ವಿಂಬಲ್ಡನ್ 2018: ದಾಖಲೆಯ ಮ್ಯಾರಥಾನ್ ಸೆಮಿಫೈನಲ್ ಕೊನೆಗೂ ಅಂತ್ಯ, ಕೆವಿನ್ ಆ್ಯಂಡರ್ಸನ್ ಫೈನಲ್ ಗೆ
ವಿಂಬಲ್ಡನ್ 2018ರ ಟೆನ್ನಿಸ್ ಟೂರ್ನಿಯಲ್ಲಿ ಕೆವಿನ್ ಆ್ಯಂಡರ್ಸನ್ ಮತ್ತು ಜಾನ್ ಇಸ್ನರ್ ನಡುವೆ ನಡೆದ ಪುರುಷರ ಸೆಮಿಫೈನಲ್ಸ್ ಪಂದ್ಯ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದು, ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯ ಬರೊಬ್ಬರಿ ಆರೂವರೆ ಗಂಟೆ ಕಾಲ ನಡೆದಿದೆ.

Published On :
ಲಂಡನ್: ವಿಂಬಲ್ಡನ್ 2018ರ ಟೆನ್ನಿಸ್ ಟೂರ್ನಿಯಲ್ಲಿ ಕೆವಿನ್ ಆ್ಯಂಡರ್ಸನ್ ಮತ್ತು ಜಾನ್ ಇಸ್ನರ್ ನಡುವೆ ನಡೆದ ಪುರುಷರ ಸೆಮಿಫೈನಲ್ಸ್ ಪಂದ್ಯ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದು, ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯ ಬರೊಬ್ಬರಿ ಆರೂವರೆ ಗಂಟೆ ಕಾಲ ನಡೆದಿದೆ.
ಈ ಮ್ಯಾರಥಾನ್ ಪಂದ್ಯದಲ್ಲಿ ಕೆವಿನ್ ಆ್ಯಂಡರ್ಸನ್ ತಮ್ಮ ಪ್ರತಿಸ್ಪರ್ಧಿ ಜಾನ್ ಇಸ್ನರ್ ಅವರನ್ನು 7-6, 6-7, 6-7, 6-4, 26-24 ನೇರ ಸೆಟ್ ಗಳ ಅಂತರದಲ್ಲಿ ಸೋಲಿಸಿದ್ದು, ವಿಂಬಲ್ಡನ್ ಪುರುಷರ ವಿಭಾಗದ ಫೈನಲ್ ಪ್ರವೇಶಿಸಿದ್ದಾರೆ.
ಒಟ್ಟು ಐದು ಸೆಟ್ ಗಳ ಈ ಪಂದ್ಯದಲ್ಲಿ ಕೆವಿನ್ ಆ್ಯಂಡರ್ಸನ್ 7-6, 6-7, 6-7, 6-4, 26-24 ನೇರ ಸೆಟ್ ಗಳ ಅಂತರದಲ್ಲಿ ಜಾನ್ ಇಸ್ನರ್ ಅವರನ್ನು ಮಣಿಸಿದರು. ಇಡೀ ಟೂರ್ನಿ ಮಾತ್ರವಲ್ಲದೆ ಟೆನ್ನಿಸ್ ಇತಿಹಾಸದಲ್ಲೇ ದಾಖಲಾದ ಅಂತ್ಯ ಸುಧೀರ್ಘ ಪಂದ್ಯ ಇದಾಗಿದೆ.
ಮತ್ತೊಂದು ಸೆಮಿಫೈನಲ್ ನಲ್ಲಿ ರಾಫೆಲ್ ನಡಾಲ್ ಮತ್ತು ನೊವಾಕ್ ಜಾಕೋವಿಕ್ ಸೆಣಸುತ್ತಿದ್ದು, ಈ ಪಂದ್ಯದಲ್ಲಿ ಗೆದ್ದವರು ಕೆವಿನ್ ಆ್ಯಂಡರ್ಸನ್ ವಿರುದ್ಧ ಫೈನಲ್ ನಲ್ಲಿ ಸೆಣಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
SportsTennisಕ್ರೀಡೆಟೆನ್ನಿಸ್Londonಲಂಡನ್Wimbledon 2018ವಿಂಬಲ್ಡನ್ 2018Kevin Andersonಕೆವಿನ್ ಆ್ಯಂಡರ್ಸನ್John Isnerಜಾನ್ ಇಸ್ನರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


