FIFA World Cup 2026 final ceremony: ಅಲ್ಲೂ ಟ್ರಂಪ್ ಹುಚ್ಚಾಟ! ಮುಜುಗರದ ಸನ್ನಿವೇಶ; Video
ಟ್ರಂಪ್ ಅಲ್ಲಿಂದ ಹೋಗದೆ ಇರುವುದನ್ನು ನೋಡಿ ರೋಡ್ರಿ ಸಾಕಷ್ಟು ಅಸಹನೀಯರಾದಂತೆ ಕಂಡುಬಂದರು. ಅಲ್ಲಿಂದ ತೆರಳುವಂತೆ ಅವರು ಸೂಚಿಸಿದರು.

ನ್ಯೂಜೆರ್ಸಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಚಾರದ ಹುಚ್ಚು ಇರುವುದು ಎಲ್ಲರಿಗೂ ತಿಳಿದಿರುವ ವಿಷಯ. 2026ರ ಫಿಫಾ ವಿಶ್ವಕಪ್ ಫೈನಲ್ ಸಮಾರಂಭದಲ್ಲಿಯೂ ಅದೇ ಹುಚ್ಚಾಟ ಮಾಡಲು ಹೋಗಿ ಮುಜುಗರದ ಸನ್ನಿವೇಶಕ್ಕೆ ಕಾರಣರಾದರು. ಸ್ಪೇನ್ ತಂಡವು ಗೆಲುವಿನ ಸಂಭ್ರಮದಲ್ಲಿದ್ದಾಗ ಕ್ಯಾಮೆರಾ ಫ್ರೇಮ್‌ನಲ್ಲಿ ಕಾಣಿಸಿಕೊಳ್ಳಲು ಟ್ರಂಪ್ ಪ್ರಯತ್ನಿಸಿದರು. ಅದರಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆದರು.
ಸ್ಪೇನ್ ತಂಡದ ನಾಯಕ ರೋಡ್ರಿಗೆ ವಿಶ್ವಕಪ್ ಟ್ರೋಫಿಯನ್ನು ಹಸ್ತಾಂತರಿಸಿದ ನಂತರ, ಟ್ರಂಪ್ ಅಲ್ಲಿಂದ ಹೋಗಲೇ ಇಲ್ಲ. ಅಲ್ಲಿಯೇ ಕ್ಯಾಮರಾಗಳಿಗೆ ಫೋಸ್ ನೀಡುತ್ತಾ ನಿಂತಿದ್ದರು. ಆರಂಭದಲ್ಲಿರೋಡ್ರಿ ಅವರನ್ನು ಪಕ್ಕಕ್ಕೆ ಸರಿಯುವಂತೆ ಸೂಚಿಸಿದರು. ಆದರೆ ಪರಿಸ್ಥಿತಿ ಎಷ್ಟು ವಿಕೋಪಕ್ಕೆ ಹೋಯಿತೆಂದರೆ, ಸ್ವತಃ ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಮಧ್ಯಪ್ರವೇಶಿಸಿ ಟ್ರಂಪ್ ಅವರನ್ನು ಅಲ್ಲಿಂದ ಕರೆದೊಯ್ಯಬೇಕಾಯಿತು.
ಈ ಘಟನೆಯು ಸಾಕಷ್ಟು ಮುಜುಗರದ ಸನ್ನಿವೇಶವನ್ನು ಸೃಷ್ಟಿಸಿತು. ಏಕೆಂದರೆ ಟ್ರಂಪ್ ಸ್ಪೇನ್ ತಂಡದೊಂದಿಗೆ ವೇದಿಕೆಯ ಮೇಲೆ ವಿಶ್ವಕಪ್ ಫೈನಲ್ ಸಂಭ್ರಮಾಚರಣೆಯ ಭಾಗವಾಗಲು ಬಯಸುತ್ತಿರುವಂತೆ ಕಂಡುಬಂದಿತು. ಟ್ರಂಪ್ ಅಲ್ಲಿಂದ ಹೋಗದೆ ಇರುವುದನ್ನು ನೋಡಿ ರೋಡ್ರಿ ಸಾಕಷ್ಟು ಅಸಹನೀಯರಾದಂತೆ ಕಂಡುಬಂದರು. ಅಲ್ಲಿಂದ ತೆರಳುವಂತೆ ಅವರು ಸೂಚಿಸಿದರು.
