ಕ್ರೀಡೆ

ಬ್ರೆಜಿಲ್ ಮಣಿಸಿದ ಲಿಯೋನೆಲ್ ಮೆಸ್ಸಿಯ ಅರ್ಜೆಂಟೀನಾ ತಂಡಕ್ಕೆ ಕೋಪಾ ಅಮೇರಿಕಾ ಪ್ರಶಸ್ತಿ

ಶನಿವಾರ ನಡೆದ ಕೋಪಾ ಅಮೇರಿಕಾ ಫೈನಲ್‌ನಲ್ಲಿ ಲಿಯೋನೆಲ್ ಮೆಸ್ಸಿಯ ಅರ್ಜೆಂಟೀನಾ 1-0 ಗೋಲುಗಳಿಂದ ಬ್ರೆಜಿಲ್ ತಂಡವನ್ನು ಮಣಿಸಿ 28 ವರ್ಷಗಳಲ್ಲಿ ರಾಷ್ಟ್ರೀಯ ತಂಡದ ಮೊದಲ ಪ್ರಶಸ್ತಿ ಹಾಗೂ ಪ್ರಮುಖ ಅಂತರರಾಷ್ಟ್ರೀಯ ಟ್ರೋಫಿಯನ್ನು ಗೆದ್ದುಕೊಂಡಿತು.

ಬ್ರೆಜಿಲ್ ಮಣಿಸಿದ ಲಿಯೋನೆಲ್ ಮೆಸ್ಸಿಯ ಅರ್ಜೆಂಟೀನಾ ತಂಡಕ್ಕೆ ಕೋಪಾ ಅಮೇರಿಕಾ ಪ್ರಶಸ್ತಿ
ಲಿಯೋನೆಲ್ ಮೆಸ್ಸಿ
Published On :

ರಿಯೋ ಡಿ ಜನೈರೋ: ಶನಿವಾರ ನಡೆದ ಕೋಪಾ ಅಮೇರಿಕಾ ಫೈನಲ್‌ನಲ್ಲಿ ಲಿಯೋನೆಲ್ ಮೆಸ್ಸಿಯ ಅರ್ಜೆಂಟೀನಾ 1-0 ಗೋಲುಗಳಿಂದ ಬ್ರೆಜಿಲ್ ತಂಡವನ್ನು ಮಣಿಸಿ 28 ವರ್ಷಗಳಲ್ಲಿ ರಾಷ್ಟ್ರೀಯ ತಂಡದ ಮೊದಲ ಪ್ರಶಸ್ತಿ ಹಾಗೂ ಪ್ರಮುಖ ಅಂತರರಾಷ್ಟ್ರೀಯ ಟ್ರೋಫಿಯನ್ನು ಗೆದ್ದುಕೊಂಡಿತು.

ಪಂದ್ಯ ಮುಗಿದಾಗ, ಕಣ್ಣೀರಾಗಿದ್ದ ಮೆಸ್ಸಿಯನ್ನು ಅವರ ತಂಡದ ಸದಯರು ಗಾಳಿಯಲ್ಲಿ ತೇಲಿಸಿದ್ದಾರೆ.

ರಿಯೊ ಡಿ ಜನೈರೊದ ಮರಕಾನಾ ಕ್ರೀಡಾಂಗಣದಲ್ಲಿ ಅರ್ಜೆಂಟೀನಾ ಗೆಲುವಿನ ಗೋಲು 22 ನೇ ನಿಮಿಷದಲ್ಲಿ ರೊಡ್ರಿಗೋ ಡಿ ಪಾಲ್, ಏಂಜೆಲ್ ಡಿ ಮಾರಿಯಾ ಅವರಿಗೆ ಲಾಂಗ್ ಪಾಸ್ ನೀಡಿದ ನಂತರ ಬಂದಿದೆ. ಪಂದ್ಯಾವಳಿಯಲ್ಲಿ ಬ್ರೆಜಿಲ್ ಬಿಟ್ಟುಕೊಟ್ಟ ಮೂರನೇ ಗೋಲು ಇದಾಗಿತ್ತು.

ಫೈನಲ್‌ನಲ್ಲಿ ಮೆಸ್ಸಿಯ ಪ್ರದರ್ಶನವು ಪಂದ್ಯಾವಳಿಯ ಹಿಂದಿನ ಪಂದ್ಯಗಳಂತೆ ಪ್ರಭಾವಶಾಲಿಯಾಗಿ ಮೂಡಿಬರಲಿಲ್ಲ. ಅವರು 88 ನೇ ನಿಮಿಷದಲ್ಲಿ ಸ್ಪಷ್ಟ ಅವಕಾಶವನ್ನು ಪಡೆದರು,ಆದರೆ ಬ್ರೆಜಿಲ್‌ನ ಗೋಲ್‌ಕೀಪರ್ ಅವರನ್ನು ತಡೆದರು

ಆದಾಗ್ಯೂ ಜಗದ್ವಿಖ್ಯಾತ ಕ್ರೀಡಾತಾರೆ ತನ್ನ ವೃತ್ತಿಜೀವನದುದ್ದಕ್ಕೂ ಎಲ್ಲಾ ವಿವಾದದ ನಂತರ ರಾಷ್ಟ್ರೀಯ ತಂಡಕ್ಕಾಗಿ ಆಡುವ ಪರಿಣಾಮಕಾರಿತ್ವದ ಬಗ್ಗೆ ಸ್ವಲ್ಪ ಸಮಾಧಾನ ಹೊಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.