ಎನ್‌ಸಿಪಿ ಪಕ್ಷವನ್ನು ಒಡೆಯಲು ಬಿಜೆಪಿ ಬಯಸಿತ್ತು ಎಂಬುದು ಗೊತ್ತಿತ್ತು: ರೋಹಿತ್ ಪವಾರ್
ಎನ್‌ಸಿಪಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ಮೊಮ್ಮಗ, ಶಾಸಕ ರೋಹಿತ್ ಪವಾರ್, ಪಕ್ಷವನ್ನು ಒಡೆಯುವ ಬಿಜೆಪಿಯ 'ಉದ್ದೇಶ'ದ ಬಗ್ಗೆ ಹಿರಿಯ ನಾಯಕರಿಗೆ ಸುಳಿವು ಇತ್ತು. ಆದರೆ, ಆಡಳಿತದ ಮೈತ್ರಿಕೂಟದೊಂದಿಗೆ ಕೈಜೋಡಿಸುವ ಅಜಿತ್ ಪವಾರ್ ಅವರ ತ್ವರಿತ ನಡೆಯ ಬಗ್ಗೆ ಸುಳಿವು ಇರಲಿಲ್ಲ ಎಂದು ಸೋಮವಾರ ಹೇಳಿದ್ದಾರೆ.

ಮುಂಬೈ: ಎನ್‌ಸಿಪಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ಮೊಮ್ಮಗ, ಶಾಸಕ ರೋಹಿತ್ ಪವಾರ್, ಪಕ್ಷವನ್ನು ಒಡೆಯುವ ಬಿಜೆಪಿಯ 'ಉದ್ದೇಶ'ದ ಬಗ್ಗೆ ಹಿರಿಯ ನಾಯಕರಿಗೆ ಸುಳಿವು ಇತ್ತು. ಆದರೆ, ಆಡಳಿತದ ಮೈತ್ರಿಕೂಟದೊಂದಿಗೆ ಕೈಜೋಡಿಸುವ ಅಜಿತ್ ಪವಾರ್ ಅವರ ತ್ವರಿತ ನಡೆಯ ಬಗ್ಗೆ ಸುಳಿವು ಇರಲಿಲ್ಲ ಎಂದು ಸೋಮವಾರ ಹೇಳಿದ್ದಾರೆ.
ಮಹಾರಾಷ್ಟ್ರದ ಪುಣೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್ ಪವಾರ್, ತಾನು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಜೊತೆಗಿದ್ದೇನೆ ಎಂದರು.
ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ತನ್ನ ಬೆಂಬಲಿಗ ಶಾಸಕರ ಜೊತೆ ಸೇರಿ ಶಿವಸೇನಾ (ಶಿಂದೆ ಬಣ)-ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ ಅಜಿತ್ ಪವಾರ್ ಭಾನುವಾರ ಮಧ್ಯಾಹ್ನ ಉಪಮುಖ್ಯಮಂತ್ರಿಯಾಗಿ, ಇತರ ಎಂಟು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಶರದ್ ಪವಾರ್ ಅವರ ಹಿರಿಯ ಸಹೋದರರಾದ ಅಪ್ಪಾಸಾಹೇಬ್ ಪವಾರ್ ಅವರ ಮೊಮ್ಮಗ ರೋಹಿತ್ ಪವಾರ್, 'ಅಜಿತ್ ಪವಾರ್ ಬಿಜೆಪಿಯೊಂದಿಗೆ ಕೈಜೋಡಿಸುವ ಬಗ್ಗೆ ನಮಗೆ ಯಾವುದೇ ಸುಳಿವಿರಲಿಲ್ಲ. ಆದರೆ, ಬಿಜೆಪಿಯು ಎನ್‌ಸಿಪಿಯನ್ನು ಒಡೆಯಲು ಉತ್ಸುಕವಾಗಿದೆ, ನಮಗೆ ಇದು ತಿಳಿದಿತ್ತು' ಎಂದಿದ್ದಾರೆ.
ಇದನ್ನೂ ಓದಿ: ಶಿವಸೇನೆ ಜೊತೆ ಸೇರಬಹುದಾದರೆ, ಬಿಜೆಪಿ ಜೊತೆಗೂ ಸೇರಬಹುದು, ಪ್ರಧಾನಿ ಮೋದಿ ಅಭಿವೃದ್ಧಿ ಕೆಲಸ ಉತ್ತಮವಾಗಿದೆ: ಅಜಿತ್ ಪವಾರ್
ಆದರೆ, ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ, ನನ್ನಂತಹವರು ರಾಜಕೀಯಕ್ಕೆ ಸೇರುವ ಮೂಲಕ ತಪ್ಪು ಮಾಡಿದ್ದೇವೆಯೇ ಎಂದು ನಮಗೆ ಆಶ್ಚರ್ಯವಾಗುತ್ತದೆ ಎಂದು ಅವರು ಹೇಳಿದರು.
ಅಜಿತ್ ಪವಾರ್ ಅವರ ನಡೆಯ ಬಗ್ಗೆ ಕೇಳಿದ ಪ್ರಶ್ನೆಗೆ, ತಮ್ಮ ಚಿಕ್ಕಪ್ಪ ಈ ರೀತಿ ಮಾಡಿದ್ದಕ್ಕೆ ನನಗೆ ನೋವಾಗಿದೆ. 'ಅವರು (ಅಜಿತ್ ಪವಾರ್) ವೈಯಕ್ತಿಕವಾಗಿಯೂ ನನಗೆ ಸಹಾಯ ಮಾಡಿದ್ದಾರೆ. ಆದರೆ, ರಾಜಕೀಯವಾಗಿ, ನಾವೆಲ್ಲರೂ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಜೊತೆಗಿದ್ದೇವೆ' ಎಂದು ಅವರು ಹೇಳಿದರು.
ಹೀಗೊಂದು ವೇಳೆ ಬಹುಮತ ಸಾಬೀತಿಗೆ ಅವಕಾಶ ಸಿಕ್ಕರೆ, ಶರದ್ ಪವಾರ್ ಅವರೇ ಜನ ನಾಯಕನಾಗಿ ಹೊರಬರುತ್ತಾರೆ. 'ರಾಜ್ಯವು ಹೋರಾಟ ಮತ್ತು ಪರಿಶ್ರಮದ ಇತಿಹಾಸವನ್ನು ಹೊಂದಿದೆ, ನಾವು ಅದನ್ನು ಮುಂದುವರಿಸುತ್ತೇವೆ' ಎಂದು ರೋಹಿತ್ ಪವಾರ್ ಹೇಳಿದರು.
ಒಂಬತ್ತು ಎನ್‌ಸಿಪಿ ನಾಯಕರು ಏಕನಾಥ್ ಶಿಂಧೆ ಸರ್ಕಾರಕ್ಕೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ, ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಜುಲೈ 5 ರಂದು ಮುಂಬೈನಲ್ಲಿ ಈಗಿನ ಬೆಳವಣಿಗೆಗಳು ಮತ್ತು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಸಭೆಯನ್ನು ಕರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


