ದಪ್ಪ ಚರ್ಮದ ಬಗ್ಗೆ ಕೇಳಿದ್ದೀರಾ? ಅದಕ್ಕೆ ಜಗತ್ತಿನಲ್ಲಿರುವ ಏಕೈಕ ಉದಾಹರಣೆ ನಾನು: ಸಿಎಂ ವಿಜಯ್
ನಾವು ಅವರ ಹಳೇ ಪ್ರಕರಣಗಳನ್ನು ಹೇಳಿದಾಗೆಲ್ಲ, ಅವರು ಮಾನಹಾನಿಕರ ದಾಳಿಗೆ ಮುಂದಾಗುತ್ತಾರೆ. ನೀವು ದಪ್ಪ ಚರ್ಮದ ಬಗ್ಗೆ ಕೇಳಿದ್ದೀರಾ? ಅದಕ್ಕೆ ಉದಾಹರಣೆ ನಾನು. ರಾಜಕೀಯಕ್ಕೆ ಕಾಲಿಡುವ ಮೊದಲು ಸುಮಾರು 30, 35 ವರ್ಷಗಳಿಂದ ಎಲ್ಲವನ್ನೂ ನೋಡಿದ್ದೇನೆ.

ಮದುರಾಂತಕಂ: ದಪ್ಪ ಚರ್ಮದ ಬಗ್ಗೆ ಕೇಳಿದ್ದೀರಾ? ಅದಕ್ಕೆ ಜಗತ್ತಿನಲ್ಲಿರುವ ಏಕೈಕ ಉದಾಹರಣೆ ನಾನು ಎಂದು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ಚಂದ್ರಶೇಖರ್ ವಿಜಯ್ ಹೇಳಿದ್ದಾರೆ.
ಮುದುರಾಂತಕಂ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ತಮ್ಮ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿಯಾಗಿರುವ ಮರಗತಂ ಕುಮಾರವೇಲ್ ಕೆ. ಅವರ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ವೇಳೆ ವಿಜಯ್ ಮಾತನಾಡಿದ್ದಾರೆ.
ಮರಗತಂ ಅವರು ಇದೇ ವರ್ಷ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷದಿಂದ ಗೆದ್ದಿದ್ದರು. ನಂತರ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಟಿವಿಕೆಗೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಈ ಕ್ಷೇತ್ರಕ್ಕೆ ಅಕ್ಟೋಬರ್ 6ರಂದು ಮತದಾನ ನಡೆಯಲಿದೆ.
ವಿರೋಧ ಪಕ್ಷಗಳು, ಅದರಲ್ಲೂ ಡಿಎಂಕೆ ಮಾಡುತ್ತಿರುವ ಟೀಕೆಗಳಿಗೆ ಹೆದರುವುದಿಲ್ಲ ಎಂದು ಪ್ರಚಾರ ಸಮಾವೇಶದಲ್ಲಿ ವಿಜಯ್ ಹೇಳಿದ್ದಾರೆ.
ನೇರವಾಗಿ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ತನ್ನ ವಿರುದ್ಧದ ಟೀಕೆಗಳು ಹಳೆಯವು ಎಂದು ಆ ಪಕ್ಷವು (ಡಿಎಂಕೆ) ಹೇಳಿಕೊಳ್ಳುತ್ತಿದೆ. ಹೊಸ ತಲೆಮಾರಿನವರಿಗೆ 50 ವರ್ಷ ಹಿಂದಿನ ಭ್ರಷ್ಟಾಚಾರ ಪ್ರಕರಣಗಳು ಗೊತ್ತಿಲ್ಲ ಎಂದುಕೊಂಡಿರುವ ಡಿಎಂಕೆ, ತನ್ನದು ಕ್ಲೀನ್ ಇಮೇಜ್ ಎಂದು ತೋರಿಸಿಕೊಳ್ಳಲು ಹೊರಟಿದೆ ಎಂಬುದಾಗಿ ತಿವಿದಿದ್ದಾರೆ.
ನಾವು ಅವರ ಹಳೇ ಪ್ರಕರಣಗಳನ್ನು ಹೇಳಿದಾಗೆಲ್ಲ, ಅವರು ಮಾನಹಾನಿಕರ ದಾಳಿಗೆ ಮುಂದಾಗುತ್ತಾರೆ. ನೀವು ದಪ್ಪ ಚರ್ಮದ ಬಗ್ಗೆ ಕೇಳಿದ್ದೀರಾ? ಅದಕ್ಕೆ ಉದಾಹರಣೆ ನಾನು. ರಾಜಕೀಯಕ್ಕೆ ಕಾಲಿಡುವ ಮೊದಲು ಸುಮಾರು 30, 35 ವರ್ಷಗಳಿಂದ ಎಲ್ಲವನ್ನೂ ನೋಡಿದ್ದೇನೆ.
ಇಂತಹ ಟೀಕೆಗಳು ನನಗೆ ಹೊಸದಲ್ಲ. ನಿಜ ಹೇಳಬೇಕೆಂದರೆ ಇವು ಸಾಕಾಗುತ್ತಿಲ್ಲ, ಇನ್ನಷ್ಟು ಟೀಕೆಗಳು ಬರಲಿ ಎನಿಸುತ್ತಿದೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಸರ್ಕಾರಿಯಾ ಆಯೋಗದ ತನಿಖಾ ವರದಿಯನ್ನು ಉಲ್ಲೇಖಿಸಿದ ವಿಜಯ್, ಟಿವಿಕೆ ಸರ್ಕಾರ ಎಂದಿಗೂ ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



