Afghanistan

ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಘೋಷಿಸಲು ತಾಲಿಬಾನ್ ಸಿದ್ಧ; ಸರ್ವೋಚ್ಚ ನಾಯಕನಾಗಿ ಮುಲ್ಲಾ ಅಖುಂಡಜಾ ನೇಮಕ ಸಾಧ್ಯತೆ
ಇರಾನಿನ ನಾಯಕತ್ವದ ರೀತಿಯಲ್ಲಿ ಕಾಬೂಲ್ನಲ್ಲಿ ಹೊಸ ಸರ್ಕಾರ ರಚನೆಯನ್ನು ಘೋಷಿಸಲು ತಾಲಿಬಾನ್ ಸಜ್ಜಾಗಿದ್ದು, ತನ್ನ ಗುಂಪಿನ ಉನ್ನತ ಧಾರ್ಮಿಕ ಮುಖಂಡ ಮುಲ್ಲಾ ಹೆಬತುಲ್ಲಾ ಅಖುಂಡಜಾ ಅವರನ್ನು ಅಫ್ಘಾನಿಸ್ತಾನದ...

ಬಳಸಲಾಗದಂತೆ ನಿಷ್ಕ್ರಿಯಗೊಳಿಸಿ ಬಿಟ್ಟು ಹೋಗಿದ್ದ ಅಮೆರಿಕ ಸೇನಾ ವಾಹನಗಳಲ್ಲೇ ತಾಲಿಬಾನಿಗಳ ಪರೇಡ್!
ಆಫ್ಘಾನಿಸ್ತಾನ ತೊರೆಯುವಾಗ ತಾವು ತಂದಿದ್ದ ಸೇನಾ ವಾಹನಗಳನ್ನು ಬಳಕೆ ಮಾಡದಂತೆ ನಿಷ್ಕ್ರಿಯಗೊಳಿಸಿದ್ದೇವೆ ಎಂದು ಹೇಳಿದ್ದ ಅಮೆರಿಕ ಸೇನೆಯ ಹೇಳಿಕೆ ಬೆನ್ನಲ್ಲೇ ಅದೇ ವಾಹನಗಳಲ್ಲಿ ತಾಲಿಬಾನ್ ಪಡೆ ಕಾಬೂಲ್ ನಲ್ಲಿ ಪರೇಡ್ ನಡೆಸಿವೆ.

ಪಂಜಶೀರ್: ತಾಲಿಬಾನ್ ವಿರುದ್ಧ ಹೋರಾಟ ಮುಂದುವರೆಸಿದ ಪ್ರತಿರೋಧ ಪಡೆ; ಆಫ್ಘನ್ನರ ಹಿತಾಸಕ್ತಿ ಮುಖ್ಯ ಎಂದ ಅಮರುಲ್ಲಾ ಸಾಲೇಹ್
ಅಫ್ಗಾನಿಸ್ತಾನದ ಈಶಾನ್ಯ ಪ್ರಾಂತ್ಯದ ಪಂಜ್ಶಿರ್ನಲ್ಲಿನ ಪ್ರತಿರೋಧ ಪಡೆಗಳು ತಾಲಿಬಾನ್ ಆಡಳಿತದ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಬುಧವಾರ ಹೇಳಿಕೆ ನೀಡಿವೆ.

ತಾಲಿಬಾನ್ ವಶವಾದ ನಂತರ ಅಫ್ಘಾನಿಸ್ತಾನಕ್ಕೆ ಭಾರತದ ಸಕ್ಕರೆ ರಫ್ತು ಸಂಪೂರ್ಣ ಸ್ಥಗಿತ
ಭಾರತ ಅತ್ಯಧಿಕ ಪ್ರಮಾಣದ ಸಕ್ಕರೆ ರಫ್ತು ಮಾಡುತ್ತಿದ್ದ ಮೂರು ದೇಶಗಳಲ್ಲಿ ಅಫ್ಘಾನಿಸ್ತಾನವೂ ಒಂದಾಗಿತ್ತು. ವಾರ್ಷಿಕ 6- 7 ಲಕ್ಷ ಟನ್ ಪ್ರಮಾಣದ ಸಕ್ಕರೆಯನ್ನು ಅಫ್ಘಾನಿಸ್ತಾನವು ಭಾರತದಿಂದ ಆಮದು ಮಾಡಿಕೊಳ್ಳುತ್ತಿತ್ತು.