ಆದಾಗ್ಯೂ ಟ್ರಂಪ್ ಪಕ್ಕಕ್ಕೆ ಸರಿಯಲು ಸಾಕಷ್ಟು ಸಮಯ ತೆಗೆದುಕೊಂಡರು.ಇದರಿಂದಾಗಿ ವೇದಿಕೆಯ ಮೇಲೆ ಸ್ಪೇನ್ ತಂಡದ ಸಂಭ್ರಮಾಚರಣೆಗೆ ವಿಳಂಬವಾಯಿತು. ಕೊನೆಗೆ, ಇನ್ಫಾಂಟಿನೊ ಅವರು ಟ್ರಂಪ್ ಅವರ ಕೈ ಹಿಡಿದು ವೇದಿಕೆಯ ಮೂಲೆಯತ್ತ ಕರೆದೊಯ್ಯಲು ನಿರ್ಧರಿಸಿದರು. ಆಗಲೂ ಸಹ, ಟ್ರಂಪ್ ಸ್ಪೇನ್ ತಂಡದ ಕೊನೆಯ ಆಟಗಾರನ ಪಕ್ಕದಲ್ಲೇ ನಿಂತುಕೊಂಡರು ಮತ್ತು ಸಂಪೂರ್ಣವಾಗಿ ಪಕ್ಕಕ್ಕೆ ಸರಿಯಲು ನಿರಾಕರಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮತ್ತೊಂದು ವೀಡಿಯೊದಲ್ಲಿ, ಅರ್ಜೆಂಟೀನಾದ ಡಿಫೆಂಡರ್ ಕ್ರಿಶ್ಚಿಯನ್ ರೊಮೆರೊ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಯಾವುದೇ ಶೇಕ್ ಹ್ಯಾಂಡ್ ನಡೆಯಲಿಲ್ಲ ಎಂಬುದು ಕಂಡುಬಂದಿದೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯ ವಿಷಯವಾಗಿದೆ.
ಸ್ಪೇನ್ ವಿಶ್ವಕಪ್ ಗೆದ್ದ ನಂತರ ಭಾನುವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಮೈದಾನಕ್ಕೆ ಆಗಮಿಸಿದಾಗ ಟ್ರಂಪ್ ಮತ್ತು ಫಿಫಾ ಮುಖ್ಯಸ್ಥ ಇನ್ಫಾಂಟಿನೊ ಅವರಿಗೆ ಪ್ರೇಕ್ಷಕರಿಂದ ತೀವ್ರ ವಿರೋಧದ ಕೂಗು (boos) ಕೇಳಿಬಂದಿತು. ಪಂದ್ಯದ ಸಮಯದಲ್ಲಿ, ನ್ಯೂಯಾರ್ಕ್ ಹೊರವಲಯದ ಕ್ರೀಡಾಂಗಣದಲ್ಲಿ 80,000 ಜನರ ದೊಡ್ಡ ಪ್ರೇಕ್ಷಕರ ಸಮ್ಮುಖದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾವನ್ನು ಸ್ಪೇನ್ 1-0 ಅಂತರದಿಂದ ಸೋಲಿಸುವುದನ್ನು ಟ್ರಂಪ್ ತಮ್ಮ ಆಪ್ತ ಸ್ನೇಹಿತ ಇನ್ಫಾಂಟಿನೊ ಅವರ ಪಕ್ಕದಲ್ಲಿ ಕುಳಿತು ವೀಕ್ಷಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



