರ್ ಅವರ ತ್ವರಿತ ನಡೆಯ ಬಗ್ಗೆ ಸುಳಿವು ಇರಲಿಲ್ಲ ಎಂದು ಸೋಮವಾರ ಹೇಳಿದ್ದಾರೆ.

ಸೋದರನ ತೀರ್ಮಾನ ಅವನಿಗೆ ಬಿಟ್ಟಿದ್ದು, ಅಣ್ಣನ ಜೊತೆ ಜಗಳವಾಡಲು ಸಾಧ್ಯವಿಲ್ಲ: ಸುಪ್ರಿಯಾ ಸುಳೆ
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಅಜಿತ್ ಪವಾರ್ ಅವರು ಏಕನಾಥ್ ಶಿಂಧೆ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ, ಪಕ್ಷದ ಕಾರ್ಯಾಧ್ಯಕ್ಷೆ ಮತ್ತು ಅವರ ಸೋದರ ಸಂಬಂಧಿ ಸುಪ್ರಿಯಾ ಸುಳೆ ಅವರು ಪಕ್ಷದಲ್ಲಿನ ಬೆಳವಣಿಗೆಗಳು ಪ್ರತಿಪಕ್ಷಗಳ ಒಗ್ಗಟ್ಟಿನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ: ಅಜಿತ್ ಪವಾರ್‌ಗೆ 36 ಶಾಸಕರ ಬೆಂಬಲವಿಲ್ಲ- ಎನ್‌ಸಿಪಿ
ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಉಪಮುಖ್ಯಮಂತ್ರಿಯಾಗಿ ಕೆಲವು ನಾಯಕರೊಂದಿಗೆ ಸೇರಿಕೊಂಡಿರುವ ಅಜಿತ್ ಪವಾರ್ ಅವರಿಗೆ 36 ಶಾಸಕರ ಬೆಂಬಲವಿಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಹೇಳಿದೆ.

