ನರಸಿಂಗ್ ಯಾದವ್ ಗೆ 4 ವರ್ಷ ನಿಷೇಧ; ಒಲಿಂಪಿಕ್ಸ್ ಕನಸು ನುಚ್ಚುನೂರು
ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ನಡೆಸಿದ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ವಿವಾದ ಸೃಷ್ಟಿಸಿದ್ದ ಭಾರತದ ಕುಸ್ತಿ ಪಟು ನರಸಿಂಗ್ ಯಾದವ್ ಅವರನ್ನು ಬರೊಬ್ಬರಿ ನಾಲ್ಕು ವರ್ಷಗಳ ಕಾಲ ಕುಸ್ತಿ ಕ್ರೀಡೆಯಿಂದ ನಿಷೇಧ ಹೇರಲಾಗಿದೆ.

ರಿಯೋ ಡಿ ಜನೈರೋ: ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ನಡೆಸಿದ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ವಿವಾದ ಸೃಷ್ಟಿಸಿದ್ದ ಭಾರತದ ಕುಸ್ತಿ ಪಟು ನರಸಿಂಗ್ ಯಾದವ್ ಅವರನ್ನು ಬರೊಬ್ಬರಿ ನಾಲ್ಕು ವರ್ಷಗಳ ಕಾಲ ಕುಸ್ತಿ ಕ್ರೀಡೆಯಿಂದ ನಿಷೇಧ ಹೇರಲಾಗಿದೆ.
ವಿವಾದಗಳ ಮೂಲಕವೇ 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುವ ಕನಸು ಕಾಣುತ್ತಿದ್ದ ನರಸಿಂಗ್ ಯಾದವ್ ಕನಸು ನುಚ್ಚು ನೂರಾಗಿದ್ದು, ಕೇವಲ ಹಾಲಿ ರಿಯೋ ಒಲಿಂಪಿಕ್ಸ್ ಮಾತ್ರವಲ್ಲೇ ಮುಂಬರುವ 4 ವರ್ಷಗಳ ಕಾಲ ಅವರನ್ನು ಕುಸ್ತಿಯಿಂದ ನಿಷೇಧಹೇರಲಾಗಿದೆ. ರಿಯೊ ಒಲಿಪಿಂಕ್ಸ್ ಪಂದ್ಯವನ್ನಾಡಲು ಕ್ಷಣಗಣನೆ ಆರಂಭವಾಗಿರುವಂತೆಯೇ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ಸ್ ಸಂಸ್ಥೆ (ಸಿಎಎಸ್) ನರಸಿಂಗ್ ಯಾದವ್ ಅವರ ವಿಚಾರಣೆ ನಡೆಸಿ ಅವರಿಗೆ ನಾಲ್ಕು ವರ್ಷಗಳ ನಿಷೇಧ ಹೇರಿದೆ.
ಈ ಹಿಂದೆ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ನರಸಿಂಗ್ ಯಾದವ್ ಗೆ ಕ್ಲೀನ್ ಚಿಟ್ ನೀಡಿದ್ದ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ ನಿರ್ಣಯವನ್ನು ಅಂತಾರಾಷ್ಟ್ರೀಯ ಉದ್ದೀಪಮ ಮದ್ದು ತಡೆ ಘಟಕ ಅಂತಾರಾಷ್ಟ್ಕೀಯ ಕ್ರೀಡಾ ವ್ಯಾಜ್ಯಗಳ ನ್ಯಾಯಾಲಯ ಸಿಎಎಸ್ ನಲ್ಲಿ ಪ್ರಶ್ನಿಸಿತ್ತು. ಈ ಹಿನ್ನಲೆಯಲ್ಲಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ನರಸಿಂಗ್ ಯಾದವ್ ಅವರ ಮೇಲೆ ನಿಷೇಧ ಹೇರಿದೆ. ಸತತ ನಾಲ್ಕು ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ ಉದ್ದೀಪನ ಮದ್ದು ಪತ್ತೆ ಅಂಶಕ್ಕೆ ಸಂಬಂಧಿಸಿದಂತೆ ನರಸಿಂಗ್ ಯಾದವ್ ನೀಡಿದ ಸಮರ್ಥನೆಗಳನ್ನು ಮತ್ತು ಉತ್ತರವನ್ನು ಸಿಎಎಸ್ ಸಾರಾಸಗಟಾಗಿ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.
ಈ ಹಿನ್ನಲೆಯಲ್ಲಿ ವಿವಾದಿತ ಭಾರತದ ಕುಸ್ತಿಪಟು ಅಥ್ಲೀಟ್ ನರಸಿಂಗ್ ಯಾದವ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಇಂದಿನಿಂದಲೇ ಜಾರಿಯಾಗುವಂತೆ ನಾಲ್ಕು ವರ್ಷಗಳ ನಿಷೇಧ ಹೇರಲಾಗಿದೆ.
ಕಳೆದ ಜೂನ್ 25ರಂದು ನಾಡಾ ನಡೆಸಿದ ಉದ್ದೀಪನ ಮದ್ದು ತಡೆಯಲ್ಲಿ ನರಸಿಂಗ್ ಯಾದವ್ ರಕ್ತದ ಮಾದರಿಯಲ್ಲಿ ನಿಷೇಧಿತ ಉದ್ದೀಪನ ಮದ್ದಿನ ಅಂಶ ಕಂಡುಬಂದಿತ್ತು. ಈ ಹಿನ್ನಲೆಯಲ್ಲಿ ಅವರನ್ನು ರಿಯೋ ಒಲಿಂಪಿಕ್ಸ್ ನಿಂದ ಕೈ ಬಿಡಲಾಗಿತ್ತು. ಭಾರತದ ಮತ್ತೋರ್ವ ಕುಸ್ತಿ ಪಟು ಸುಶೀಲ್ ಕುಮಾರ್ ಅವರನ್ನು ಹಿಂದಿಕ್ಕಿ ರಿಯೋ ಒಲಿಂಪಿಕ್ಸ್ ಗೆ ಸ್ಥಾನಗಿಟ್ಟಿಸಿದ್ದ ನರಸಿಂಗ್ ಯಾದವ್ ಬಳಿಕ ಡೋಪಿಂಗ್ ಟೆಸ್ಟ್ ಪ್ರಕರಣದಿಂದ ವಿವಾದಕ್ಕೀಡಾಗಿದ್ದರು. ಬಳಿಕ ನ್ಯಾಯಾಲಯದ ಮೊರೆ ಹೋಗಿದ್ದ ನರಸಿಂಗ್ ಯಾದವ್ ಪರವಾಗಿ ನ್ಯಾಯಾಲಯ ತೀರ್ಪು ನೀಡಿತ್ತು. ಅಲ್ಲದೆ ನಾಡಾ ಕೂಡ ನರಸಿಂಗ್ ಯಾದವ್ ಗೆ ಕ್ಲೀನ್ ಚಿಟ್ ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


