ರೋಜರ್ ಫೆಡರರ್ ಮುಡಿಗೆ ಆಸ್ಟ್ರೇಲಿಯನ್ ಓಪನ್ ಗರಿ!
ತೀವ್ರ ಕುತೂಹಲ ಕೆರಳಿಸಿದ್ದ ಪ್ರಸಕ್ತ ಸಾಲಿನ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ನಲ್ಲಿ ಸ್ವಿಸ್ ಆಟಗಾರ ರೋಜರ್ ಫೆಡರರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಮೆಲ್ಬೋರ್ನ್: ತೀವ್ರ ಕುತೂಹಲ ಕೆರಳಿಸಿದ್ದ ಪ್ರಸಕ್ತ ಸಾಲಿನ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ನಲ್ಲಿ ಸ್ವಿಸ್ ಆಟಗಾರ ರೋಜರ್ ಫೆಡರರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸ್ಪೈನ್ ನ ಬಲಿಷ್ಠ ರಾಫೆಲ್ ನಡಾಲ್ ಅವರನ್ನು ಮಣಿಸುವ ಮೂಲಕ ತಮ್ಮ 18ನೇ ಗ್ರಾಂಡ್ ಸ್ಲ್ಯಾಮ್ ಅನ್ನು ಮುಡಿಗೇರಿಸಿಕೊಂಡಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಫೈನಲ್ ಪಂದ್ಯದಲ್ಲಿ ಫೆಡರರ್ -ನಡಾಲ್ ರನ್ನು 6-4, 3-6, 6-1, 3-6, 6-3 ನೇರ ಸೆಟ್ ಗಳ ಅಂತರದಿಂದ ಮಣಿಸಿ ವಿಜಯ ಮಾಲೆ ಧರಿಸಿದ್ದಾರೆ.
ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯ ಬರೊಬ್ಬರಿ 5 ಸೆಟ್ ಗಳ ವರೆಗೆ ನಡೆದಿತ್ತು. ಎರಡನೇ ಸೆಟ್ ನಲ್ಲಿ ಹಿನ್ನಡೆ ಕಂಡಿದ್ದ ಫೆಡರರ್ ಬಳಿಕ ನಡಾಲ್ ವಿರುದ್ಧ ತಿರುಗಿಬಿದ್ದು ಮೂರನೇ ಸೆಟ್ ಅನ್ನು ಬರೊಬ್ಬರಿ 6-1 ಅಂತರದಲ್ಲಿ ಜಯಿಸಿದರು. ಬಳಿಕ ನಾಲ್ಕನೇ ಸೆಟ್ ನಲ್ಲಿ ಫೆಡರರ್ ವಿರುದ್ಧ ತಿರುಗಿಬಿದ್ದ ನಡಾಲ್ ಆ ಸೆಟ್ ಅನ್ನು 6-3ರಿಂದ ವಶಪಡಿಸಿಕೊಂಡರು. ಆದರೆ ನಿರ್ಣಾಯಕ ಹಂತದಲ್ಲಿ ಮೇಲುಗೈ ಸಾಧಿಸಿದ ಫೆಡರರ್ ಐದು ಮತ್ತು ಅಂತಿಮ ಸೆಟ್ ನಲ್ಲಿ 6-3ರಿಂದ ಭರ್ಜರಿ ಜಯ ಸಾಧಿಸಿದರು.
ಆ ಮೂಲಕ ತಮ್ಮ 18ನೇ ಗ್ರ್ಯಾಂಡ್ ಸ್ಲಾಮ್ ಅನ್ನು ಫೆಡರರ್ ಮುಡಿಗೇರಿಸಿಕೊಂಡರು. ಅಲ್ಲದೆ 5ನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದುಕೊಂಡ ಕೀರ್ತಿಗೆ ಫೆಡರರ್ ಭಾಜನರಾದರು.
ಆಸ್ಟ್ರೇಲಿಯನ್ ಓಪನ್ ನಲ್ಲಿ 8 ವರ್ಷಗಳ ಬಳಿಕ ಮದಗಜಗಳ ಸೆಣಸಾಟ
ಟೆನ್ನಿಸ್ ರಂಗದಲ್ಲೇ ಫೆಡರರ್ ಮತ್ತು ನಡಾಲ್ ಅತ್ಯಂತ ಪ್ರಬಲ ಆಟಗಾರರು. ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಫೈನಲ್ ಇತಿಹಾಸದಲ್ಲಿ ಎಂಟು ವರ್ಷಗಳ ಬಳಿಕ ಸೆಣಸಾಟಕ್ಕಿಳಿದಿದ್ದ ಇಬ್ಬರೂ ಶ್ರೇಷ್ಠ ಆಟಗಾರರ ಪ್ರದರ್ಶನ ಸಾಕಷ್ಟು ಕುತೂಹಲ ಮೂಡಿಸಿತ್ತು. ಐದನೇ ಸೆಟ್ನಲ್ಲಿ ಟ್ರೋಫಿ ಎತ್ತು ಹಿಡಿಯಲಿಕ್ಕಾಗಿ ಭಾರಿ ಕಾದಾಟವೇ ನಡೆಯಿತು. ಅಂತಿಮವಾಗಿ ರೋಜರ್ ಫೆಡರರ್ ಅತ್ಯುತ್ತಮ ಸರ್ವ್ ಮೂಲಕ ಜಯ ಸಾಧಿಸಿ ಪ್ರಶಸ್ತಿ ಸಂಭ್ರಮ ಅನುಭವಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