ಭಾರತದ ಮೇಲೆ ನಿಗಾ ಉದ್ದೇಶ: ಅಫ್ಘಾನಿಸ್ತಾನದ ಬಾಗ್ರಂ ವಾಯುನೆಲೆ ಸುಪರ್ದಿಗೆ ಚೀನಾ ಸಂಚು!
ಅಮೆರಿಕಾಧ್ಯಕ್ಷ ಜೋ ಬೈಡನ್ ಅವರ ಸರ್ಕಾರ ಈ ಸಂದರ್ಭದಲ್ಲಿ ತನ್ನ ಗೆಳೆಯರಾದ ಭಾರತ, ಜಪಾನ್, ಆಸ್ಟ್ರೇಲಿಯಾ ಬೆಂಬಲಕ್ಕೆ ನಿಲ್ಲಬೇಕು ಎಂದು ಅಮೆರಿಕದ ರಾಜತಾಂತ್ರಿಕ ಅಧಿಕಾರಿ ನಿಕ್ಕಿ ಹಾಲೆ ಪ್ರತಿಪಾದಿಸಿದ್ದಾರೆ.

ಹೆಲಿಕಾಪ್ಟರ್ನಿಂದ ನೇತಾಡಿದ್ದು ಧ್ವಜ ಸ್ಥಾಪಕ ವ್ಯಕ್ತಿ ಹೊರತು ಮೃತದೇಹವಲ್ಲ: ಅಫ್ಘಾನ್ ಪತ್ರಕರ್ತ
ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದ ಮೇಲೆ ಗಸ್ತು ತಿರುಗುತ್ತಿದ್ದ ಅಮೆರಿಕಾ ನಿರ್ಮಿತ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ನಲ್ಲಿ ನೇತಾಡಿದ್ದು ಧ್ವಜ ಸ್ಥಾಪಕ ವ್ಯಕ್ತಿ ಹೊರತು ಮೃತದೇಹವಲ್ಲ ಎಂದು ಅಫ್ಘಾನ್ ಪತ್ರಕರ್ತ ಸ್ಪಷ್ಟಪಡಿಸಿದ್ದಾರೆ.

ಭಯೋತ್ಪಾದನೆ ಪ್ರಕರಣಗಳಲ್ಲಿ ಬೇಕಾಗಿರುವ 25 ಭಾರತೀಯರು ಅಫ್ಘಾನಿಸ್ತಾನದಲ್ಲಿದ್ದಾರೆ: ಗುಪ್ತಚರ ಮಾಹಿತಿ
ಭಯೋತ್ಪಾದನೆಯ ಪ್ರಕರಣಗಳಲ್ಲಿ ಬೇಕಾಗಿರುವ 25 ಭಾರತೀಯರು ಅಫ್ಘಾನಿಸ್ತಾನದಲ್ಲಿದ್ದಾರೆ ಎಂದು ಗುಪ್ತಚರ ಮಾಹಿತಿ ಮೂಲಕ ತಿಳಿದುಬಂದಿದೆ.

ಅಫ್ಘಾನಿಸ್ತಾನದಿಂದ ಸೇನೆ ಸಂಪೂರ್ಣ ಹಿಂತೆಗೆತ: ತಮ್ಮ ನಡೆ ಸಮರ್ಥಿಸಿಕೊಂಡ ಅಮೆರಿಕ ಅಧ್ಯಕ್ಷ ಜೊ ಬೈಡನ್
ಅಮೆರಿಕದ ಸೇನಾಪಡೆಯನ್ನು ಸಂಪೂರ್ಣವಾಗಿ ಕಳೆದ ಮಧ್ಯರಾತ್ರಿ ಹಿಂಪಡೆದ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಜೊ ಬೈಡನ್ 20 ವರ್ಷಗಳ ಸುದೀರ್ಘ ಕಾಲದ ಯುದ್ಧ ಅದ್ವಿತೀಯ ಯಶಸ್ಸಿನದಾಗಿತ್ತು ಎಂದು ಹೇಳಿದ್ದಾರೆ.

ಜೈಶಂಕರ್ ಒಳಗೊಂಡ ಉನ್ನತ ಮಟ್ಟದ ತಂಡದಿಂದ ಅಫ್ಘಾನಿಸ್ತಾನ ಬೆಳವಣಿಗೆಗಳ ಮೇಲ್ವಿಚಾರಣೆ
ವಿದೇಶಾಂಗ ಸಚಿವ ಎಸ್ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ತಂಡ ಅಫ್ಘಾನಿಸ್ತಾನದ ಬೆಳವಣಿಗೆಗಳ ಬಗ್ಗೆ ಮೇಲ್ವಿಚಾರಣೆ ಮಾಡುತ್ತಿದೆ...

