Aamir Khan

'ಒಂಟಿಯಾಗಿರಲು ಆಗುತ್ತಿಲ್ಲ': 59ನೇ ವರ್ಷಕ್ಕೆ 3ನೇ ಮದುವೆ?, ನಟಿ ರಿಯಾ ಚಕ್ರವರ್ತಿಗೆ ಅಮಿರ್ ಖಾನ್ ಹೇಳಿದ್ದೇನು?
ರಿಯಾ ಚಕ್ರವರ್ತಿ ಅವರ ಪಾಡ್‌ಕಾಸ್ಟ್ ಅಧ್ಯಾಯ 2ರಲ್ಲಿ ಅಮೀರ್ ಖಾನ್ ಗೆ ಮದುವೆಯ ಬಗ್ಗೆ ಅವರ ವೈಯಕ್ತಿಕ ಅಭಿಪ್ರಾಯವನ್ನು ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅಮಿರ್, 'ನನ್ನ ಎರಡೂ ಮದುವೆ ವಿಫಲವಾಗಿದೆ. ಹೀಗಾಗಿ ನನ್ನಿಂದ ಯಾವುದೇ ಸಲಹೆ ತೆಗೆದುಕೊಳ್ಳಬೇಡಿ.

'ದಂಗಲ್' ಚಿತ್ರದ ಜೂನಿಯರ್ ಬಬಿತಾ ಇನ್ನಿಲ್ಲ: 19ನೇ ವಯಸ್ಸಿಗೆ ನಟಿ ಸುಹಾನಿ ಭಟ್ನಾಗರ್ ವಿಧಿವಶ
ಅಮೀರ್ ಖಾನ್ ಅಭಿನಯದ 'ದಂಗಲ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಬಾಲ ಕಲಾವಿದೆ ಸುಹಾನಿ ಭಟ್ನಾಗರ್ ವಿಧಿವಶರಾಗಿದ್ದಾರೆ. 19ನೇ ವಯಸ್ಸಿನಲ್ಲಿ ಸುಹಾನಿ ಜಗತ್ತಿಗೆ ವಿದಾಯ ಹೇಳಿದ್ದಾರೆ.

ಅಮೀರ್ ಖಾನ್ ಪುತ್ರಿ ಇರಾ ಖಾನ್-ನೂಪುರ್ ಶಿಖರೆ ಮದುವೆ Photos
ಬಾಲಿವುಡ್ 'ಪರ್ಫೆಕ್ಷನಿಸ್ಟ್' ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಜನವರಿ 3, 2024 ರಂದು ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್‌ನಲ್ಲಿ ರಿಜಿಸ್ಟರ್ ಮದುವೆಯಾದರು.

ಚೆನ್ನೈ ಪ್ರವಾಹ: ತಮಿಳು ನಟ ವಿಷ್ಣು ವಿಶಾಲ್ ಮನೆಯಲ್ಲಿ ಸಿಲುಕಿದ್ದ ಆಮಿರ್ ಖಾನ್ ರಕ್ಷಣೆ
ಮಿಚಾಂಗ್ ಚಂಡಮಾರುತದಿಂದ ಚೆನ್ನೈ ಸೇರಿದಂತೆ ತಮಿಳುನಾಡಿನಲ್ಲಿ ಭಾರಿ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ನನ್ನ ಬಳಿ ಮೂರು ರಾಷ್ಟ್ರಪ್ರಶಸ್ತಿಗಳಿವೆ, ಹೊಗಳಿದ್ರೂ ನಿಮ್ಮನ್ನ ಬಿಡಲ್ಲ; ಆಮೀರ್ ಖಾನ್ ಕಾಲೆಳೆದ ಕಂಗನಾ ರಣಾವತ್
ಆಮೀರ್ ಹೀಗೆ ಹೇಳಿದ ಬಳಿಕ ಕಂಗನಾ ರಣಾವತ್ ಅವರನ್ನು ಮರೆತಿದ್ದೀರಿ ಎಂದು ಶೋಭಾ ಡೇ ನೆನಪಿಸಿದರು. ಬಳಿಕ ಆಮೀರ್ ಖಾನ್, ಕಂಗನಾ ಅವರನ್ನು ಹೊಗಳಿದರು. 'ತುಂಬಾ ಸ್ಟ್ರಾಂಗ್ ನಟಿ, ಅವರೂ ಕೂಡ ಈ ಪಾತ್ರಕ್ಕೆ ಫಿಟ್ ಆಗುತ್ತಾರೆ' ಎಂದು ಹೇಳಿದರು.

ಈ ಅವತಾರ ಶೂಟಿಂಗ್‍ಗಾಗಿ ಅಲ್ಲ: ಹಣೆಗೆ ತಿಲಕವಿಟ್ಟು ಹಿಂದೂ ಪದ್ದತಿಯಂತೆ ಪೂಜೆ ಮಾಡಿದ ಅಮೀರ್ ಖಾನ್!
ಬಾಲಿವುಡ್ ಹಿರಿಯ ನಟ ಅಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿ ಕಿರಣ್ ರಾವ್ ಇತ್ತೀಚೆಗೆ 'ಅಮೀರ್ ಖಾನ್ ಪ್ರೊಡಕ್ಷನ್ಸ್' ಕಚೇರಿಯಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು. ಈ ವೇಳೆ ಅಮೀರ್ ಕಿರಣ್ ಜೊತೆ ಆರತಿ ಮಾಡಿದರು.

ಅಮೀರ್ ಖಾನ್ ಪುತ್ರಿ ಇರಾ ಖಾನ್-ನೂಪುರ್ ಶಿಖರೆ ಅದ್ಧೂರಿ ನಿಶ್ಚಿತಾರ್ಥದ ಫೋಟೋಗಳು!
ಲಾಲ್ ಸಿಂಗ್ ಚಡ್ಡಾ ಚಿತ್ರದ ಹೀನಾಯ ಸೋಲಿನಿಂದ ಕಂಗೆಟ್ಟು ಸದ್ಯ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿರುವ ಬಾಲಿವುಡ್ ನಟ ಅಮೀರ್ ಖಾನ್ ಇದೀಗ ಅದ್ಧೂರಿಯಾಗಿ ತಮ್ಮ ಪುತ್ರಿಯ ನಿಶ್ಚಿತಾರ್ಥ ಮಾಡಿದ್ದಾರೆ.

ಬಹುಕಾಲದ ಗೆಳೆಯ ನೂಪುರ್ ಶಿಖರೆ ಜೊತೆ ಆಮೀರ್ ಖಾನ್ ಪುತ್ರಿ ಅದ್ಧೂರಿ ನಿಶ್ಚಿತಾರ್ಥ
ಬಾಲಿವುಡ್ನ ಮಿಸ್ಟರ್ ಪರ್ಫೆಕ್ಟ್ ಎಂದೇ ಖ್ಯಾತಿಯಾಗಿರುವ ನಟ ಆಮೀರ್ ಖಾನ್ ಪುತ್ರಿ ಇರಾ ಖಾನ್ ತಮ್ಮ ಬಹುಕಾಲದ ಗೆಳೆಯ ನೂಪುರ್ ಶಿಖರೆ ಜೊತೆ ನಿನ್ನೆ ಮುಂಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಸಲಾಂ ವೆಂಕಿ ಚಿತ್ರದ ಟ್ರೈಲರ್
ನಟಿ ಕಾಜೋಲ್ ಮತ್ತು ಅಮಿರ್ ಖಾನ್ ಅಭಿನಯದ ಸಲಾಂ ವೆಂಕಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರೇವತಿ ನಿರ್ದೇಶಿಸಿದ್ದಾರೆ.

