ನನ್ನ ಬಳಿ ಮೂರು ರಾಷ್ಟ್ರಪ್ರಶಸ್ತಿಗಳಿವೆ, ಹೊಗಳಿದ್ರೂ ನಿಮ್ಮನ್ನ ಬಿಡಲ್ಲ; ಆಮೀರ್ ಖಾನ್ ಕಾಲೆಳೆದ ಕಂಗನಾ ರಣಾವತ್
ಆಮೀರ್ ಹೀಗೆ ಹೇಳಿದ ಬಳಿಕ ಕಂಗನಾ ರಣಾವತ್ ಅವರನ್ನು ಮರೆತಿದ್ದೀರಿ ಎಂದು ಶೋಭಾ ಡೇ ನೆನಪಿಸಿದರು. ಬಳಿಕ ಆಮೀರ್ ಖಾನ್, ಕಂಗನಾ ಅವರನ್ನು ಹೊಗಳಿದರು. 'ತುಂಬಾ ಸ್ಟ್ರಾಂಗ್ ನಟಿ, ಅವರೂ ಕೂಡ ಈ ಪಾತ್ರಕ್ಕೆ ಫಿಟ್ ಆಗುತ್ತಾರೆ' ಎಂದು ಹೇಳಿದರು.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಆಮೀರ್ ಖಾನ್ ಬಾಲಿವುಡ್ ನಟಿ ಕಂಗನಾ ರಣಾವತ್ ಅವರನ್ನು ಹೊಗಳಿದ್ದರು.
ಆದರೆ ಆಮೀರ್ ಖಾನ್ ತಮ್ಮನ್ನು ಹೊಗಳಿದ್ರು ಕಂಗನಾ ಪ್ರಭಾವಿತರಾಗಿಲ್ಲ, ಇದಕ್ಕೆ ಸಾಕ್ಷಿ ಎನ್ನುವಂತೆ ಒಂದು ಟ್ವೀಟ್ ಮಾಡಿದ್ದಾರೆ. ಇತ್ತೀಚಿಗಷ್ಟೆ ಆಮೀರ್ ಖಾನ್ ಕಾದಂಬರಿಗಾರ್ತಿ ಮತ್ತು ಅಂಕಣಗಾರ್ತಿ ಶೋಭಾ ಡೇ ಅವರ ಹೊಸ ಪುಸ್ತಕ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದರು. ಸಂವಾದದಲ್ಲಿ ಆಮೀರ್ ಖಾನ್ ಕಂಗನಾ ಬಗ್ಗೆ ಮಾತನಾಡಿದರು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ನಟಿ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ.
ಶೋಭಾ ಡೇ ಪಾತ್ರಕ್ಕೆ ಯಾವ ನಟಿ ಸೂಕ್ತ ಎಂದು ಆಮೀರ್ ಖಾನ್ ಅವರನ್ನು ಕೇಳಲಾಯಿತು. ಅಲಿಯಾ ಭಟ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಎಂದು ಆಮೀರ್ ಖಾನ್ ಹೇಳಿದರು.
ಆಮೀರ್ ಹೀಗೆ ಹೇಳಿದ ಬಳಿಕ ಕಂಗನಾ ರಣಾವತ್ ಅವರನ್ನು ಮರೆತಿದ್ದೀರಿ ಎಂದು ಶೋಭಾ ಡೇ ನೆನಪಿಸಿದರು. ಬಳಿಕ ಆಮೀರ್ ಖಾನ್, ಕಂಗನಾ ಅವರನ್ನು ಹೊಗಳಿದರು. 'ತುಂಬಾ ಸ್ಟ್ರಾಂಗ್ ನಟಿ, ಅವರೂ ಕೂಡ ಈ ಪಾತ್ರಕ್ಕೆ ಫಿಟ್ ಆಗುತ್ತಾರೆ' ಎಂದು ಹೇಳಿದರು. ತಲೈವಿ ಸಿನಿಮಾದ ಪಾತ್ರಕ್ಕಾಗಿ ಹೊಗಳಿದರು.
ಆಮೀರ್ ಖಾನ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಕಂಗನಾ, ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
'ಬೇಚಾರ ಅಮೀರ್ ಖಾನ್... ಹ ಹ್ಹಾ.. ಅವರು ನಾನು ಮೂರು ಬಾರಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಎಂದು ಗೊತ್ತಿಲ್ಲದವರಂತೆ ನಟಿಸಲು ಅವರು ಅತ್ಯುತ್ತಮವಾಗಿ ಪ್ರಯತ್ನಿಸಿದ್ದಾರೆ. ಶೋಭಾ ಡೇ ಧನ್ಯವಾದಗಳು. ನಾನು ನಿಮ್ಮ ಪಾತ್ರ ಮಾಡಲು ಇಷ್ಟಪಡುತ್ತೇನೆ' ಎಂದು ಹೇಳಿದ್ದಾರೆ.
ಬಳಿಕ ಮತ್ತೊಂದು ಟ್ವೀಟ್ ನಲ್ಲಿ ಕಂಗನಾ, 'ಶೋಭಾ ಡೆ ನಾವು ವಿರೋಧಾತ್ಮಕ ರಾಜಕೀಯ ದೃಷ್ಟಿಕೋನಗಳನ್ನು ಹೊಂದಿದ್ದೇವೆ. ಆದರೆ ಅದು ನನ್ನ ಕಲೆ. ಕಠಿಣ ಪರಿಶ್ರಮ ಮತ್ತು ನನ್ನ ಕುಶಲತೆಗೆ ಸಮರ್ಪಣೆ ಮಾಡುವುದನ್ನು ತಡೆಯುವುದಿಲ್ಲ. ನಿಮ್ಮ ಹೊಸ ಪುಸ್ತಕಕ್ಕೆ ನಾನು ಶುಭ ಹಾರೈಸುತ್ತೇನೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


