Afghanistan

ತಾಲಿಬಾನಿಗಳ ರಕ್ಕಸ ರೂಪ: ಹೆಲಿಕಾಪ್ಟರ್ ಗೆ ನೇತು ಹಾಕಿದ ದೇಹದೊಂದಿಗೆ ಗಸ್ತು, ವಿಡಿಯೋ ವೈರಲ್!
ಕಾಬೂಲ್ ನಿಂದ ಅಮೆರಿಕಾ ಸೇನೆ ಜಾಗ ಖಾಲಿ ಮಾಡುತ್ತಿದ್ದಂತೆ ತಾಲಿಬಾನಿಗಳು ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿವೆ.

ಧನಾತ್ಮಕ ಮನೋಭಾವ ಹೊಂದಿದ್ದಾರೆ: ತಾಲಿಬಾನಿಗಳ ಹೊಗಳಿದ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ
ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ರಚನೆಯಾಗಿದ್ದ ಘನಿ ಸರ್ಕಾರವನ್ನು ಉರುಳಿಸಿ ಆಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನ್ ಕುರಿತಂತೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಅಫ್ಘಾನಿಸ್ತಾನ ತಾಲಿಬಾನ್ ವಶವಾಗುತ್ತಿದ್ದಂತೆಯೇ ಕಾಶ್ಮೀರದಲ್ಲಿ ಹಿಂಸಾಚಾರ ಉಗ್ರರ ಚಟುವಟಿಕೆ ಏರಿಕೆ!
ಅತ್ತ ಅಫ್ಘಾನಿಸ್ತಾನ ತಾಲೀಬಾನ್ ವಶವಾಗುತ್ತಿದ್ದಂತೆಯೇ ಇತ್ತ ಕಾಶ್ಮೀರದಲ್ಲಿ ಉಗ್ರರ ಹಿಂಸಾಚಾರ ಯತ್ನ, ಸಂಚು, ಚಟುವಟಿಕೆಗಳ ಪ್ರಕರಣಗಳು ಹೆಚ್ಚಾಗತೊಡಗಿವೆ.

ಅಫ್ಘಾನಿಸ್ತಾನ ತೊರೆಯುವ ಮುನ್ನ 73 ಏರ್ಕ್ರಾಫ್ಟ್ ಶಸ್ತ್ರಸಜ್ಜಿತ ವಾಹನಗಳನ್ನು ಹಾಳುಗೆಡವಿದ ಅಮೆರಿಕನ್ ಸೈನಿಕರು!
ಅಮೆರಿಕದ ಕಡೆಯ ಸೈನಿಕ ಆಫ್ಘನ್ ನೆಲದಲ್ಲಿ ಇರುವವರೆಗೂ ನಮ್ಮ ಶಸ್ತ್ರಾಗಾರವನ್ನು ಉಳಿಸಿಕೊಳ್ಳಲು ತೀರ್ಮಾನಿಸಿದ್ದೆವು ಎಂದು ಅಮೆರಿಕ ರಕ್ಷಣಾ ಇಲಾಖೆ ತಿಳಿಸಿದೆ.

ಅಫ್ಘಾನಿಸ್ತಾನದಿಂದ ಕಟ್ಟಕಡೆಯ ಅಮೆರಿಕ ಸೇನಾ ತುಕಡಿ ನಿರ್ಗಮನ: 20 ವರ್ಷಗಳ ಸುದೀರ್ಘ ಯುದ್ಧಕ್ಕೆ ಅಧಿಕೃತ ತೆರೆ
ಈ ಬಗ್ಗೆ ಟ್ವೀಟ್ ಮಾಡಿರುವ ತಾಲಿಬಾನ್ 'ದೇಶಪ್ರೇಮಿಗಳಿಗೆ, ಮುಜಾಹಿದೀನ್ ಗಳಿಗೆ ಅಭಿನಂದನೆಗಳು. ಇಂದು ಎಲ್ಲಾ ವಿದೇಶಿ ಸೈನಿಕರು ದೇಶದ ಪವಿತ್ರ ನೆಲದಿಂದ ಕಾಲ್ತೆಗೆದಿದ್ದಾರೆ ಎಂದು ಬರೆದುಕೊಂಡಿದೆ.

