ರಿಯೋ ಒಲಿಂಪಿಕ್ಸ್: ಟೆನ್ನಿಸ್ ಸೆಮೀಸ್ ನಲ್ಲಿ ನಿರಾಸೆ ಮೂಡಿಸಿದ ಸಾನಿಯಾ-ಬೋಪಣ್ಣ
ರಿಯೊ ಒಲಿಂಪಿಕ್ಸ್ ನಲ್ಲಿ ಟೆನ್ನಿಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿ ಬೆಳ್ಳಿ ಅಥವಾ ಚಿನ್ನದ ಪದಕದ ಆಸೆ ಹುಟ್ಟಿಸಿದ್ದ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿ ನಿರಾಸೆ ಮೂಡಿಸಿದ್ದು, ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸೋಲನ್ನು ಅನುಭವಿಸಿದ್ದಾರೆ.

ರಿಯೋ ಡಿ ಜನೈರೋ: ರಿಯೊ ಒಲಿಂಪಿಕ್ಸ್ ನಲ್ಲಿ ಟೆನ್ನಿಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿ ಬೆಳ್ಳಿ ಅಥವಾ ಚಿನ್ನದ ಪದಕದ ಆಸೆ ಹುಟ್ಟಿಸಿದ್ದ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿ ನಿರಾಸೆ ಮೂಡಿಸಿದ್ದು, ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸೋಲನ್ನು ಅನುಭವಿಸಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಮೆರಿಕದ ವೀನಸ್ ವಿಲಿಯಮ್ಸ್ ಹಾಗೂ ರಾಮ್ ಜೋಡಿಯನ್ನು ಎದುರಿಸಿದ್ದ ಭಾರತದ ಜೋಡಿ 6-2, 2-6, 3-10 ನೇರ ಸೆಟ್ ಗಳ ಅಂತರದಿಂದ ಸೋಲುಕಂಡಿದೆ. ಆ ಮೂಲಕ ಭಾರತದ ಚಿನ್ನ ಅಥವಾ ಬೆಳ್ಳಿಪದಕದ ಆಸೆಗೆ ನೀರಿರೆಚಿದ್ದಾರೆ. ಮೊದಲ ಸೆಟ್ ನಲ್ಲಿ ಬಲಾಢ್ಯ ಅಮೆರಿಕ ಜೋಡಿಯನ್ನು 6-2 ಅಂತರದಿಂದ ಮೊದಲ ಸೆಟ್ ಅನ್ನು ತಮ್ಮದಾಗಿಸಿಕೊಂಡಿದ್ದ ಈ ಜೋಡಿ 2ನೇ ಸೆಟ್ ನಲ್ಲಿ 2-6 ಅಂಕಗಳ ಮೂಲಕ ದಿಢೀರ್ ಕುಸಿತಕಂಡಿತು.
ಪ್ರಬಲ ಹೋರಾಟದ ನಡುವೆಯೂ ಭಾರತೀಯ ಜೋಡಿ ಮೇಲೆ ಸವಾರಿ ಮಾಡಿದ ಅಮೆರಿಕದ ವೀನಸ್ ವಿಲಿಯಮ್ಸ್ ಹಾಗೂ ರಾಮ್ ಜೋಡಿ 3ನೇ ಸೆಟ್ ಅನ್ನು 3-10 ಅಂಕಗಳ ಅಂತರದಲ್ಲಿ ಜಯಿಸುವ ಮೂಲಕ ಪಂದ್ಯವನ್ನು ತಮ್ಮದಾಗಿಸಿಕೊಂಡರು. ಅಲ್ಲದೆ ಫೈನಲ್ ಪ್ರವೇಶಿಸಿದರು.
ಭಾರತದ ಪದಕದ ಆಸೆ ಜೀವಂತ
ಸೆಮಿಫೈನಲ್ ನಲ್ಲಿ ಸಾನಿಯಾ ಹಾಗೂ ರೋಹನ್ ಬೋಪಣ್ಣ ಜೋಡಿ ಸೋಲು ಕಂಡಿದ್ದರೂ ಭಾರತಕ್ಕೆ ಕಂಚಿನ ಪದಕ ಒಲಿಯುವ ಸಾಧ್ಯತೆ ಇದೆ. ಏಕೆಂದರೆ ಸೆಮಿಫೈನಲ್ ಸೋತ ಭಾರತದ ಈ ಜೋಡಿ ಕಂಚಿನ ಪದಕಕ್ಕಾಗಿ ಸೆಣಸಲಿದ್ದಾರೆ. ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪನಾಕ್ ಮತ್ತು ಲುಸಿ ಹ್ರಡೆಕ್ಕಾ ಅವರ ವಿರುದ್ಧ ಸಾನಿಯಾ-ರೋಹನ್ ಜೋಡಿ ಸೆಣಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


