ಸಿನಿಮಾ ಸುದ್ದಿ

BBK-13: ಯಶಸ್, ಸೌಂದರ್ಯ ಶೆಟ್ಟಿ ಮಧ್ಯೆ ಚಿಗುರಿತಾ ಪ್ರೀತಿ? Video

ಕಳೆದ ಬಾರಿ ಗಿಲ್ಲಿ ನಟ ಹಾಗೂ ಕಾವ್ಯ ಜೋಡಿ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಕನ್ನಡಿಗರು 'ಗಿಲ್ಲಿ ಜೋಡಿ' ಎಂದು ಕರೆಯುತ್ತಿದ್ದರು

BBK-13: ಯಶಸ್, ಸೌಂದರ್ಯ ಶೆಟ್ಟಿ ಮಧ್ಯೆ ಚಿಗುರಿತಾ ಪ್ರೀತಿ? Video
ಯಶಸ್, ಸೌಂದರ್ಯ ಶೆಟ್ಟಿ
Published On :

ಪ್ರತಿ ಬಾರಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಒಂದು ಜೋಡಿಯ ಬಗ್ಗೆ ಗಾಸಿಪ್ ಇದ್ದೇ ಇರುತ್ತದೆ. ಇದು ಆಯೋಜಕರ ತಂತ್ರವೋ ಅಥವಾ ನಾಟಕವೋ ಒಂದು ಗೊತ್ತಿಲ್ಲ. ಆದ್ರೆ ಪ್ರತಿ ಸೀಸನ್ ನಲ್ಲೂ ಒಂದಲ್ಲಾ ಒಂದು ಜೋಡಿ ಪ್ರಸಿದ್ಧಿಯಾಗುವುದು ಸಾಮಾನ್ಯ.

ಕಳೆದ ಬಾರಿ ಗಿಲ್ಲಿ ನಟ ಹಾಗೂ ಕಾವ್ಯ ಜೋಡಿ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಕನ್ನಡಿಗರು 'ಗಿಲ್ಲಿ ಜೋಡಿ' ಎಂದು ಕರೆಯುತ್ತಿದ್ದರು. ಇದೇ ರೀತಿಯಲ್ಲಿ ಚಂದನ್ ಶೆಟ್ಟಿ - ನಿವೇದಿತಾ ಗೌಡ, ಅರವಿಂದ್ ಕೆ.ಪಿ - ದಿವ್ಯಾ ಉರುಡುಗ: ರೂಪೇಶ್ ಶೆಟ್ಟಿ - ಸಾನ್ಯ ಅಯ್ಯರ್, ತಿಲಕ್ - ಶ್ವೇತಾ ಪಂಡಿತ್ ಜೋಡಿ ಪಾಪ್ಯುಲರ್ ಆಗಿತ್ತು.

ಈ ಬಾರಿಯೂ ದೊಡ್ಮನೆಯಲ್ಲಿ ಅಂತಹ ಜೋಡಿಯೊಂದಿದ್ದು, ಯಶಸ್, ಸೌಂದರ್ಯ ಮಧ್ಯೆ ಪ್ರೀತಿ ಚಿಗುರಿರುವಂತೆ ಕಂಡುಬರುತ್ತಿದೆ. ಹೌದು. ಸುದೀಪ್ ಆದೇಶದಂತೆ ಸೌಂದರ್ಯ ಶೆಟ್ಟಿ ಜೈಲು ಸೇರಿದ್ದಾರೆ. ಜೈಲಿನ ಹೊರಗಡೆ ನಿಂತಿದ್ದ ಯಶಸ್‌ಗೆ ಸೌಂದರ್ಯ, ನಾನು ಜೈಲಿನಲ್ಲಿ ಇದ್ರೆ ನನ್ನ ನೋಡೋಕೆ ಬರ್ತೀರಾ? ಎಂದು ಕೇಳುತ್ತಾರೆ. ಅದಕ್ಕೆ ಈಗ ಎಲ್ಲಿದ್ಯಾ? ಎಂದು ಯಶಸ್ ಕೇಳಿದ ಪ್ರಶ್ನೆಗೆ, ನಿನ್ನ ಮನಸ್ಸಿನಲ್ಲಿದ್ದೇನೆ ಎಂದು ಸೌಂದರ್ಯ ತರಲೆ ಉತ್ತರ ಕೊಡುತ್ತಾರೆ.

ಅಲ್ಲಿಂದ ಏನಾಯ್ತೋ… ಯಶಸ್ ಮಾತ್ರ ಜೈಲಿನ ಸುತ್ತನೇ.. ಅಲ್ಲ ಸೌಂದರ್ಯ ಸುತ್ತನೇ ತಿರುಗುತ್ತಿದ್ದಾರೆ. ಜೈಲಿನ ಪಕ್ಕದಲ್ಲಿ ಡಿಪ್ಸ್ ಹೊಡೆಯುತ್ತಾ ಹೀರೋ ಫೋಸ್ ಕೊಟ್ಟಿದ್ದಾರೆ. ಅದಕ್ಕೆ ಸೌಂದರ್ಯ ಹೀರೋ ಆಗಿ ಕಾಣಿಸಿಕೊಂಡು ಏನು ಪ್ರಯೋಜನ? ಅಂತಾರೆ. ಅದಕ್ಕೆ ಯಶಸ್ ಜತೆಗೊಬ್ರು ಹೀರೋಯಿನ್ ಇರಬೇಕಲ್ವಾ? ಎಂದು ಲವ್ ಕಹಾನಿ ಶುರುವಾಗುತ್ತದೆ.

ಇದರ ನಡುವೆ ಬಿಗ್‌ಬಾಸ್ ಟಾಸ್ಕ್‌ವೊಂದನ್ನು ಕೊಟ್ಟಿದ್ದು, ಪುರುಷರೆಲ್ಲರೂ ಗುಲಾಬಿ ಹೂ ಹಿಡಿದು ನಿಂತಿರುತ್ತಾರೆ. ಈ ಪೈಕಿ ಬಿಗ್‌ಬಾಸ್ ಹೇಳುವಂತೆ ನಿಮಗಿಷ್ಟವಾದ ಯಾರಾದರೊಬ್ಬರ ಕೈಯಿಂದ ಗುಲಾಬಿ ತೆಗೆದುಕೊಳ್ಳಬೇಕು. ಆಗ ಸೌಂದರ್ಯ ನಾಚಿಕೆಯಿಂದ ಯಶಸ್ ಕೈಯಿಂದ ಗುಲಾಬಿ ಪಡೆದುಕೊಂಡಿದ್ದು, ಮನೆಯಲ್ಲಿ ಹೊಸ ಪ್ರೇಮಕಾವ್ಯವೊಂದು ಶುರುವಾದಂತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.