ಎಲ್ಲಿದ್ದರೇನು? 'ಕಾಯಕ ಕಾಯಕವೇ': ಅಫ್ಘಾನ್ ಮಾಜಿ ಮಂತ್ರಿ ಈಗ ಜರ್ಮನಿಯಲ್ಲಿ ಫುಡ್ ಡೆಲಿವರಿ ಬಾಯ್!
ತಾಲಿಬಾನಿಗಳು ಈಗ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಒಮ್ಮೆ ಅಫ್ಘಾನಿಸ್ತಾನದಲ್ಲಿ ಮಂತ್ರಿಯಾಗಿದ್ದ ಸೈಯದ್ ಸದಾತ್ ಅವರು ಅಲ್ಲಿನ ಭ್ರಷ್ಟಾಚಾರದಿಂದ ಬೇಸತ್ತು ಹುದ್ದೆ ತೊರೆದಿದ್ದು ಇದೀಗ ಜರ್ಮನಿಯಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ.

ಕ್ಷಿಪಣಿ ಮೇಲೆ ಹುತಾತ್ಮ ಯೋಧರ ಹೆಸರು ಬರೆದು ಇಸಿಸ್-ಕೆ ಉಗ್ರರ ವಿರುದ್ಧ ಸೇಡು ತೀರಿಸಿಕೊಂಡ ಅಮೆರಿಕ ಸೇನೆ
ಇಸಿಸ್ ಕೆ ಉಗ್ರರ ವಿರುದ್ಧ ಡ್ರೋನ್ ದಾಳಿ ನಡೆಸಿ ಸೇಡು ತೀರಿಸಿಕೊಂಡಿದ್ದ ಅಮೆರಿಕ ಸೇನೆ, ದಾಳಿಗೂ ಮುನ್ನ ಕ್ಷಿಪಣಿ ಮೇಲೆ ಹುತಾತ್ಮ ಯೋಧರ ಹೆಸರುಗಳನ್ನು ಬರೆದಿತ್ತು ಎಂದು ತಿಳಿದು ಬಂದಿದೆ.

ಪ್ರಮುಖ ಇಸ್ಲಾಂ ಧರ್ಮ ಗುರುವನ್ನು ಬಂಧಿಸಿದ ತಾಲಿಬಾನಿಗಳು
ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು ಮತ್ತೊಂದು ದುಷ್ಕೃತ್ಯ ಎಸಗಿದ್ದಾರೆ. ದೇಶದ ಪ್ರಮುಖ ಧರ್ಮಗುರು, ವಿದ್ವಾಂಸ ಮೌಲ್ವಿ ಮೊಹಮ್ಮದ್ ಸರ್ದಾರ್ ಜಾದ್ರನ್ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ತಾಲಿಬಾನ್ ಗೆ ಸಕ್ರಿಯ ಮಾರ್ಗದರ್ಶನ ನೀಡಿ: ಅಮೆರಿಕಕ್ಕೆ ಚೀನಾ ಸಲಹೆ
ಸತತ 20 ವರ್ಷಗಳ ಕಾಲ ಆಫ್ಗಾನಿಸ್ತಾನವನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಅಮೆರಿಕಗೆ ಚೀನಾ ಸರ್ಕಾರ ಸಲಹೆ ನೀಡಿದ್ದು, ಅಲ್ಲಿನ ಮೂಲಭೂತ ಬದಲಾವಣೆಯನ್ನು ಒಪ್ಪಿಕೊಂಡು ತಾಲಿಬಾನ್ ಗೆ ಸಕ್ರಿಯ ಮಾರ್ಗದರ್ಶನ ಮಾಡುವಂತೆ ಹೇಳಿದೆ.

