ಕ್ರೀಡೆ

FIFA World Cup 2026 Final: ಸೋಲಿನಿಂದ ಕಂಗೆಟ್ಟು, ಗಳಗಳನೇ ಅತ್ತ ಅರ್ಜೆಂಟೀನಾ ಕೋಚ್ ಲಿಯೋನೆಲ್ ಸ್ಕಲೋನಿ! Video

ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಿಯೋನೆಲ್ ಸ್ಕಲೋನಿ, ಭಾವುಕರಾಗಿ ಕಣ್ಣೀರು ಹಾಕಿದರು.

FIFA World Cup 2026 Final: ಸೋಲಿನಿಂದ ಕಂಗೆಟ್ಟು, ಗಳಗಳನೇ ಅತ್ತ ಅರ್ಜೆಂಟೀನಾ ಕೋಚ್ ಲಿಯೋನೆಲ್ ಸ್ಕಲೋನಿ! Video
ಅರ್ಜೆಂಟೀನಾ ಕೋಚ್ ಲಿಯೋನೆಲ್ ಸ್ಕಲೋನಿ
Published On :

ನ್ಯೂಜೆರ್ಸಿ: ಫಿಫಾ ವಿಶ್ವಕಪ್ 2026ರ ಫೈನಲ್‌ನಲ್ಲಿ ಸ್ಪೇನ್ ವಿರುದ್ಧದ ರೋಚಕ ಹಾಗೂ ನಾಟಕೀಯ ಸೋಲಿನ ಬಳಿಕ ಅರ್ಜೆಂಟೀನಾ ಕೋಚ್ ಲಿಯೋನೆಲ್ ಸ್ಕಲೋನಿ ಭಾವುಕರಾಗಿ ಗಳಗಳನೇ ಅತ್ತಿದ್ದಾರೆ.

ವಿಶ್ವಕಪ್‌ನ ಹಿಂದಿನ ಸುತ್ತುಗಳಲ್ಲಿ ತೋರಿದ್ದ ಪ್ರಭಾವಶಾಲಿ ಆಟವನ್ನು ಫೈನಲ್‌ನಲ್ಲಿ ಪುನರಾವರ್ತಿಸಲು ಅರ್ಜೆಂಟೀನಾ ವಿಫಲವಾದರೂ, ಪ್ರಶಸ್ತಿ ನಿರ್ಣಾಯಕ ಪಂದ್ಯದಲ್ಲಿ ಸ್ಪೇನ್ ತಂಡಕ್ಕೆ ಮುನ್ನಡೆ ಸಾಧಿಸಲು ಅವರು ಸುಲಭವಾಗಿ ಅವಕಾಶ ನೀಡಲಿಲ್ಲ; ಆದರೆ ಎಂಜೊ ಮಾರ್ಟಿನೆಜ್ ಅವರನ್ನು ಮೈದಾನದಿಂದ ಹೊರಕಳುಹಿಸಿದ ದುರದೃಷ್ಟಕರ ಘಟನೆಯು ಪಂದ್ಯದ ಚಿತ್ರಣವನ್ನೇ ಬದಲಿಸಿತು.

ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಿಯೋನೆಲ್ ಸ್ಕಲೋನಿ, ಭಾವುಕರಾಗಿ ಕಣ್ಣೀರು ಹಾಕಿದರು. 2018ರಿಂದ ಅರ್ಜೆಂಟೀನಾ ತಂಡದ ಜವಾಬ್ದಾರಿಯನ್ನು ಹೊತ್ತಿರುವ ಸ್ಕಲೋನಿ, ತಮ್ಮ ಭವಿಷ್ಯದ ಯೋಜನೆಗಳನ್ನು ಬಹಿರಂಗಪಡಿಸಲು ನಿರಾಕರಿಸಿದರಾದರೂ, ಮುಂದಿನ ಹಾದಿಯ ಬಗ್ಗೆ ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೇಷನ್ ​​ಅಧ್ಯಕ್ಷರೊಂದಿಗೆ ಚರ್ಚಿಸುವ ಇಂಗಿತ ವ್ಯಕ್ತಪಡಿಸಿದರು.

