ಪ್ರಮುಖ ಇಸ್ಲಾಂ ಧರ್ಮ ಗುರುವನ್ನು ಬಂಧಿಸಿದ ತಾಲಿಬಾನಿಗಳು
ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು ಮತ್ತೊಂದು ದುಷ್ಕೃತ್ಯ ಎಸಗಿದ್ದಾರೆ. ದೇಶದ ಪ್ರಮುಖ ಧರ್ಮಗುರು, ವಿದ್ವಾಂಸ ಮೌಲ್ವಿ ಮೊಹಮ್ಮದ್ ಸರ್ದಾರ್ ಜಾದ್ರನ್ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಕಾಬೂಲ್: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು ಮತ್ತೊಂದು ದುಷ್ಕೃತ್ಯ ಎಸಗಿದ್ದಾರೆ. ದೇಶದ ಪ್ರಮುಖ ಧರ್ಮಗುರು, ವಿದ್ವಾಂಸ ಮೌಲ್ವಿ ಮೊಹಮ್ಮದ್ ಸರ್ದಾರ್ ಜಾದ್ರನ್ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಸಂಬಂಧ ಬಂಧಿತ ಮೌಲ್ವಿ ಮೊಹಮ್ಮದ್ ಸರ್ದಾರ್ ಜಾದ್ರನ್ ಅವರ ಫೋಟೋ ಗಳನ್ನು ತಾಲಿಬಾನ್ ಬಿಡುಗಡೆ ಮಾಡಿದೆ.
ಅಫ್ಘಾನ್ ನ್ಯಾಷನಲ್ ಕೌನ್ಸಿಲ್ ಆಫ್ ರಿಲಿಜಿಯಸ್ ಸ್ಕಾಲರ್ಸ್ ಸಂಸ್ಥೆಯ ಮಾಜಿ ಮುಖ್ಯಸ್ಥ ಮೌಲ್ವಿ ಮೊಹಮ್ಮದ್ ಸರ್ದಾರ್ ಜಾದ್ರನ್ ಅವರನ್ನು ಬಂಧಿಸಲಾಗಿದೆ ಎಂದು ತಾಲಿಬಾನ್ ಸೋಮವಾರ ದೃಢ ಪಡಿಸಿದೆ.
ಮೌಲ್ವಿ ಮೊಹಮ್ಮದ್ ಕಣ್ಣಿಗೆ ಬಟ್ಟೆ ಕಟ್ಟಿರುವ ಸರ್ದಾರ್ ಜಾದ್ರನ್ ಅವರ ಫೋಟೋಗಳನ್ನು ತಾಲಿಬಾನ್ ಬಿಡುಗಡೆ ಮಾಡಿದೆ. ಇದಕ್ಕೂ ಮೊದಲು ಅಫ್ಘಾನ್ ಬಹು ಜನ ಪ್ರಿಯ ಜನಪದ ಗಾಯಕನನ್ನು ತಾಲಿಬಾನಿಗಳು ಹತ್ಯೆ ಮಾಡಿದ್ದರು. ಅಲ್ಲದೆ, ಈ ಹಿಂದೆ ದೇಶದ ಮೊದಲ ಮಹಿಳಾ ರಾಜ್ಯಪಾಲರಲ್ಲಿ ಒಬ್ಬರಾಗಿದ್ದ ಸಲೀಮಾ ಮಜಾರಿ ಅವರನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


