ಕ್ರೀಡೆ

WWE ಸೂಪರ್ ಸ್ಟಾರ್ John Cena ನಿವೃತ್ತಿ ಘೋಷಣೆ; 2025 ಕೊನೇ ವರ್ಷ!

‘ನೆವರ್‌ ಗೀವ್‌ ಅಪ್‌’ ಎಂಬ ಘೋಷವಾಕ್ಯದೊಂದಿಗೆ ರಿಂಗ್ ನಲ್ಲಿ ಕಾದಾಡುತ್ತಿದ್ದ ಮೆಗಾ ಸ್ಟಾರ್ John Cena ಇದೀಗ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

WWE ಸೂಪರ್ ಸ್ಟಾರ್ John Cena ನಿವೃತ್ತಿ ಘೋಷಣೆ; 2025 ಕೊನೇ ವರ್ಷ!
ರೆಸ್ಲರ್ ಜಾನ್ ಸೀನಾ ನಿವೃತ್ತಿ
Published On :

ನ್ಯೂಯಾರ್ಕ್​: ‘ನೆವರ್‌ ಗೀವ್‌ ಅಪ್‌’ ಎಂಬ ಘೋಷವಾಕ್ಯದೊಂದಿಗೆ ರಿಂಗ್ ನಲ್ಲಿ ಕಾದಾಡುತ್ತಿದ್ದ ಮೆಗಾ ಸ್ಟಾರ್ John Cena ಇದೀಗ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಹೌದು.. ಡಬ್ಲ್ಯೂ ಡಬ್ಲ್ಯೂಇ(WWE) ಬಾಕ್ಸಿಂಗ್​ ರಿಂಗ್​ನಲ್ಲಿ 16 ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದ್ದ ಖ್ಯಾತ ರೆಸ್ಲರ್​ ಜಾನ್​ ಸೀನ(John Cena) ತಮ್ಮ ರೆಸ್ಲಿಂಗ್ ವೃತ್ತಿ ಜೀವನಕ್ಕೆ ತೆರೆ ಎಳೆಯಲು ಸಿದ್ಧರಾಗಿದ್ದಾರೆ. ಟೊರೊಂಟೋದಲ್ಲಿ ನಡೆದ ಮನಿ​ ಇನ್​ ದಿ ಬ್ಯಾಂಕ್​ ಟೂರ್ನಿಯಲ್ಲಿ ತಮ್ಮ ನಿವೃತ್ತಿ ಪ್ರಕಟಿಸಿದ್ದಾರೆ.

‘ದಿ ಲಾಸ್ಟ್ ಟೈಮ್ ಈಸ್ ನೌ” ಎಂದು ಬರೆದ ಟಿ-ಶರ್ಟ್​ ಧರಿಸಿ ಸೀನಾ ತನ್ನ ನಿವೃತ್ತಿಯನ್ನು ಪ್ರಕಟಿಸಿದ್ದು, ಈ ವರ್ಷ ನಡೆಯುವ 2024ರ ರಾಯಲ್ ರಂಬಲ್, ಎಲಿಮಿನೇಶನ್ ಚೇಂಬರ್ ಮತ್ತು ರಸಲ್ ಮೇನಿಯಾ 41ರಲ್ಲಿ ಜಾನ್ ಸೀನಾ ಭಾಗಿಯಾಗಲಿದ್ದಾರೆ ಎಂದು ಮೂಲಗಳ ತಿಳಿಸಿವೆ.

ಜಾನ್ ಸೀನಾ ಮುಂದಿನ ವರ್ಷ ನಿವೃತ್ತಿಯಾಗಲಿದ್ದು, 2002ರಲ್ಲಿ ಡಬ್ಲ್ಯೂ ಡಬ್ಲ್ಯೂಇ ಕಂಪನಿಗೆ ಸೇರಿದ್ದ ಜಾನ್ ಸೀನ 13 ಬಾರಿ ಡಬ್ಲ್ಯೂ ಡಬ್ಲ್ಯೂಇ ಟೈಟಲ್, ಮೂರು ಬಾರಿ ಹೆವಿವೈಟ್ ಚಾಂಪಿಯನ್ ಶಿಪ್ ಮತ್ತು ಎರಡು ಬಾರಿ ರಾಯಲ್ ರಂಬಲ್ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.