"ಸತ್ಯ ಹೇಳಬೇಕೆಂದರೆ, ನಾನು ಲಿಯೋ (ಮೆಸ್ಸಿ) ಅವರೊಂದಿಗೆ ಮಾತನಾಡಿಲ್ಲ; ಆದರೆ ನಾನು ಅಧ್ಯಕ್ಷರೊಂದಿಗೆ ಮಾತನಾಡಲಿದ್ದೇನೆ. ನಾನು ಏನು ಮಾಡಬೇಕೆಂಬುದರ ಬಗ್ಗೆ ನನಗೆ ಒಂದು ಕಲ್ಪನೆ ಇದೆ. ನನ್ನ ಒಪ್ಪಂದದ ಅವಧಿಯನ್ನು (ಡಿಸೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದೆ) ಪೂರೈಸುತ್ತೇನೆ. ಆದರೆ, ಇಷ್ಟೊಂದು ದೊಡ್ಡ ಸಾಧನೆಯನ್ನು ಮತ್ತೆ ಮಾಡಲು ಸಾಧ್ಯವೇ ಎಂಬ ಬಗ್ಗೆ ನನಗೆ ಖಚಿತವಿಲ್ಲದ ಕಾರಣ, ನಾನು ಈ ಬಗ್ಗೆ ಆಲೋಚಿಸಬೇಕಿದೆ ಮತ್ತು ಬಹುಶಃ ನಾವು ಇದರ ಕುರಿತು ಚರ್ಚಿಸಬೇಕಿದೆ ಎಂದು ಸ್ಕಲೋನಿ ಹೇಳಿದರು.

ಟ್ರೋಫಿ ಗೆಲ್ಲಲು ಸಾಧ್ಯವಾಗದಿದ್ದರೂ ತಮ್ಮ ತಂಡದ ಸಾಧನೆಯನ್ನು ಮೆಚ್ಚಿಕೊಳ್ಳುವಂತೆ ಅಭಿಮಾನಿಗಳಿಗೆ ಕರೆ ನೀಡಿದರು; ಫೈನಲ್ ತಲುಪುವುದೇ ಒಂದು ದೊಡ್ಡ ಯಶಸ್ಸು ಎಂದರು. ಟೂರ್ನಿಯನ್ನು ಗೆದ್ದಾಗ ಸಿಗುವಷ್ಟೇ ಸಂತೋಷವನ್ನು ರನ್ನರ್-ಅಪ್ (ದ್ವಿತೀಯ ಸ್ಥಾನ) ಆಗುವುದರಲ್ಲೂ ಕಾಣುವಂತೆ ಜನರಿಗೆ ಮನವರಿಕೆ ಮಾಡಿಕೊಡುವುದು ಬಹಳ ಕಷ್ಟ. ಇದೂ ಕೂಡ ಒಂದು ಯಶಸ್ಸೇ. ನಾವು ಏನು ಸಾಧಿಸಿದ್ದೇವೆ ಮತ್ತು ಅದನ್ನು ಹೇಗೆ ಸಾಧಿಸಿದ್ದೇವೆ ಎಂಬುದು ಜನರಿಗೆ ತಿಳಿದಿದೆ ಎಂದು ನನಗೆ ಅನ್ನಿಸುತ್ತದೆ. ವಿಶೇಷವಾಗಿ ಲಾಕರ್ ರೂಮ್‌ನಲ್ಲಿ ಈಗಾಗಲೇ ಮನಸಾರೆ ಅತ್ತಿರುವುದರಿಂದ, ಈಗ ನಾನು ಅಳುತ್ತಿಲ್ಲ ಎಂದು ಹೇಳಿದರು.

ಟೂರ್ನಿಯುದ್ದಕ್ಕೂ ತಮ್ಮ ಆಟಗಾರರು ತೋರಿದ ಹೋರಾಟದ ಮನೋಭಾವವನ್ನು ಶ್ಲಾಘಿಸಿದ ಸ್ಕಲೋನಿ, ಕಠಿಣ ಹೋರಾಟದ ನಂತರ ಅವರನ್ನು "ಯೋಧರು" ಎಂದು ಬಣ್ಣಿಸಿದರು."ಆದರೆ ನಾನು ಈ ತಂಡಕ್ಕೆ ಕೃತಜ್ಞನಾಗಿರಬೇಕು, ಏಕೆಂದರೆ ಅವರು ನಿಜವಾಗಿಯೂ ಯೋಧರಂತೆ ಆಡಿದ್ದಾರೆ. ಅದೇ ಸತ್ಯ. ನಾವು ಅತ್ಯುತ್ತಮ ತಂಡವೊಂದರ ವಿರುದ್ಧ ಸ್ಪರ್ಧಿಸಿದೆವು ಇದು ಬಹಳ ಸಕಾರಾತ್ಮಕ ವಿಷಯ ಮತ್ತು ಭವಿಷ್ಯದ ಪೀಳಿಗೆಯೂ ಇದರಿಂದ ಪ್ರಭಾವಿತವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.